ಬಸವ ಮೀಡಿಯಾ: ಜನವರಿ-ಮಾರ್ಚ್ 2026ರ ಆದಾಯ, ವೆಚ್ಚ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ಶರಣ ಬಂಧುಗಳೇ, ಶರಣು ಶರಣಾರ್ಥಿಗಳು.

ನಿಮಗೆ ತಿಳಿದಿರುವ ಹಾಗೆ ಶರಣ ಸಮಾಜದ ಸಾಮೂಹಿಕ ಒಡೆತನದ ಬಸವ ಮೀಡಿಯಾ ಓದುಗರ ದಾಸೋಹದಿಂದಲೇ ನಡೆಯುತ್ತಿರುವ ಪತ್ರಿಕೆ.

ಬಸವ ಮೀಡಿಯಾಕ್ಕೆ ಬರುವ ನೆರವನ್ನು ಅತ್ಯಂತ ಜವಾಬ್ದಾರಿ ಮತ್ತು ಪಾರದರ್ಶಕತೆಯಿಂದ ನಿರ್ವಹಿಸಲು ಬದ್ಧರಾಗಿದ್ದೇವೆ.

ನಮ್ಮ ಟ್ರಸ್ಟಿನ ನಿಯಮದ ಅನುಸಾರವಾಗಿ ಮೂರು ತಿಂಗಳಿಗೊಮ್ಮೆ (ಏಪ್ರಿಲ್ 7, ಜೂಲೈ 7, ಅಕ್ಟೋಬರ್ 7 ಮತ್ತು ಜನವರಿ 7) ನಮ್ಮ ಆದಾಯ ಮತ್ತು ವೆಚ್ಚದ ಲೆಕ್ಕವನ್ನು ಬಹಿರಂಗವಾಗಿ ಪ್ರಕಟಿಸುತ್ತೇವೆ. (ಕೆಲಸದ ಒತ್ತಡದಿಂದ ಎರಡು ದಿನಗಳ ವಿಳಂಬವಾಗಿದೆ, ಕ್ಷಮೆಯಿರಲಿ.)

ಬಸವ ಮೀಡಿಯಾದ ಪ್ರತಿಯೊಂದು ವೆಚ್ಚವು ಟ್ರಸ್ಟಿಗಳ ಸಭೆಯಲ್ಲಿ ಚರ್ಚೆಯಾಗಿ ಅಂಗೀಕೃತವಾಗಿರುತ್ತದೆ. ನಮ್ಮ ಸಲಹಾ ಮಂಡಳಿಯ ಪ್ರತಿಯೊಬ್ಬ ಸದಸ್ಯರಿಗೂ ಬಸವ ಮೀಡಿಯಾದ ಲೆಕ್ಕವನ್ನು ಪರಿಶೀಲಿಸುವ ಅಧಿಕಾರವಿರುತ್ತದೆ. ವರ್ಷಕ್ಕೊಮ್ಮೆ ಬರುವ ಲೆಕ್ಕ ಪರಿಶೋಧನಾ ವರದಿಯನ್ನೂ ಹೀಗೆಯೇ ಪ್ರಕಟಿಸುತ್ತೇವೆ.

ಜನವರಿ, ಫೆಬ್ರವರಿ, ಮಾರ್ಚ್ 2026 ತಿಂಗಳುಗಳ ಲೆಕ್ಕದ ವಿವರ

ದಯವಿಟ್ಟು ಗಮನಿಸಿ

1) ನಮಗೆ ಬರುವ ಪ್ರತಿಯೊಂದು ದಾಸೋಹವೂ ವೆಬ್ಸೈಟಿನಲ್ಲಿ 24 ಗಂಟೆಗಳ ಒಳಗೆ ಈ ಲಿಂಕಿನಲ್ಲಿ ದಾಖಲಾಗುತ್ತವೆ.

2) ಬಸವ ಮೀಡಿಯಾವನ್ನು ಬೆಳೆಸಲು ನಮಗೆ ಹೆಚ್ಚಿನ ಪೂರ್ಣಾವಧಿ ಸಿಬ್ಬಂದಿಯ ಅವಶ್ಯಕತೆಯಿದೆ. ಜೊತೆಗೆ ನಮ್ಮ ಓದುಗರು ಬೆಳೆದ ಹಾಗೆ ನಮ್ಮ ವೆಬ್ಸೈಟ್ ಗೆ ಸಂಬಂದಿಸಿದ ಖರ್ಚುಗಳೂ ಬೆಳೆಯುತ್ತವೆ.

