ಬಸವ ಮೀಡಿಯಾ: ನಮ್ಮ ಮೊದಲ 100 ದಿನಗಳು

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ಸ್ನೇಹಿತರೆ,

ನವಂಬರ್ 19ಕ್ಕೆ ಬಸವ ಮೀಡಿಯಾಗೆ 100 ದಿನಗಳು. ಇಲ್ಲಿಯವರೆಗೆ ನಾವು ಇಟ್ಟಿರುವ ಹೆಜ್ಜೆ, ನಮ್ಮ ಮುಂದಿನ ದಾರಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ. ಬಸವ ಮೀಡಿಯಾ ಬಸವ ಸಮುದಾಯದ ಮಾಧ್ಯಮ, ಎಲ್ಲರೂ ಸೇರಿ ಇದನ್ನು ರೂಪಿಸೋಣ.

ಧನ್ಯವಾದ
ಬಸವ ಮೀಡಿಯಾ ತಂಡ
basavamedia1@gmail.com

Share This Article
8 Comments
  • ಬಸವಣ್ಣನ ಕಾರ್ಯಕ್ಕೆ ಕೈ ಜೋಡಿಸುತ್ತಿರುವ ತಮಗೆಲ್ಲರಿಗೂ ಶರಣು ಶರಣಾರ್ಥಿಗಳು.

  • ಬಸವ ಮೀಡಿಯ ಬಸವಣ್ಣನವರ ಆಶಯಗಳಿಗೆ ಕೊಂಡಿಯಂತೆ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿದೆ. ಬಸವ ಸಮಾಜ ಬಸವಮೀಡಿಯಾದ ಕೈಹಿಡಿಯಲಿ ಇನ್ನು ಎತ್ತರಕ್ಕೆ ಬಸವ ಮೀಡಿಯ ಬೆಳೆಯಲಿ ಎಂದು ಹಾರೈಸುತ್ತೇವೆ.ಅಭಿನಂದನೆಗಳು ಬಸವ ಮೀಡಿಯ ತಂಡಕ್ಕೆ 💐💐ಶರಣು ಶರಣಾಥಿ೯ಗಳು 🙏🙏

    • ಬಸವ ಮಿಡಿಯಾ ಅದ್ಭುತವಾದ ಕಾರ್ಯ ಮಾಡುತ್ತಿದೆ. ಗುರು ಬಸವಣ್ಣನವರನ್ನ ಬಸವಾದಿ ಪ್ರಮಥರನ್ನ ಜಗತ್ತಿಗೆ ಪರಿಚಯಿಸುವುದರಲ್ಲಿ ಸದಾ ನಿರತವಾಗಿದೆ.
      ಬಸವಣ್ಣನವರನ್ನ ಪರಿಚಯಿಸುವುದು ಅಂದ್ರೆ
      ಸತ್ಯವನ್ನ ಪರಿಚಯಿಸಿದಂತೆ.
      ಆ ಕಾರ್ಯವನ್ನು ಬಸವ ಮಿಡಿಯಾ ಮಾಡುತ್ತಿದೆ. ಈ ಕಾರ್ಯ ಹೀಗೆ ಉತ್ತರೊತ್ತರವಾಗಿ ಸಾಗಲಿ ಎಂದು
      ಮನಸಾರೆ ಹಾರೈಸುತ್ತೇವೆ
      ಎಲ್ಲಾ ಬಸವ ಮಿಡಿಯಾ ತಂಡದವರಿಗೆ
      ಹೃತ್ಪೂರ್ವಕ ಶರಣು ಶರಣಾರ್ಥಿ

