ಬಸವ ಮೀಡಿಯಾ: ಅಕ್ಟೊಬರ್-ಡಿಸೆಂಬರ್ 2025ರ ಆದಾಯ, ವೆಚ್ಚ

ಬೆಂಗಳೂರು

ಶರಣ ಬಂಧುಗಳೇ, ಶರಣು ಶರಣಾರ್ಥಿಗಳು.

ನಿಮಗೆ ತಿಳಿದಿರುವ ಹಾಗೆ ಶರಣ ಸಮಾಜದ ಸಾಮೂಹಿಕ ಒಡೆತನದ ಬಸವ ಮೀಡಿಯಾ ಓದುಗರ ದಾಸೋಹದಿಂದಲೇ ನಡೆಯುತ್ತಿರುವ ಪತ್ರಿಕೆ.

ಬಸವ ಮೀಡಿಯಾಕ್ಕೆ ಬರುವ ನೆರವನ್ನು ಅತ್ಯಂತ ಜವಾಬ್ದಾರಿ ಮತ್ತು ಪಾರದರ್ಶಕತೆಯಿಂದ ನಿರ್ವಹಿಸಲು ಬದ್ಧರಾಗಿದ್ದೇವೆ.

ನಮ್ಮ ಟ್ರಸ್ಟಿನ ನಿಯಮದ ಅನುಸಾರವಾಗಿ ಮೂರು ತಿಂಗಳಿಗೊಮ್ಮೆ (ಏಪ್ರಿಲ್ 7, ಜೂಲೈ 7, ಅಕ್ಟೋಬರ್ 7 ಮತ್ತು ಜನವರಿ 7) ನಮ್ಮ ಆದಾಯ ಮತ್ತು ವೆಚ್ಚದ ಲೆಕ್ಕವನ್ನು ಬಹಿರಂಗವಾಗಿ ಪ್ರಕಟಿಸುತ್ತೇವೆ.

ಬಸವ ಮೀಡಿಯಾದ ಪ್ರತಿಯೊಂದು ವೆಚ್ಚವು ಟ್ರಸ್ಟಿಗಳ ಸಭೆಯಲ್ಲಿ ಚರ್ಚೆಯಾಗಿ ಅಂಗೀಕೃತವಾಗಿರುತ್ತದೆ. ನಮ್ಮ ಸಲಹಾ ಮಂಡಳಿಯ ಪ್ರತಿಯೊಬ್ಬ ಸದಸ್ಯರಿಗೂ ಬಸವ ಮೀಡಿಯಾದ ಲೆಕ್ಕವನ್ನು ಪರಿಶೀಲಿಸುವ ಅಧಿಕಾರವಿರುತ್ತದೆ. ವರ್ಷಕ್ಕೊಮ್ಮೆ ಬರುವ ಲೆಕ್ಕ ಪರಿಶೋಧನಾ ವರದಿಯನ್ನೂ ಹೀಗೆಯೇ ಪ್ರಕಟಿಸುತ್ತೇವೆ.

ಅಕ್ಟೊಬರ್, ನವೆಂಬರ್, ಡಿಸೆಂಬರ್ 2025 ತಿಂಗಳುಗಳ ಲೆಕ್ಕದ ವಿವರ

ದಯವಿಟ್ಟು ಗಮನಿಸಿ

1) ಈ ಸಲದ ನಮ್ಮ ತ್ರೈಮಾಸಿಕ ಲೆಕ್ಕದ ವರದಿಯನ್ನು ಬಸವ ಮೀಡಿಯಾ ಟ್ರಸ್ಟಿನ ಪರವಾಗಿ ಬಸವ ಪಾಟೀಲ್, ಲಂಡನ್, ಅವರು ಸಿದ್ದ ಪಡಿಸಿದ್ದಾರೆ. ಇದಕ್ಕೆ ಬೇಕಾದ ಬ್ಯಾಂಕ್ ಸ್ಟೇಟ್ಮೆಂಟ್, ಖರ್ಚಿನ ವಿವರ ಮತ್ತು ದಾಖಲೆ ಪರಿಶೀಲಿಸಿದ್ದಾರೆ.

