ವಚನ ದರ್ಶನ ಪುಸ್ತಕಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬ ಲಿಂಗಾಯತನು ಒಂದು ವಿಷಯ ಗಮನಿಸಬೇಕು.
ಇದೊಂದು ಯಾವುದೇ ವಿಶೇಷತೆ ಇಲ್ಲದ ಸಾಮಾನ್ಯ ಪುಸ್ತಕ. ಆದರೆ ನಾಗಪುರದಿಂದ ದೊಡ್ಡ ದೊಡ್ಡ ನಾಯಕರು ಕರ್ನಾಟಕಕ್ಕೆ ಬಂದು ಇದರ ಬಿಡುಗಡೆ ಮಾಡುತ್ತಿದ್ದಾರೆ. ಶರಣರ ಶಕ್ತಿ ಚಿತ್ರದಲ್ಲೂ ಇದೇ ತರಹದ ಪ್ರಯತ್ನ ನಡೆಯುತ್ತಿದೆ.
ಬಸವ ಧರ್ಮದ ಮೇಲೆ ಮತ್ತು ಅದರ ಅನುಯಾಯಿಗಳ ಮೇಲೆ ನಡೆಯುತ್ತಿರುವ ಬಹಳ ಸಂಘಟಿತವಾದ, ಬಹಳ ದುಡ್ಡು ಹಾಕಿರುವ, ನೇರ ಆಕ್ರಮಣವನ್ನು ಇದು ಸೂಚಿಸುತ್ತದೆ.
ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಇದೇ ರೀತಿಯ ಸಂಚಿಗೆ ಬಲಿಯಾದರು ಎಂದು ಮರೆಯಬಾರದು.
ಆದರೆ ಸದ್ಯಕ್ಕೆ ನಮ್ಮ ಮುಂದೆ ಇರುವ ಆತಂಕ ಇದಕ್ಕಿಂತಲೂ ಗಂಭೀರವಾದುದು. ಯಾಕೆಂದರೆ ಕೆಲವು ಲಿಂಗಾಯತ ಸ್ವಾಮೀಜಿಗಳು ಮತ್ತು ಸಂಘಟನೆಗಳು ಈ ಸಂಚಿಗೆ ಕೈ ಜೋಡಿಸಿದ್ದಾರೆ.
ಲಿಂಗಾಯತ ಎಂದು ಕರೆದುಕೊಂಡು ಈ ಸಂಚನ್ನು ಬೆಂಬಲಿಸುತ್ತಿರುವ ಈ ವ್ಯಕ್ತಿಗಳು ಎಂದೂ ಬದಲಾಗುವುದಿಲ್ಲ. ಬಿಜೆಪಿಯಲ್ಲಿರುವ 18 ಶಾಸಕರು ಬಸವ ಧರ್ಮದ ಮೇಲೆ ನಡೆಯುತ್ತಿರುವ ಈ ದಾಳಿಯನ್ನು ವಿರೋಧಿಸುತ್ತಾರೆ ಎಂದು ನಿರೀಕ್ಷಿಸುವುದು ಮೂರ್ಖತನ.
ಈ ಪರಿಸ್ಥಿತಿಯಲ್ಲಿ ಲಿಂಗಾಯತ ಧರ್ಮವನ್ನು ಉಳಿಸಿಕೊಳ್ಳುವುದು ಸಾಮಾನ್ಯ ಲಿಂಗಾಯತರಿಂದ ಮಾತ್ರ ಸಾಧ್ಯ.
ಸಣ್ಣ, ದೊಡ್ಡ ಸಂಘಟನೆಗಳು, ಮಠಗಳು, ಪ್ರತಿಯೊಬ್ಬ ಲಿಂಗಾಯತ ಈ ದಾಳಿಯನ್ನು ಅರ್ಥಮಾಡಿಕೊಂಡು ತನಗೆ ಸಾಧ್ಯವಾದ ರೀತಿಯಲ್ಲಿ ಎದುರಿಸಲು ಸಜ್ಜಾಗಬೇಕು.
ನಮ್ಮ ಸಮಾಜದಲ್ಲಿ ಈಗ ಬಸವ ಪ್ರಜ್ಞೆ ಚಿಗುರೊಡೆಯುತ್ತಿದೆ. ನಾವೀಗ ಎಚ್ಛೆತ್ತುಕೊಳ್ಳದಿದ್ದರೆ ಅದನ್ನು ಮೊಳಕೆಯಲ್ಲೇ ಚಿವುಟಿ ಹಾಕುತ್ತಾರೆ. ನಾವು ಮತ್ತೆ ಎಂದೂ ಚೇತರಿಸಿಕೊಳ್ಳುವ ಅವಕಾಶ ಸಿಗದಿರಬಹುದು.
