ಬಸವ ಜಯಂತಿ: ಕೂಡಲಸಂಗಮಕ್ಕೆ 25,000 ಜನ, ಎಲ್ಲಾ ಸಚಿವರು ಬರುವ ನಿರೀಕ್ಷೆ

ಮುಖ್ಯಮಂತ್ರಿಯಿಂದ ಚಾಲನೆ; ಚಿಂತನ ಗೋಷ್ಠಿ; ಸಾಂಸ್ಕೃತಿಕ ನಾಯಕ ಪುಸ್ತಕ ಬಿಡುಗಡೆ; ರಥ ಯಾತ್ರೆ; 1.5 ಕೋಟಿ ಅನುಧಾನ

ಕೂಡಲಸಂಗಮ

ಬಸವ ಜಯಂತಿಯ ಎರಡು ದಿನಗಳ ಕಾಲ ಕೂಡಲಸಂಗಮದಲ್ಲಿ ‘ಅನುಭವ ಮಂಟಪ ಬಸವಾದಿ ಶರಣರ ವೈಭವ’ ಕಾರ್ಯಕ್ರಮದಲ್ಲಿ ಕಾರ್ಯಕ್ರಮಕ್ಕೆ ೨೫ ಸಾವಿರ ಜನ ಸೇರುವ ನಿರೀಕ್ಷೆ ಇದೆ. ಜೊತೆಗೆ ಸಚಿವ ಸಂಪುಟದ ಎಲ್ಲ ಸಚಿವರೂ, ಶಾಸಕರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.

ಭಾನುವಾರ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಎಪ್ರಿಲ್ ೨೯, ೩೦ ನಡೆಯುವ ಕಾರ್ಯಕ್ರಮಗಳಿಗೆ ೧.೫ ಕೋಟಿ ಅನುದಾನವು ಇದೆ. ಕಾರ್ಯಕ್ರಮದ ಯಶಸ್ವಿಗಾಗಿ ೧೧ ಸಮಿತಿಗಳನ್ನು ಮಾಡಿದ್ದೆವೆ. ಎಪ್ರಿಲ್ ೧೬ ರಂದು ಸ್ತಬ್ದ ಚಿತ್ರದ ರಥಕ್ಕೆ ಬೆಂಗಳೂರಿನಲ್ಲಿ ಚಾಲನೆ ನೀಡಲಾಗುವುದು, ನಂತರ ಜಿಲ್ಲೆಯಾದ್ಯಂತ ಸಂಚರಿಸಿ ಪ್ರಚಾರ ಮಾಡಲಾಗುವುದು.

೨೯ ರಂದು ೪ ಚಿಂತನಗೋಷ್ಠಿಗಳು ನಡೆಯುತ್ತವೆ, ರಾತ್ರಿ ಬಸವಣ್ಣನವರ ಕುರಿತು ನಾಟಕ ಇರುವುದು, ೩೦ ರಂದು ಮುಖ್ಯಮಂತ್ರಿಗಳು ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣ ಪುಸ್ತಕ ಬಿಡುಗಡೆ ಆಗುತ್ತದೆ, ಎಂದು ಹೇಳಿದರು.

ಹಿಂದು, ಲಿಂಗಾಯತ, ಮುಸ್ಲಿಂ, ಬೌದ್ಧ, ಜೈನ ಧರ್ಮ ಗುರುಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು ಎಂದರು.

ಕರ್ನಾಟಕ ಸಾಂಸ್ಕೃತಿ ನಾಯಕ ಎಂದು ಘೋಷಣೆಗೆ ಸಿಮೀತವಾಗದೇ ಆಚರಣೆಗೆ ತರಬೇಕು, ಬಸವಾದಿ ಶರಣರ ತತ್ವಗಳು ಇಂದಿನ ಯುವ ಜನಾಂಗಕ್ಕೆ ತಲುಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಇಂದು ರಾಜ್ಯದಲ್ಲಿ ಬಸವಣ್ಣನವರ ತತ್ವಗಳ ಬಗ್ಗೆ ಚರ್ಚೆ ಆಗಬೇಕು ಅದು ಬಿಟ್ಟು ಬೇರೆ ಬೇರೆ ಚರ್ಚೆಗಳು ನಡೆಯುತ್ತಿವೆ.

ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಮಾತನಾಡಿ, ಜನರು ಸಾಮರಸ್ಯದಿಂದ ಬದುಕಲು ಬಸವಾದಿ ಶರಣರ ಚಿಂತನೆಗಳು ಅಗತ್ಯ ಇದ್ದು, ಅನುಷ್ಠಾನಕ್ಕೆ ತರುವ ಉದ್ಧೇಶದಿಂದ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಈ ಭಾಗದ ಬಸವ ಭಕ್ತರ ಬಹುದಿನದ ಬೇಡಿಕೆ ಇದ್ದಾಗಿತ್ತು, ಸರ್ಕಾರ ಈಡೇರಿಸಿದೆ. ಈ ಕಾರ್ಯಕ್ರಮ ಪ್ರತಿ ವರ್ಷ ನಡೆಯಬೇಕು, ಈ ಕುರಿತು ಸಚಿವ ಶಿವರಾಜ ತಂಗಡಗಿ ಅವರೊಂದಿಗೆ ಮಾತನಾಡಿದ್ದೇನೆ ಎಂದರು.

ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಮಾತನಾಡಿ, ಬಸವ ಜಯಂತಿ ಎಂದರೇ ಮಾನವ ಹಕ್ಕುಗಳ ಪ್ರತಿಪಾದನೆ ಮಾಡಿದ ದಿನ, ಕೂಡಲಸಂಗಮದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದಕ್ಕೆ ಸಂತಸವಾಗಿದೆ ಎಂದರು.

ಇಲಕಲ್ಲ ವಿಜಯಮಹಾಂತೇಶ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ, ಶಿರೂರದ ಬಸವಲಿಂಗ ಸ್ವಾಮೀಜಿ, ಮೈಸೂರು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಸಾಹಿತಿಗಳಾದ ರಂಜಾನ ದರ್ಗಾ, ವೀರಣ್ಣ ರಾಜೂರ, ಮೀನಾಕ್ಷಿ ಬಾಳಿ, ಬಿ.ಟಿ. ಲಲಿತಾನಾಯಕ ಮುಂತಾದವರು ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/FEOgQepEXSP8R5OtHvcD7O

Share This Article
1 Comment
  • ಕೇವಲ ಇಪ್ಪತ್ತು ಸಾವಿರ,,, ಲಕ್ಷಾಂತರ ಜನ ಸೇರಬೇಕು

Leave a Reply

Your email address will not be published. Required fields are marked *