ದೇವದುರ್ಗ
ತಾಲೂಕಿನ ಗಬ್ಬೂರು ಗ್ರಾಮದ ಸಮತಾ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆಯ ವತಿಯಿಂದ, “ಸಂವಿಧಾನದ ಕಡೆ ವಿದ್ಯಾರ್ಥಿಗಳ ನಡೆ” ಮತ್ತು “ಮಾತೆ ಸಾವಿತ್ರಿಬಾಯಿ ಫುಲೆ ಜಯಂತ್ಯೋತ್ಸವ” ಕಾರ್ಯಕ್ರಮ ಡಾನ್ ಬೋಸ್ಕೋ ಸಂಸ್ಥೆಯ ಸಭಾಂಗಣ, ದೇವದುರ್ಗದಲ್ಲಿ ಶುಕ್ರವಾರ ನಡೆಯಿತು.

ಕಾರ್ಯಕ್ರಮದಲ್ಲಿ ಬಸವಕಲ್ಯಾಣ ಗುಣತೀರ್ಥವಾಡಿಯ ಕಲ್ಯಾಣ ಮಹಾಮನೆಯ ಪೂಜ್ಯ ಸದ್ಗುರು ಬಸವಪ್ರಭು ಸ್ವಾಮೀಜಿ ಅವರ ಸಮಾಜ ಸೇವೆ ಗುರುತಿಸಿ ಜ್ಯೋತಿಬಾ ಫುಲೆ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು.
ಕಾರ್ಯಕ್ರಮವನ್ನು ರಾಯಚೂರು ಸಂಸದ ಜಿ. ಕುಮಾರ ನಾಯಕ ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡಿದರು. ಅಧ್ಯಕ್ಷತೆಯನ್ನು ಫಾದರ್ ಜಾನ್ ಪೌಲ್ ವಹಿಸಿ ಮಾತನಾಡಿದರು. ಕೃಷ್ಣ ಶಾವಂತಗೇರಾ ಅವರು ಸಾವಿತ್ರಿಬಾಯಿ ಫುಲೆ ಅವರ ಜೀವನ ಸಂದೇಶ ಕುರಿತು ಉಪನ್ಯಾಸ ಗೈದರು.

ಇದೇ ಸಂದರ್ಭದಲ್ಲಿ ಜ್ಯೋತಿ ರಾಜಶೇಖರ, ಪ್ರೇಮ ಮಂಜುನಾಥ, ಉಮಾ ಎಮ್. ಅಶ್ವಿನಿ ಕರಿಗೂಳಿ ಅವರಿಗೆ ಮಾತೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಬಸವರಾಜ ಬ್ಯಾಗವಾಟ, ಬಸವರಾಜ ಸಿಂಗ್ರಿ, ಎಂ. ಆರ್. ಭೇರಿ, ನರಸಿಂಗರಾವ್ ಸರಕೀಲ್ ಮತ್ತಿತರರು ಉಪಸ್ಥಿತರಿದ್ದರು.

ಬಸವಪ್ರಭುಸ್ವಾಮೀಜಿ ಯವರಿಗೆ ಅಬಿನಂಧನೆಗಳು.