ಇದರಿಂದ ಬಸವ ಮೀಡಿಯಾದ ಪಾರದರ್ಶಕತೆ ಮತ್ತಷ್ಟು ಹೆಚ್ಚುವುದೆಂದು ನಮ್ಮ ನಂಬಿಕೆ.

2) ನಮಗೆ ಬರುವ ಪ್ರತಿಯೊಂದು ದಾಸೋಹವೂ ವೆಬ್ಸೈಟಿನಲ್ಲಿ 24 ಗಂಟೆಗಳ ಒಳಗೆ ಈ ಲಿಂಕಿನಲ್ಲಿ ದಾಖಲಾಗುತ್ತವೆ.

3) ಬಸವ ಮೀಡಿಯಾವನ್ನು ಬೆಳೆಸಲು ನಮಗೆ ಹೆಚ್ಚಿನ ಪೂರ್ಣಾವಧಿ ಸಿಬ್ಬಂದಿಯ ಅವಶ್ಯಕತೆಯಿದೆ. ಜೊತೆಗೆ ನಮ್ಮ ಓದುಗರು ಬೆಳೆದ ಹಾಗೆ ನಮ್ಮ ವೆಬ್ಸೈಟ್ ಗೆ ಸಂಬಂದಿಸಿದ ಖರ್ಚುಗಳೂ ಬೆಳೆಯುತ್ತವೆ.

ಇವುಗಳನ್ನು ನಿಭಾಯಿಸಲು ನಮಗೆ ಮುಂದಿನ ಎರಡು ವರ್ಷಗಳಿಗೆ 35 ಲಕ್ಷ ರೂಪಾಯಿ ಅವಶ್ಯಕತೆಯಿರುತ್ತದೆ.

ಸಧ್ಯಕ್ಕೆ ನಮ್ಮ ಅವಶ್ಯಕತೆಗೆ ತಕ್ಕ ಪ್ರಮಾಣದ ದಾಸೋಹ ಬಾರದ ಕಾರಣ ತಂಡವನ್ನು ವಿಸ್ತರಿಸಲು ಅಸಮರ್ಥರಾಗಿದ್ದೇವೆ. ಬಸವ ಅನುಯಾಯಿಗಳು ತನು-ಮನ-ಧನದೊಂದಿಗೆ ಬಸವ ಮೀಡಿಯಾ ಜೊತೆ ಕೈ ಜೋಡಿಸಲು ಕೋರುತ್ತಿದ್ದೇವೆ.

ಬಸವ ಮೀಡಿಯಾವನ್ನು ಕರ್ನಾಟಕದ ನಂಬರ್ ಒನ್ ಮಾಧ್ಯಮವಾಗಿ ಬೆಳೆಸುವುದು ನಮ್ಮ ಗುರಿ. ನೀವು ನಮ್ಮ ಜೊತೆಯಲ್ಲಿ ಗಟ್ಟಿಯಾಗಿ ನಿಂತರೆ ಮಾತ್ರ ಇದು ಸಾಧ್ಯ.

ಬಸವ ಮೀಡಿಯಾಗೆ ದಾಸೋಹ ಮಾಡಲು ಬೇಕಾದ ವಿವರ – UPI – basavamediatrust@sbi

ದಾಸೋಹಿಗಳು ದಯವಿಟ್ಟು ನಿಮ್ಮ ವಿಳಾಸ, ಫೋನ್ ನಂಬರ್ ಜೊತೆಗೆ ಕಳಿಸಿರುವ ಮೊತ್ತವನ್ನು ನಮಗೆ ಇಮೇಲ್ ಅಥವಾ ವಾಟ್ಸ್ ಆಪ್ ಮಾಡಬೇಕಾಗಿ ವಿನಂತಿ.

