ಪುಸ್ತಕ ನೋಡಿದ ಬಹಳಷ್ಟು ಓದುಗರು ಎರಡು, ಮೂರು ಪ್ರತಿ ಖರೀದಿಸಿದ್ದು ವಿಶೇಷವಾಗಿತ್ತು.
ಬೆಂಗಳೂರು
ಬಿಡುಗಡೆಯಾದ ದಿನವೇ, ಕಾರ್ಯಕ್ರಮದ ಸಭಾಂಗಣದಲ್ಲಿಯೇ ‘ಬೆಸ್ಟ್ ಆಫ್ ಬಸವ ಮೀಡಿಯಾ’ ಪುಸ್ತಕದ 103 ಪ್ರತಿಗಳು ಮಾರಾಟವಾಗಿವೆ.
ಪುಸ್ತಕ ನೋಡಿದ ಬಹಳಷ್ಟು ಓದುಗರು ಎರಡು, ಮೂರು ಪ್ರತಿ ಖರೀದಿಸಿದ್ದು ವಿಶೇಷವಾಗಿತ್ತು.
ನಗರದ ಬಸವನಗುಡಿಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಎಂ.ಬಿ. ಪಾಟೀಲ್ ಭಾನುವಾರ ಪುಸ್ತಕ ಬಿಡುಗಡೆ ಮಾಡಿದರು.
“ನಮ್ಮ ಮೇಲೆ ದಾಳಿ ಮಾಡಿದರೆ, ಅಪಪ್ರಚಾರ ಮಾಡಿದರೆ, ವಚನಗಳನ್ನು ತಿರುಚಿದರೆ, ಸುಳ್ಳು ಸುದ್ದಿ ಹಾಕಿದರೆ ಪ್ರತ್ಯುತ್ತರ ಇದರಲ್ಲಿ ಕೊಡುವ ಕೆಲಸ ಮಾಡಬೇಕಾಗತ್ತೆ. ಅಂತಹ ಅನೇಕ ಲೇಖನಗಳನ್ನು ಬೆಸ್ಟ್ ಆಫ್ ಬಸವ ಮೀಡಿಯಾ ಪುಸ್ತಕದಲ್ಲಿವೆ,” ಎಂದು ಹೇಳಿದರು.
ನಾಲ್ಕು ನೂರು ಪುಟಗಳ ‘ಬೆಸ್ಟ್ ಆಫ್ ಬಸವ ಮೀಡಿಯಾ’ ಪುಸ್ತಕದಲ್ಲಿ ಸುಮಾರು ನಲ್ವತ್ತು ಲೇಖಕರು ಕಳೆದ ಒಂದು ವರ್ಷಗಳಲ್ಲಿ ಲಿಂಗಾಯತ ಸಮಾಜದಲ್ಲಿ ಕಂಪನ ಮೂಡಿಸಿದ ಘಟನೆಗಳನ್ನು ವಿಶ್ಲೇಷಿಸಿದ್ದಾರೆ.
ವಚನ ದರ್ಶನ, ಶರಣರ ಶಕ್ತಿ, ರೇಣುಕಾ ಜಯಂತಿ, ಕನ್ನೇರಿ ಶ್ರೀ, ಯತ್ನಾಳರ ಹೇಳಿಕೆ ಮುಂತಾದ ಸಂಘರ್ಷಗಳ ಜೊತೆಗೆ ನಿಜಾಚರಣೆಗಳಂತಹ ಸಕಾರಾತ್ಮಕ ಬೆಳವಣಿಗೆಗಳು ಪುಸ್ತಕದಲ್ಲಿ ದಾಖಲಾಗಿವೇ.

ಪುಸ್ತಕಕ್ಕೆ ಬರೆದಿರುವ ಬಹಳಷ್ಟು ಲೇಖಕರು ಮೊದಲ ಬಾರಿಗೆ ಪ್ರಕಟವಾಗುತ್ತಿರುವ ಲೇಖಕರು ಎನ್ನುವುದು ವಿಶೇಷ. “ಈ ಪುಸ್ತಕ ಕಾರ್ಯಕರ್ತರ ಧ್ವನಿಯಾಗಿ ಬರುತ್ತಿದೆ. ಇಂದು ಲಿಂಗಾಯತ ಸಮಾಜದಲ್ಲಿರುವ ಸಿಟ್ಟು ಈ ಪುಸ್ತಕದಲ್ಲಿದೆ,” ಎಂದು ಸಂಪಾದಕ ಎಂ.ಎ. ಅರುಣ್ ಹೇಳಿದರು.
ಪುಸ್ತಕ ಖರೀದಿಸಲು ವಿವರ
1) ಬೆಲೆ – 290 ರೂಪಾಯಿ
(ರಿಯಾಯತಿ ದರ 250 + 40 ರೂಪಾಯಿ ಅಂಚೆ ವೆಚ್ಚ)
2) ಹಣ UPI ಮೂಲಕ ಕಳುಹಿಸಿ, ಅದರ ಫೋಟೋ ಮತ್ತು ನಿಮ್ಮ ಪೂರ್ಣ ವಿಳಾಸ ಈ ನಂಬರಿಗೆ ವಾಟ್ಸ್ ಆಪ್ ಮಾಡಿ – +91 8310667342
3) ಹಣ ಕಳುಹಿಸಲು UPI ವಿಳಾಸ basavamediatrust@sbi

4) ಪುಸ್ತಕ ಸಾಮಾನ್ಯ ಅಂಚೆಯಲ್ಲಿ ಕಳುಹಿಸುತ್ತೇವೆ. ತಲುಪಲು ಒಂದು ವಾರವಾಗಬಹುದು.