      • ಧನ್ಯವಾದಗಳು ಮಾತಾಜಿ, ನಿಮ್ಮ ಹಾರೈಕೆ, ಮಾರ್ಗದರ್ಶನ ಯಾವಾಗಲೂ ಇರಲಿ

        ಶರಣು ಶರಣಾರ್ಥಿಗಳು

  • ಬಸವಾದಿ ಶರಣರ ಕುರಿತು ಮತ್ತು ಶರಣತತ್ವ ಸಿದ್ಧಾಂತ ಗಳನ್ನು ಅನುಭವ ಮಂಟಪದ ಅಗ್ಗಿಷ್ಟಿಕೆಯಲ್ಲಿ; ಚರ್ಚೆ ಸಂವಾದಗಳ ಹದದಲ್ಲಿ ಮಿದ್ದಿ, ಅನುಭಾವದ ಅನನ್ಯವಾದ ಹದದಲ್ಲಿ ಕಾಯಿಸಿ, ಕನ್ನಡ ಅಕ್ಷರಗಳ ಪದಪಾತ್ರೆಗಳ ಅಕ್ಷಯ ಪಾತ್ರೆಯಲ್ಲಿ ಮಗುಚಿ,. ಹರಳುಗಟ್ಟಿದ ದಿವ್ಯದ ಬೆಳಕಿನ ವಚನಗಳನ್ನು ಕುರಿತು ನಿಮ್ಮ “ಬಸವ ಮೀಡಿಯಾ” ದಲ್ಲಿ ಚಿಂತನೆಗೆ ಅವಕಾಶವನ್ನು ನೀಡಿ, ಜನಮಾನಸದಲ್ಲಿ ಬಸವ ಚಿಂತನೆಯ ಬೀಜವನ್ನು ಬಿತ್ತಿ, ಬೆಳೆದ ಬೆಳಕಿನ ಶತದಿನಗಳ ಬೆಳೆಯನ್ನು ಕಂಡು ಜನಾಭಿಪ್ರಾಯ ಕೇಳಿದ್ದೀರಿ. ನನಗೆ ಎರಡು ಅವಕಾಶವನ್ನು ಕಲ್ಪಿಸುವ ಮೂಲಕ ನನ್ನ ಶರಣ ಚಿಂತನೆಗೆ ಪ್ರೋತ್ಸಾಹ ನೀಡಿದ್ದೀರಿ. ಧನ್ಯವಾದಗಳು. ನನ್ನ “ದಿನಕ್ಕೊಂದು ವಚನ ಅನುಸಂಧಾನ” ಲೇಖನವನ್ನು ಜನಮಾನಸಕ್ಕೆ ನಿತ್ಯವೂ ತಲುಪಿಸಲು ಅವಕಾಶವನ್ನು ಒದಗಿಸಲು ಈ ಮೂಲಕ ಕೋರುತ್ತೇನೆ. ನಿವೃತ್ತಿ ಬದುಕಿನ ನನ್ನ ಶೇಷ ಆಯುಷ್ಯವನ್ನು ಶರಣರ ಮತ್ತು ವಚನಗಳ ಚಿಂತನೆಗೆ ವಿನಿಯೋಗ ಮಾಡಲು ಸಂಕಲ್ಪ ಮಾಡಿದ್ದೇನೆ. ಹಾಗಾಗಿ ತಮ್ಮ ಸಂಘಟನೆಯ ಸಾಂಗತ್ಯ ಬಯಸುತ್ತೇನೆ. ತಮ್ಮ ಬಸವ ಮೀಡಿಯಾ ಹೆಚ್ಚು ಹೆಚ್ಚು ಜನಮನ್ನಣೆ ಪಡೆಯಲಿ ಶರಣರ ಚಿಂತನೆ ಹಾಗೂ ವಚನಗಳು ಜನಮಾನಸದಲ್ಲಿ ಬೆಳೆಯಲಿ ಬೆಳಗಲಿ.

    • ಶರಣು ಶರಣಾರ್ಥಿಗಳು ಸರ್

      ಅವಶ್ಯವಾಗಿ, ನಿಮ್ಮಂತಹ ಚಿಂತಕರ ವೇದಿಕೆಯೇ ಬಸವ ಮೀಡಿಯಾ

      ನಿಮ್ಮ ಹಾರೈಕೆಗೆ ಧನ್ಯವಾದಗಳು

Leave a Reply

Your email address will not be published. Required fields are marked *