ನಂಜನಗೂಡು
ಬಸವಣ್ಣನವರು ದೀನ ದಲಿತರಿಗೆಲ್ಲ ತಾಯಿಯ ಪ್ರೀತಿಯ ತೋರಿ ಕಲ್ಯಾಣ ಕಟ್ಟಿದ ರೀತಿಯನ್ನು ಅತ್ತಿವೇರಿಯ ಬಸವೇಶ್ವರಿ ಮಾತಾಜಿಯವರು ಸೋಮವಾರ ವಿವರಿಸಿದರು. ಆರ್ಥರ್ ಮೈಯ್ಸ್ ಎಂಬಾತನ ಪ್ರಕಾರ ಬಸವೇಶ್ವರರು ಜಗತ್ತಿನ ಮೊಟ್ಟಮೊದಲ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು.
12 ಸಾವಿರ ವೇಶ್ಯೆ, ದಾಸಿಯರನ್ನ ಪುಣ್ಯಾಂಗನೆಯರನ್ನಾಗಿ ಮಾಡಿದ ಮಹಾತ್ಮ ಬಸವಣ್ಣ. ಅಧರ್ಮದಲ್ಲಿದ್ದ ಎಲ್ಲರನ್ನು ಧರ್ಮ ಮಾರ್ಗಕ್ಕೆ ತರುವುದೆ ಬಸವಣ್ಣನವರ ಆಶಯವಾಗಿತ್ತು.

ಪಟ್ಟಣದಲ್ಲಿ ‘ಬಸವಣ್ಣನವರ ಜೀವನ ದರ್ಶನ’ ಎಂಬ ವಿಚಾರವಾಗಿ ಅತ್ತಿವೇರಿಯ ಬಸವೇಶ್ವರಿ ಮಾತಾಜಿಯವರು 30 ದಿನಗಳ ಪ್ರವಚನ ನೀಡುತ್ತಿದ್ದಾರೆ. ಫ.ಗು. ಹಳಕಟ್ಟಿನಗರದಲ್ಲಿ ನಾಲ್ಕನೇ ವರ್ಷದ ಬಸವ ಮಾಸ ಕಾರ್ಯಕ್ರದ ಅಂಗವಾಗಿ ಪ್ರವಚನ ನಡೆಯುತ್ತಿದೆ.

3ನೇ ದಿನ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದು ವಿಶೇಷವಾಗಿತ್ತು.
ಬಸವ ಮಾಸ ಸಮಿತಿಯ ಅಧ್ಯಕ್ಷರಾದ ಆಯರಳ್ಳಿಯ ಪ್ರಭುಸ್ವಾಮಿ ದಂಪತಿಗಳು ಹಾಗು ಬಸವೇಶ್ವರಿ ಮಾತಾಜಿಯವರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ರೂಪ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ಸ್ವಾಗತ ಸುಜಾತ ಗಂಗಾಧರಸ್ವಾಮಿ ಅವರಿಂದ ಪ್ರಾರ್ಥನೆ ಶ್ರೀಮತಿ ಜ್ಯೋತಿ ಸುರೇಶ್ ಅವರಿಂದ, ವಂಧನಾರ್ಪಣೆ ಶಿಕ್ಷಕರಾದ ನಾಗೇಶ್ ಅವರಿಂದ ನಡೆಯಿತು. ಉಪನ್ಯಾಸಕರಾದ ಮಂಜುನಾಥ್ ಆರೋಗ್ಯ ಮಾಹಿತಿ ನೀಡಿದರು.