ಶಿವಾನಂದ ಜಾಮದಾರ್ ಸಾಮಾನ್ಯ ವ್ಯಕ್ತಿಯಲ್ಲ ಮಹಾನ್ ಸಂಶೋಧನ ಅದ್ಯಯನಕಾರರು. ಅವರಿಲ್ಲದಿದ್ದರೆ ಇನ್ನೂ ಹತ್ತಿಪ್ಪತ್ತು ವರ್ಷಗಳಲ್ಲಿ ನಾವು ಲಿಂಗಾಯತರು ಅಥವಾ ವೀರಶೈವ ಲಿಂಗಾಯತ ಪರಂಪರೆಯೇ ತಿಳಿಯದಂತೆ ಆಗುತಿತ್ತು. ಇವರು ಸಂಶೋಧನಾತ್ಮಕವಾಗಿ ಇರುವ ಲಿಂಗಾಯತ ರಾಜಮನೆತನಗಳು,ಲಿಂಗಾಯತ ಸಂಸ್ಥಾನಗಳು ,ಲಿಂಗಾಯತ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು ಅಷ್ಟೇಯಲ್ಲ ಲಿಂಗಾಯತ ಪರಂಪರೆ ಜಗತ್ತಿನಾದ್ಯಂತ ಹರಡಲು ಒಂದು ರೀತಿ ಕಾರಣಕರ್ತರು. ಇನ್ನು ಸಾವಿರಾರು ವಿಚಾರಗಳು ಇವರಿಂದ ಲಿಂಗಾಯತರಿಗೆ ದೊರೆತಿದೆ ಆದ್ದರಿಂದ ಇವರಿಗೆ ಅನಂತ ಶರಣು🙏🙏
ಇವರು ವಚನ ದರ್ಶನ ಪುಸ್ತಕ ಹಾಗು ಶರಣಶಕ್ತಿ ಸಿನಿಮಾದ ಬಗ್ಗೆ ಎಚ್ಚರಿಸಿದ್ದಾರೆಂದರೇ ಇದರಲ್ಲಿ ಲಿಂಗಾಯತ ಅಥವಾ ವೀರಶೈವ ಲಿಂಗಾಯತ ಸಮುದಾಯಕ್ಕೆ ಆಗಬಹುದಾದದ ನಷ್ಟದ ಬಗ್ಗೆ ತಿಳಿದಿರುವ ಕಾರಣ ನಮ್ಮನ್ನ ಎಚ್ಚರಿಸಿರಬಹುದು ಆದ್ದರಿಂದ ಪ್ರತಿಯೊಬ್ಬ ಲಿಂಗಾಯತ ಬಂಧುಗಳು ಜಾಗೃತಿಯಾಗಬೇಕಿದೆ.
ಮತ್ತೊಂದು ವಿಷಯವೆಂದರೆ ಜಾಮದಾರ್ ರವರು RSS ಬಗ್ಗೆ ಮಾತನಾಡಿದ್ದಾರೆ ಅಂದಾಕ್ಷಣ ದೇಶ ವಿರೋಧಿಯಲ್ಲ ಅಥವಾ ಇನ್ಯಾವುದೇ ಪಕ್ಷ ಪರವಲ್ಲ ಅಥವಾ ಮುಸ್ಲಿಮ್ ಉಗ್ರವಾದಿಖಳ ಪರವಲ್ಲ ಆದರೆ RSS ಕೆಲವರ ಕುತಂತ್ರದ ಬಗ್ಗೆ ಎಚ್ಚರಿಸಿದ್ದಾರೆ ಅಷ್ಟೇ.
ಈ ದೇಶಕ್ಕೆ ಯಾರಿಂದಲೂ ತೊಂದರೆ ಬಂದಾಗ ಎದ್ದು ನಿಲ್ಲುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಅದರಲ್ಲೂ ಕರ್ನಾಟಕದ ಲಿಂಗಾಯತರು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಷ್ಟು ಬೇರೆ ಯಾರು ತೊಡಗಿಸಿಕೊಂಡಿಲ್ಲ.
ಮುಸ್ಲಿಮ್ ಕ್ರಿಶ್ಚಿಯನ್ ಅಥವಾ ಇನ್ಯಾರಿಂದಲೇ ತೊಡಕು ಆದಾಗ ಎಲ್ಲರು ಜಾಗೃತಿಯಾಗೋಣ .
