ನಿಮ್ಮ ನಾಟಕ ರದ್ದಾಗಲು ಪಂಡಿತಾರಾಧ್ಯ ಶ್ರೀಗಳು ಪತ್ವಾ ಹೊರಡಿಸಿರುವ ಬಗ್ಗೆ ನಿಮ್ಮ ಬಳಿ ದಾಖಲೆ ಏನಾದರೂ ಇದೆಯಾ ಅಡ್ಡಾದಿಡ್ಡಿ ಕರಿಯಪ್ಪನವರೆ.
ದಾವಣಗೆರೆ
ಅಡ್ಡದಿಡ್ಡಿ ಕರಿಯಪ್ಪನವರು ತಮ್ಮ ಎರಡನೆಯ ವಿಡಿಯೋ ಬಿಡುಗಡೆ ಮಾಡಿದ್ದಾರೆ,
ಎರಡನೆಯ ವಿಡಿಯೋದಲ್ಲಿ ಪಂಡಿತಾರಾಧ್ಯ ಶ್ರೀಗಳ ವಿರುದ್ಧ ಹರಿಹಾಯ್ದು ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ, ಅಂತಹ ಪ್ರಶ್ನೆಗಳಿಗೆ ನಾವೇ ಉತ್ತರ ಕೊಡುತಿದ್ದೇವೆ.
ಕೆಲವು ಊಹ ಪೋಹ ಆರೋಪ ಮಾಡಿದ್ದಾರೆ ಅಂತಹ ಊಹಪೋಹಗಳಿಗೆ ಪ್ರಶ್ನೆ ಕೇಳುತ್ತೇವೆ.
ಗಣಪತಿ ಪೂಜೆ ತಿರಸ್ಕರಿಸಿದವರು ಪಂಡಿತಾರಾಧ್ಯ ಶ್ರೀಗಳು ಎಂದು ಹಲುಬಿದ್ದೀರಿ,
ಗಣಪತಿ ಪೂಜೆ ತಿರಸ್ಕರಿಸಿದವರು ಪಂಡಿತಾರಾಧ್ಯ ಶ್ರೀಗಳು ಅಲ್ಲ ಶರಣರು ಎಂಬುದು ನಿಮಗೆ ಗೊತ್ತಿರಲಿ.
ತುಲಾಭಾರ ನಾಟಕ ಬರೆದವರು ಬಿ.ಆರ್. ಪೋಲೀಸಪಾಟೀಲರು. ಅದು ಹಲವು ವರ್ಷಗಳ ಹಿಂದೆ ಆಕಾಶವಾಣಿಯಲ್ಲಿ ಬಿತ್ತರಗೊಂಡಿದೆ.
ಹಿಂದೂ ಒಂದು ಧರ್ಮವೇ ಅಲ್ಲ ಅಂತ ಹೇಳಿದವರು ಪಂಡಿತಾರಾಧ್ಯ ಶ್ರೀಗಳು ಅಲ್ಲ,
ಈ ದೇಶದ ಸುಪ್ರೀಂಕೋರ್ಟ್ ಹೇಳಿದೆ.
ಪಂಡಿತಾರಾಧ್ಯ ಶ್ರೀಗಳು ಸಂತರು ಅಲ್ಲ ಅಂತ ಹೇಳಿದ್ದೀರಿ
ಪಂಡಿತಾರಾಧ್ಯ ಶ್ರೀಗಳು ನಾವು ಸಂತರು ಅಂತ ಎಂದಾದರು ನಿಮ್ಮ ಮುಂದೆ ಹಂಚಿಕೊಂಡಿದ್ದಾರೆಯೇ? ಇಲ್ಲವಲ್ಲ.
ಪಂಡಿತಾರಾಧ್ಯ ಶ್ರೀಗಳು ಈ ನಾಡಿನ ದೊರೆಗಳು ಅಂತಲೂ ಅವರು ಹೇಳಿಲ್ಲ.
ನಿಮ್ಮ ನಾಟಕ ರದ್ದಾಗಲು ಪಂಡಿತಾರಾಧ್ಯ ಶ್ರೀಗಳು ಪತ್ವಾ ಹೊರಡಿಸಿರುವ ಬಗ್ಗೆ ನಿಮ್ಮ ಬಳಿ ದಾಖಲೆ ಏನಾದರೂ ಇದೆಯಾ ಅಡ್ಡಾದಿಡ್ಡಿ ಕಾರ್ಯಪ್ಪನವರೆ.
ಅವರು ಓದುವಾಗ ಮೈಸೂರು ವಿಶ್ವವಿದ್ಯಾಲಯ ಪದಕದ ಅರ್ಧ ಹಣ ಕೊಟ್ಟು ಬಂಗಾರದ ಪದಕ ಪಡೆಯಿರಿ ಅಂತ ಹೇಳಿದಾಗ ನಮಗೆ ಹಣ ಕೊಟ್ಟು ಪಡೆಯುವ ಬಂಗಾರದ ಪದಕ ಬೇಡ ಅಂದು ತಿರಸ್ಕರಿಸಿದ್ದಾರೆ.
