ನಾಗರ ಪಂಚಮಿ ಬಂದೈತವ್ವ ಅಣ್ಣಾ ಬರತಾನೆ ಕರಿಯಾಕ
ಅಣ್ಣ ಬರತಾನೆ ಕರಿಯಾಕ ನನ್ನ ಅತ್ತೆ ನಾ ಹೊಂಟೀನೀ ನನ್ನ ತವರೂರಿಗೆ
ಈ ವರ್ಷ ಮನೆಯಲ್ಲಿ ಭೌತಿಕ ದೇವರ ತೆಗೆದು ನಿಜಧರ್ಮ ಆಚರಣೆ ಮಾಡ್ತಾರೆ ಬಸವ ತತ್ವದಲ್ಲಿ ನಡಿತಾರೆ.
ನುಡಿದಂತೆ ನಡೆದು ನಡೆದಂತೆ ನುಡಿದು ಕಾಯಕವೇ ಕೈಲಾಸ ಅಂತಾರೆ ತವರವರು ಬಸವ ತತ್ವ ದಲ್ಲಿ ನಡಿತಾರೆ
ಕಲ್ಲಿನ ನಾಗಪ್ಪಗೆ ಹಾಲು ಯಾಕೆ ಹಾಕೋಣ? ಬಡಬಗ್ಗರ ಮಕ್ಕಳಿಗೆ ಕುಡಿಸೋಣ ಪೌಷ್ಟಿಕ ಆಹಾರದ ಕೊರತೆ ನೀಗಿಸೋಣ.
ಅಕ್ಕ ಪಕ್ಕದ ಮನೆಯವರನ ಆಡಲು ಕರೆಯೋಣ ಜೋಕಾಲಿ ಜೀಕುತ್ತ ಬಾಳೋಣ ಬದುಕೋಣ ಕಲ್ಯಾಣ ರಾಜ್ಯ ಮಾಡೋಣ.
ಎಳ್ಳುಂಡೆ ಹೆಸರುಂಡೆ ಒಳ್ಳೊಳ್ಳೆ
ಅರಳುಂಡೆ ನಾಗಪಂಚಮಿಗೆ ಮಾಡೋಣ ನಾವೆಲ್ಲರೂ
ಅರಿತು ಬೆರೆತು ಬಾಳೋಣ.