ಜೈನ್ ಸಿಖ್ ಬೌಧ್ದ ಇವರು ಹಿಂದುಗಳಲ್ಲ ಆದರೆ ಅಪ್ಪಟ್ಟ ದೇಶಪ್ರೇಮಿಗಳು ಹಾಗು ಉಗ್ರವಾದಿಗಳ ವಿರೋದಿಗಳು ಲಿಂಗಾಯತ ಧರ್ಮದವರು ಅಪ್ಪಟ್ಟ ದೇಶಪ್ರೇಮಿಗಳು ಮತ್ತು ಉಗ್ರವಾದಿಗಳ ವಿರೋಧಿಗಳು.
ಶಿವಾನಂದ್ ಜಾಮದಾರ್ ರಾಜಕೀಯ ವ್ಯಕ್ತಿಯಲ್ಲ, ಯಾವುದೇ ಅಧಿಕಾರಕ್ಕೂ ಆಸೆಗಾರರಲ್ಲ.ಕಂಪನಿಯ ಲಾಭಕ್ಕಾಗಿ ಪಕ್ಷವನ್ನ ಓಲೈಸುವವರಲ್ಲ. ಅಥವಾ ತನ್ನ ಲಾಭಕ್ಕಾಗಿ ಸಂಸ್ಥೆ ಕಟ್ಟಿಕೊಂಡವರಲ್ಲ ಇವರು ಲಿಂಗಾಯತ ಸಮುದಾಯಕ್ಕೆ ದೊರೆತ ಮಾಣಿಕ್ಯ ಆದ್ದರಿಂದ ಅವರ ಚಿಂತನೆಗಳನ್ನ ಅರಿಯಬೇಕಿದೆ ಮತ್ತು ಪ್ರೋತ್ಸಾಹಿಸಬೇಕಿದೆ ಇಲ್ಲದಿದ್ದಲ್ಲಿ ಲಿಂಗಾಯತರಿಗೆ ನಷ್ಟ.ಅರೆಬೆಂದ ಮಡಿಕೆಯಂತೆ ಅಲ್ಪಸ್ವಲ್ಪ ಲಿಂಗಾಯತ ವಿಚಾರ ತಿಳಿದಿದ್ದ ನಮಗೆಲ್ಲಾ ದಾಖಲಾತ್ಮಕ ಸಂಶೋಧನೆಗಳ ವಿಚಾರಗಳನ್ನ ತಿಳಿಸಿ ಪೂರ್ಣ ಬೆಂದ ಮಡಿಕೆಯಂತೆ ಮಾಡಿದ್ದಾರೆ
Is good msg
ಡಾ.ಶಿವಸನಂದ ಜಾಮದಾರರವರು ಇಡೀ ಲಿಂಗಾಯತ ಸಮಾಜವನ್ನು ಗಣನೆಗೆ ತೆಗೆದುಕೊಂಡು ನಮ್ಮ ಇತಿಹಾಸ, ಧಾರ್ಮಿಕ ನಂಬಿಕೆ, ಧರ್ಮಗುರು ಬಸವೇಶ್ವರ ಆದಿಯಾಗಿ ಇಡೀ ಶರಣಗಣ ಈ ಧರ್ಮವನ್ನು ಎಂಥಾ ಕಠಿಣ ಪರಿಸ್ಥಿತಿಯಲ್ಲಿ ಉಳಿಸಿಕೊಂಡು ಬಂದಿವೆ ಎಂದು ತಮ್ಮ ಅನೇಕ ಲೇಖನಗಳಲ್ಲಿ ವಿಷದಪಡಿಸಿದ್ದಾರೆ. ಅವರಿಗೆ ಇದರಿಂದ ಯಾವ ಆರ್ಥಿಕ ಲಾಭಗಳೇನೂ ಇಲ್ಲ. ಆರಾಮದಾಯಕ ನಿವೃತ್ತಿ ಜೀವನಕಳೆಯುವ ಕಾಲದಲ್ಲಿ ಧರ್ಮದ ಉಳಿವಿಗಾಗಿ ಸದಾ ಹೋರಾಟ ಮಾಡಿತ್ತಿದ್ದಾರೆ. ನೋಡಿ ಇಂತಹ ಪ್ರಬುದ್ದ ಲಿಂಗಾಯತರಿಗೆ ಈಗಿನ ಪ್ರಜಾಪ್ರಭುತ್ವ ಕಾಲದಲ್ಲಿ ಅಡ್ಡಗಾಲು ಹಾಕಲು ಹವಣಿಸುತ್ತಿರುವ ಈ ಕೋಮುವಾದಿ ಜನ 