ಇನ್ನೂ ಪ್ರಶಸ್ತಿಗಳಿಗಾಗಿ ಚಮಚಾಗಿರಿ ಮಾಡಲು ಹೇಗೆ ಸಾಧ್ಯ?
ಸತ್ಯದ ಪ್ರತಿಪಾದಕರು ಅವರು ಯಾವುದೇ ಟೀಕೆಗೆ ಜಗ್ಗದೆ ಮುನ್ನುಗ್ಗುತಿದ್ದಾರೆ.
ಬಸವಾದಿ ಶರಣರ ವಿಚಾರಗಳನ್ನು ಗಟ್ಟಿದನಿಯಲ್ಲಿ ಹೇಳುತಿದ್ದಾರೆ, ಸನಾತನ ಧರ್ಮದ ಗುಲಾಮಗಿರಿ ಮಾಡುವ ನಿಮಗೆ ಇದು ಬಿಸಿ ತುಪ್ಪ ಆಗಿದೆ.
ಪಂಡಿತಾರಾಧ್ಯ ಶ್ರೀಗಳು ಸಂವಿಧಾನ ವಿರೋಧಿ ಅಂದಿದ್ದೀರಿ, ಅವರು ಸಂವಿಧಾನ ವಿರೋಧಿಯಾದ ಘಟನೆಗಳನ್ನು ದಾಖಲೆ ನೀಡಲು ನಿಮಗೆ ಸಾಧ್ಯ ಇದೆಯಾ ಮಿಸ್ಟರ್ ಅಡ್ಡದಿಡ್ಡಿ ಕರಿಯಪ್ಪನವರೆ?
ಅಡ್ಡಾದಿಡ್ಡಿ ಕಾರ್ಯಪ್ಪನವರೆ ನೀವು ಹೀಗೆಯೇ ಬಸವಾದಿ ಶರಣರ ವಿಚಾರಗಳನ್ನು ಜನಮಾನಸಕ್ಕೆ ಮುಟ್ಟಿಸುವ ಕೆಲಸ ಮಾಡುತ್ತಿರುವ ಯಾರ ಬಗ್ಗೆ ಆದರೂ ಆಧಾರ ರಹಿತ ಆರೋಪ ಮಾಡಿದರೆ ನಿಮ್ಮ ಜೊತೆಗೆ ಮುಖಾಮುಖಿ ಚರ್ಚೆಗೆ ನಮ್ಮ ಬಸವ ಪಡೆ ಬರುತ್ತದೆ ಎಚ್ಚರ.
ಬಸವಪಡೆ ಅಡ್ಡಂಡ ಕಾರ್ಯಪ್ಪ ಇದ್ದಲ್ಲಿಗೆ ಹೀಗೆ ಪ್ರಶ್ನಿಸಬೇಕು. ಸಾಧ್ಯವಿದ್ದರೆ ಮಾನಹಾನಿ ಮೊಕದ್ದಮೆ ಹೂಡುವ ಬಗ್ಗೆ ಚಿಂತಿಸಬೇಕು.
ಬಸವಾದಿ ಶರಣರ ಸಂದೇಶಗಳಿಗೆ ಹೆಚ್ಚು ಜನ ಆಕರ್ಷಿತರಾಗುತ್ತಿರುವದರಿಂದ ಇಂತಹ ಹೊಟ್ಟೆಯುರಿಯವರು, ಮೊಸರಲ್ಲಿ ಕಲ್ಲು ಹುಡುಕುವ ಕೆಲಸ
ಮಾಡುತ್ತಾರೆ. ಜೈ ಬಸವೇಶ, ಜೈ ಲಿಂಗಾಯತ 🇮🇳🌹🙏🙏
ಈ ಕುತಂತ್ರಿಗಳು ಜನರಿಗೆ ಹಿಂದೂ ಧರ್ಮದ ಬಗ್ಗೆ ಬಸವತತ್ವದವರು ಅವಮಾನ ಮಾಡುತಿದ್ದಾರೆ ಎಂದು ಇಲ್ಲಸಲ್ಲದನ್ನ ಹೇಳಿ ದಾರಿ ತಪ್ಪಿಸುತಿದ್ದಾರೆ. ಇದೆ ರೀತಿ ಕಲ್ಬುರ್ಗಿಯವರ ಬಗ್ಗೆ ತಪ್ಪು ತಪ್ಪು ಅರ್ಥೈಸಿ ಅವರನ್ನ ಕೊಲ್ಲುವಂತೆ ಮಾಡಿದ್ದಾರೆ. ಆದ್ದರಿಂದ ಇಂತಹ ಅವಿವೇಕಿಗಳಿಗೆ ಉತ್ತರ ನೀಡಲು ಮತ್ತು ಎಚ್ಚರಿಸಲು ಪ್ರಬಲವಾದ ಬಸವಪಡೆ ರೆಡಿಯಾಗಬೇಕಿದೆ