ಬಸವ ಕಲ್ಯಾಣದಲ್ಲಿ ಬಸವ ಉತ್ಸವ ಆಚರಿಸಲು ಖಂಡ್ರೆಗೆ ಮನವಿ

ಬಸವ ಮೀಡಿಯಾ
ಬಸವ ಮೀಡಿಯಾ

‘ಈ ವರ್ಷ ಅಮೃತ ಮಹೋತ್ಸವವಿರುವ ಶ್ರೀ ಬಸವೇಶ್ವರರ ಜಾತ್ರೆಯ ಸಮಯದಲ್ಲಿಯೇ ಬಸವ ಉತ್ಸವವನ್ನು ಆಚರಿಸಿ’

ಭಾಲ್ಕಿ

ಈ ವರ್ಷದಿಂದ ಬಸವ ಉತ್ಸವ ನಡೆಸಲು ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಈಶ್ವರ ಖಂಡ್ರೆ ಅವರಿಗೆ ಹಲವಾರು ಬಸವಪರ ಸಂಘಟನೆಗಳ ಮುಖ್ಯಸ್ಥರು ಗುರುವಾರ ಮನವಿ ಸಲ್ಲಿಸಿದರು.

ಈಶ್ವರ ಖಂಡ್ರೆ ಅವರನ್ನು ಬಸವಕಲ್ಯಾಣ ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ, ವಿಶ್ವಸ್ಥ ಸಮಿತಿ, ಹಾಗೂ ಇತರ ಬಸವಪರ ಸಂಘಟನೆಗಳ ಮುಖ್ಯಸ್ಥರು ಭಾಲ್ಕಿಯ ಅವರ ಮನೆಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.

ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿಯಂದು ಕರ್ನಾಟಕ ಸರ್ಕಾರ ಬಸವ ಉತ್ಸವ ಆಚರಿಸಿದರೆ ಅದು ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರಿಗೆ ಕೊಡುವ ದೊಡ್ಡ ಗೌರವ ಎನಿಸಿಕೊಳ್ಳುತ್ತದೆ. ಅಪ್ಪಟ ಬಸವಾಭಿಮಾನಿಗಳಾದ ತಾವು ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಈ ವಿಷಯ ಶಿಫಾರಸ್ಸು ಮಾಡಬೇಕು, ಈ ವರ್ಷದಿಂದಲೇ ಜಾರಿಯಾಗುವಂತೆ ಬಸವ ಉತ್ಸವ ಮಾಡುವ ಹೊಣೆಗಾರಿಕೆ ತಮ್ಮ ಮೇಲಿರುತ್ತದೆ ಎಂದು ಕೋರಿಕೊಳ್ಳಲಾಗಿದೆ.

ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು ನೀವೊಂದು ನಿಯೋಗವಾಗಿ ಬೆಂಗಳೂರಿಗೆ ಬನ್ನಿ, ಮುಖ್ಯಮಂತ್ರಿಗಳ ಜೊತೆ ಚರ್ಚಿಸೋಣ ಎಂದರು.

ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು ನೀವೊಂದು ನಿಯೋಗವಾಗಿ ಬೆಂಗಳೂರಿಗೆ ಬನ್ನಿ, ಮುಖ್ಯಮಂತ್ರಿಗಳ ಜೊತೆ ಚರ್ಚಿಸೋಣ ಎಂದರು.

ಈ ವರ್ಷದ ಏಪ್ರಿಲ್ 30 ಹಾಗೂ ಮೇ 1, 2, 2025 ರಂದು ಮೂರು ದಿನಗಳವರೆಗೆ 75ನೇ ಅಮೃತ ಮಹೋತ್ಸವದ ಶ್ರೀ ಬಸವೇಶ್ವರರ ಜಾತ್ರೆ ನಡೆಯಲ್ಲಿದ್ದು, ಈ ಜಾತ್ರೆಯನ್ನೇ ಬಸವ ಉತ್ಸವವನ್ನಾಗಿ ಆಚರಿಸಿದರೆ, ಈ ಅಮೃತ ಮಹೋತ್ಸವ ಅರ್ಥಪೂರ್ಣವಾಗುತ್ತದೆ ಅಲ್ಲದೆ ಪ್ರತೇಕ ಜಯಂತಿ ಹಾಗೂ ಉತ್ಸವ ಮಾಡುವ ಅನಿವಾರ್ಯತೆ ಬರುವುದಿಲ್ಲ. ಎರಡು ಒಟ್ಟಿಗೆ ಆಚರಿಸಿದರೆ ಅದಕ್ಕೆ ಸಿಗುವ ಗೌರವವು ಇಮ್ಮಡಿಯಾಗುತ್ತದೆ. ಹೀಗಾಗಿ ಬಸವ ಜಯಂತಿ ಹಾಗೂ ಬಸವ ಉತ್ಸವ ಒಂದೆ ಸಲ ಆಚರಿಸುವ ಮೂಲಕ ನಮ್ಮ ಈ 75ನೇ ಜಾತ್ರಾ ಅಮೃತ ಮಹೋತ್ಸವಕ್ಕೆ ಮೆರಗು ತರಬೇಕೆಂದು ಸಲ್ಲಿಸಿದ ಮನವಿಪತ್ರದಲ್ಲಿ ಹೇಳಲಾಗಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಬಸವರಾಜ ಕೋರಕೆ ಅದ್ಯಕ್ಷರು ಶ್ರೀ ಬ.ದೇ.ಪಂ. ಕಮಿಟಿ, ಶಶಿಕಾಂತ ದುರ್ಗೆ, ಅದ್ಯಕ್ಷರು ಶ್ರೀ ಬ.ದೇ.ವಿ. ಸಮಿತಿ, ರವಿಂದ್ರ ಕೋಳಕುರ ಅದ್ಯಕ್ಷರು ರಾ.ಬಸವದಳ, ಮಲ್ಲಿಕಾರ್ಜುನ ಚಿರಡೆ, ಸುಭಾಷ ಹೋಳಕುಂದೆ, ಜಗನ್ನಾಥ ಖೂಬಾ, ಈರಣ್ಣಾ ಹಲಶಟ್ಟೆ, ಸುನೀಲ ಪಾಟೀಲ, ಅನೀಲ ಹಲಶಟ್ಟೆ, ರಾಜಕುಮಾರ ಸುಗರೆ, ಶಂಕರ ಕರುಣೆ, ವೀವೇಕ ಹೋದಲುರೆ, ಶ್ರೀಕಾಂತ ಬಡದಾಪುರೆ, ಭದ್ರೀನಾಥ ಪಾಟೀಲ, ಜಗನ್ನಾಥ ಪಾಟೀಲ, ವಿಶ್ವನಾಥ ಬೇಲೂರೆ, ಈಶ್ವರ ಶೀಲವಂತ, ಸುರೇಶಸ್ವಾಮಿ ಮತ್ತಿತರರಿದ್ದರು.

Share This Article
Leave a comment

Leave a Reply

Your email address will not be published. Required fields are marked *