ಬಸವ ಮೀಡಿಯಾ ನಿರ್ವಹಣೆಯಲ್ಲಿ ಬೇರೆ ಬೇರೆ ರೀತಿಯ ಕೆಲಸಗಳಿವೆ. ಇವುಗಳನ್ನು ನಿರ್ವಹಿಸಲು ಆಸಕ್ತರು ಮುಂದೆ ಬರುವರೆಂದು ಎದುರು ನೋಡುತ್ತಿದ್ದೇವೆ.

3) ಬಸವ ಮೀಡಿಯಾ ಪ್ರಕಾಶನದಿಂದ ಎರಡು ಪುಸ್ತಕಗಳು ಪ್ರಕಟವಾಗಿವೆ. ಅವುಗಳ ಖರ್ಚು, ಆದಾಯವನ್ನು ವರ್ಷದ ಕೊನೆಗೆ ಲೆಕ್ಕ ಪರಿಶೋಧಕರ ವರದಿಯ ಮೂಲಕ ತೋರಿಸುತ್ತೇವೆ.

ಧನ್ಯವಾದ
ಬಸವ ಮೀಡಿಯಾ ಟ್ರಸ್ಟಿಗಳ ಪರವಾಗಿ

Share This Article
2 Comments
  • ಅಕ್ಟೊಬರ್, ನವೆಂಬರ್, ಡಿಸೆಂಬರ್ 2025 ತಿಂಗಳುಗಳ ಲೆಕ್ಕದ ವಿವರ. ಆಸ್ತಿ ಮತ್ತು ಹೊಣೆಗಳು.
    ಆಸ್ತಿ.
    ಬ್ಯಾಂಕಿನಲ್ಲಿರುವ ಹಣ ೨,೮೯,೨೭೨.
    ಉಳಿತಾಯಗಳು. ೫೪,೧೬೭
    ಖರ್ಚುಗಳು. ೯೯,೮೩೩
    ತ್ರಿಯಾಮಸಿಕ ಶಿಲ್ಕು. ೦೦
    ಒಟ್ಟು ಮೊತ್ತ. ೪,೩೯,೨೭೨

    ಹೊಣೆಗಳು
    ದೇಣಿಗೆ ತ್ರೈಮಾಸಿಕ ೩,೦೦,೦೦೦
    ಬ್ಯಾಂಕ್ ಬಡ್ಡಿ. ೦೦
    ಸದಸ್ಯರ ಫೀ. ೦೦
    ಇತರೆ. ೦೦
    ತ್ರೈಮಾಸಿಕ ಶಿಲ್ಕು. ೧,೩೯,೨೭೨
    ಒಟ್ಟು ಮೊತ್ತ. ೪,೩೯,೩೭೨
    ಈ ರೀತಿ ಇನ್ನೂ ಉತ್ತಮವಾಗಿ ಲೆಕ್ಕ ವರದಿ ಸಲ್ಲಿಸಬಹುದು. ಇದು ಕೇವಲ ಸೂಚನೆ/ ಅರಿಕೆ. ಅನ್ಯತಾ ಭಾವಿಸ ಬಾರದು .
    ಪಾರದರ್ಶಕ ವಿವರಗಳಿಗಾಗಿ ಧನ್ಯವಾದಗಳು.

    • ಧನ್ಯವಾದಗಳು ಸರ್

      ನಿಮ್ಮ ಅಭಿಪ್ರಾಯವನ್ನು ಬಸವ ಪಾಟೀಲ್ ಅವರ ಗಮನಕ್ಕೆ ತಂದಿದ್ದೇವೆ. ತ್ರೈಮಾಸಿಕ ವರದಿ ತಯಾರಿಸುವ ಜವಾಬ್ದಾರಿ ಅವರ ತೆಗೆದುಕೊಂಡಿದ್ದಾರೆ. ನೀವು ಅವರನ್ನು ನೇರವಾಗಿ ಸಂಪರ್ಕಿಸಬಹುದು.

      ಬಸವ ಮೀಡಿಯಾ ನಿರ್ವಹಿಸಲು/ ಕೈ ಜೋಡಿಸಲು ಆಸಕ್ತರು ದಯವಿಟ್ಟು ಮುಂದೆ ಬನ್ನಿ.

Leave a Reply

Your email address will not be published. Required fields are marked *