ಲಿಂಗಾಯತ ಧರ್ಮ ಅಭಿಯಾನ: ಇಂದು ಚಂದ್ರಮೌಳಿ ಏನ್, ಕೆ ಬಿ ಮಹದೇವಪ್ಪ ಜೊತೆ ಚರ್ಚೆ

ಬಸವ ಮೀಡಿಯಾ
ಬಸವ ಮೀಡಿಯಾ

ಇಂದು ರಾತ್ರಿ 8.30ಗೆ ಬಸವ ಮೀಡಿಯಾದ ಮೂರನೇ ಗೂಗಲ್ ಮೀಟ್

ಬೆಂಗಳೂರು

ಈ ವರ್ಷ ನಡೆಯಲಿರುವ ಲಿಂಗಾಯತ ಧರ್ಮ ಜಾಗೃತಿ ಅಭಿಯಾನದ ಮೇಲೆ ನಾಡಿನ ಬಸವ ತತ್ವದ ಸ್ವಾಮೀಜಿಗಳ, ಹೋರಾಟಗಾರರ, ಚಿಂತಕರ ಮತ್ತು ಸಂಘಟನೆಗಳ ಕಾರ್ಯಕರ್ತರ ಅಭಿಪ್ರಾಯವನ್ನು ಬಸವ ಮೀಡಿಯಾ ತಂಡ ಸಂಗ್ರಹಿಸುತ್ತಿದೆ.

ಈ ಸಂವಾದದಲ್ಲಿ ಬರುವ ಮುಖ್ಯವಾದ ಸಲಹೆಗಳನ್ನು ಕ್ರೋಡೀಕರಿಸಿ ಲಿಂಗಾಯತ ಜಾಗೃತಿ ಅಭಿಯಾನದ ರೂಪರೇಷೆಯನ್ನು ಸಿದ್ಧಪಡಿಸುತ್ತಿರುವ ಜಂಟಿ ಸಮಿತಿಗೆ ತಲುಪಿಸುವ ಪ್ರಯತ್ನ ಮಾಡುತ್ತೇವೆ.

ಈ ನಿಟ್ಟಿನಲ್ಲಿ ಬೆಂಗಳೂರಿನ ಲಿಂಗಾಯತ ಧರ್ಮ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಬಸವಾ ಮಿಡಿಯಾ ಸರಣಿ ಗೂಗಲ್ ಮೀಟ್ ಗಳನ್ನು ನಡೆಸಲಿದೆ. ಇದರಲ್ಲಿ ಅಭಿಯಾನದಲ್ಲಿ ನಡೆಸಬೇಕಾಗಿರುವ ಚಟುವಟಿಕೆಗಳನ್ನು ಮತ್ತು ಅವುಗಳಿಗೆ ಬೇಕಾದ ಪೂರ್ವಸಿದ್ಧತೆಗಳನ್ನು ಚರ್ಚಿಸಲಿದ್ದೇವೆ.

ಇಂದಿನ ಕಾರ್ಯಕ್ರಮದ ವಿವರ

ದಿನಾಂಕ: 13-02-2025
ಸಮಯ: ರಾತ್ರಿ 8:30ಗಂಟೆಗೆ

ಚರ್ಚೆಯಲ್ಲಿ ಪಾಲ್ಗೊಳ್ಳುವವರು

1) ಚಂದ್ರಮೌಳಿ ಏನ್,
ರಾಷ್ಟ್ರೀಯ ಬಸವದಳ, ಬೆಂಗಳೂರು

2) ಕೆ ಬಿ ಮಹದೇವಪ್ಪ
ಶರಣ ಚಿಂತಕರು, ಬೆಂಗಳೂರು

ವಚನ ಪ್ರಾರ್ಥನೆ ಮತ್ತು ಸ್ವಾಗತ:
ಶ್ರೀಶೈಲ ಜಿ ಮಸೂತೆ

ಪ್ರಾಸ್ತಾವಿಕ ನುಡಿ, ಕಾರ್ಯಕ್ರಮ ನಿರ್ವಹಣೆ:
ಕುಮಾರಣ್ಣ ಪಾಟೀಲ್

ದಯವಿಟ್ಟು ಗಮನಿಸಿ:

1) ಚರ್ಚೆ ಎರಡು ವಿಷಯಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಲಿಂಗಾಯತ ಧರ್ಮ ಅಭಿಯಾನದಲ್ಲಿ ನಡೆಸಬಹುದಾದ ಚಟುವಟಿಕೆಗಳು ಮತ್ತು ಅವುಗಳಿಗೆ ಬೇಕಾಗುವ ಪೂರ್ವ ಸಿದ್ಧತೆ.

2) ಯಾವುದೇ ವ್ಯಕ್ತಿಯ ಅಥವಾ ಸಂಘಟನೆಯ ಟೀಕೆ, ನಿಂದನೆಗೆ ಅವಕಾಶವಿರುವುದಿಲ್ಲ.

3) ಚಂದ್ರಮೌಳಿ ಏನ್ ಮತ್ತು ಕೆ ಬಿ ಮಹದೇವಪ್ಪ 20 ನಿಮಿಷ ಮಾತನಾಡಲಿದ್ದಾರೆ. (ಒಟ್ಟು ಅವಧಿ – 40 ನಿಮಿಷ)

4) ನಂತರ 15 ನಿಮಿಷ ಮುಕ್ತ ವೇದಿಕೆ (ಆಸಕ್ತರಿಗೆ ಮಾತನಾಡಲು ಅವಕಾಶ)

5) ಚರ್ಚೆಯಲ್ಲಿ ಭಾಗವಹಿಸಲು ಗೂಗಲ್ ಮೀಟ್ ಲಿಂಕ್
meet.google.com/tmn-iafd-fyx

ಎಲ್ಲರಿಗೂ ಆದರದ ಸ್ವಾಗತ, ಶರಣು ಶರಣಾರ್ಥಿಗಳು

ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ
ಬಸವ ಮೀಡಿಯಾ

ಫೆಬ್ರವರಿ 11 ಚರ್ಚೆ: ಪೂಜ್ಯ ವೀರತಿಶಾನಂದ ಸ್ವಾಮೀಜಿ, ಪೂಜ್ಯ ಬಸವ ಪ್ರಭು ಸ್ವಾಮೀಜಿ, ಸಿ. ಜಿ. ಪಾಟೀಲ್

ಫೆಬ್ರವರಿ 12 ಚರ್ಚೆ: ಜೆ ಎಸ್ ಪಾಟೀಲ್, ಶ್ರೀಶೈಲ ಮಸೂತಿ

Share This Article
Leave a comment

Leave a Reply

Your email address will not be published. Required fields are marked *