ಇವುಗಳನ್ನು ನಿಭಾಯಿಸಲು ನಮಗೆ ಮುಂದಿನ ಎರಡು ವರ್ಷಗಳಿಗೆ 35 ಲಕ್ಷ ರೂಪಾಯಿ ಅವಶ್ಯಕತೆಯಿರುತ್ತದೆ.

ಸಧ್ಯಕ್ಕೆ ನಮ್ಮ ಅವಶ್ಯಕತೆಗೆ ತಕ್ಕ ಪ್ರಮಾಣದ ದಾಸೋಹ ಬಾರದ ಕಾರಣ ತಂಡವನ್ನು ವಿಸ್ತರಿಸಲು ಅಸಮರ್ಥರಾಗಿದ್ದೇವೆ. ಬಸವ ಅನುಯಾಯಿಗಳು ತನು-ಮನ-ಧನದೊಂದಿಗೆ ಬಸವ ಮೀಡಿಯಾ ಜೊತೆ ಕೈ ಜೋಡಿಸಲು ಕೋರುತ್ತಿದ್ದೇವೆ.

ಬಸವ ಮೀಡಿಯಾವನ್ನು ಕರ್ನಾಟಕದ ನಂಬರ್ ಒನ್ ಮಾಧ್ಯಮವಾಗಿ ಬೆಳೆಸುವುದು ನಮ್ಮ ಗುರಿ. ನೀವು ನಮ್ಮ ಜೊತೆಯಲ್ಲಿ ಗಟ್ಟಿಯಾಗಿ ನಿಂತರೆ ಮಾತ್ರ ಇದು ಸಾಧ್ಯ.

ಬಸವ ಮೀಡಿಯಾಗೆ ದಾಸೋಹ ಮಾಡಲು ಬೇಕಾದ ವಿವರ – UPI – basavamediatrust@sbi

ಬ್ಯಾಂಕ್ ಖಾತೆ ವಿವರ

Basava Media Trust
State Bank of India
Account number – 44131474781
IFSC – SBIN0040584

ದಾಸೋಹಿಗಳು ದಯವಿಟ್ಟು ನಿಮ್ಮ ವಿಳಾಸ, ಫೋನ್ ನಂಬರ್ ಜೊತೆಗೆ ಕಳಿಸಿರುವ ಮೊತ್ತವನ್ನು ನಮಗೆ ಇಮೇಲ್ ಅಥವಾ ವಾಟ್ಸ್ ಆಪ್ ಮಾಡಬೇಕಾಗಿ ವಿನಂತಿ.

ಬಸವ ಮೀಡಿಯಾ ನಿರ್ವಹಣೆಯಲ್ಲಿ ಬೇರೆ ಬೇರೆ ರೀತಿಯ ಕೆಲಸಗಳಿವೆ. ಇವುಗಳನ್ನು ನಿರ್ವಹಿಸಲು ಆಸಕ್ತರು ಮುಂದೆ ಬರುವರೆಂದು ಎದುರು ನೋಡುತ್ತಿದ್ದೇವೆ.

3) ಬಸವ ಮೀಡಿಯಾ ಪ್ರಕಾಶನದಿಂದ ಎರಡು ಪುಸ್ತಕಗಳು ಪ್ರಕಟವಾಗಿವೆ. ಅವುಗಳ ಖರ್ಚು, ಆದಾಯವನ್ನು ವರ್ಷದ ಕೊನೆಗೆ ಲೆಕ್ಕ ಪರಿಶೋಧಕರ ವರದಿಯ ಮೂಲಕ ತೋರಿಸುತ್ತೇವೆ.

ಧನ್ಯವಾದ
ಬಸವ ಮೀಡಿಯಾ ಟ್ರಸ್ಟಿಗಳ ಪರವಾಗಿ

Share This Article
2 Comments
  • ತಮ್ಮ ಬೇಂಕು ಖಾತೆ ಹೆಸರು, ನಂಬ್ರ ಮತ್ತು IFSC ಕೋಡ್ ಬೇಕು. ನನ್ನ ಬಳಿ UPI ಇಲ್ಲ. ನನ್ನ ಬೇಂಕಿನಿಂದ ದಾಸೋಹ ಮಾಡಬಹುದು.

  • ಸರ್

    ಶರಣು

    ಈ ಮಾಹಿತಿ ಈಗ ವರದಿಯಲ್ಲಿ ಸೇರಿಸಿದ್ದೀವಿ. ನಿಮ್ಮ ದಾಸೋಹಕ್ಕೆ ಧನ್ಯವಾದಗಳು.

    ಬಸವ ಮೀಡಿಯಾ ತಂಡ

Leave a Reply

Your email address will not be published. Required fields are marked *