900 ವರ್ಷಗಳ ಹಿಂದೆ ನಮ್ಮ ಸಮಾಜಕ್ಕೆ ಎಷ್ಟು ಸಂಕಷ್ಟ ಕೊಟ್ಟಿರಬೇಡ. ಕಾರಣ ಈಗ ಕೇವಲ ಲಿಂಗಾಯತ ಅಷ್ಟೇ ಹೇಳಿ, ಒಳಪಂಗಡಗಳನ್ನು ಈ ಸಂದಿಗ್ಧ ಸಮಯದಲ್ಲಿ ದೂರವಿಡಿ. ಎಲ್ಲರಿಗೂ ಗೊತ್ತಿರುವ ವಿಚಾರ ನಮ್ಮವರೇ ನಮಗೆ ತೊಡಕಾಗುತ್ತಿದ್ದಾರೆ. ಆದ್ದರಿಂದ ನನ್ನ ವೈಯಕ್ತಿಕ ಅಭಿಪ್ರಾಯ ದಲ್ಲಿ ನಮಗೆ ಧರ್ಮಗುರು ಬಸವಣ್ಣನವರು ಮಾತ್ರ ಗುರುಗಳು ಉಳಿದ ಪೂಜ್ಯರೆಲ್ಲ ನಮಗೆ ಮಾರ್ಗದರ್ಶನ ನೀಡುವ ಧರ್ಮರಕ್ಷಕರು. ಒಗ್ಗಟ್ಟಿನಲ್ಲಿ ಬಲವಿರುವದರಿಂದ ನಮ್ಮ ಒಗ್ಗಟ್ಟನ್ನೆ ಒಡೆದು ಸಣ್ಣ ಸಣ್ಣ ಸಮಾಜಮಾಡಿ ಒಬ್ಬರಿಗೊಬ್ಬರು ಕಚ್ಚಾಡುವಂತೆ ಈ ಕುತಂತ್ರಗಳು ಜಾಲಬೀಸುತ್ತಿದ್ದಾರೆ. ಈ ಲಿಂಗಾಯತ ಧರ್ಮದಲ್ಲಿ ಹುಟ್ಟಿದ್ದೇ ನಮ್ಮ ಭಾಗ್ಯ ಆ ಕಾವ್ಯವನ್ನು ಯಾರೂ ಕಸಿದುಕೊಳ್ಳದಂತೆ ಎಚ್ಚರಿಕೆವಹಿಸಬೇಕಾದ್ದು ನಮ್ಮ ಆದ್ಯ ಕರ್ತವ್ಯ. ಶರಣು ಶರಣಾರ್ಥಿಗಳು.
ಅಷ್ಟೇ ಏಕೆ ಯಾವ ಕಾಂಗ್ರೆಸ್ ಶಾಸಕರೂ ತುಟಿ ಬಿಚ್ಚಿಲ್ಲ.
We should support Jamdarji .
*ಬಸವತತ್ವದ ವೀರ ಗಣಚಾರಿ ವೀರಭದ್ರಪ್ಪ*
ಸದಾ ಹಸನ್ಮುಖಿ ರಾಯಚೂರು ಸಿಂಧನೂರಿನ ಬಸವಕೇಂದ್ರದ ಜವಾಬ್ದಾರಿಯವಹಿಸಿ ಶರಣತತ್ವ ಕಾರ್ಯಕ್ರಮಗಳನ್ನ ನಡೆಸುವ ಮುಖಾಂತರ ಚಿರಪರಿಚಿತರಾಗಿದ್ದ ಬಸವ ಮಾಣಿಕ್ಯ ಶರಣ ಕುರಕುಂದಿ ವೀರಭದ್ರಪ್ಪನವರು ಬಸವತತ್ವದ ಪ್ರಚಾರಕ್ಕಾಗಿ ನಮ್ಮ ಚಾಮರಾಜನಗರ, ಮೈಸೂರು ಜಿಲ್ಲೆಯ ಕಾರ್ಯಕ್ರಮಗಳಿಗೆ 700 ಕಿ.ಮೀ ಪ್ರಯಾಣ ಮಾಡಿ ಬಂದು ದಣಿವರಿಯದೆ ದುಡಿದ ಶರಣಸಂತ. ನಮ್ಮ ಚಾಮರಾಜನಗರ ಮೈಸೂರಿನ ಜಿಲ್ಲೆಗಳಲ್ಲಿ ಕುಟುಂಬ ಸಮೇತ ಆಗಮಿಸಿ ಹಾಜರಾಗಿ ಸುಮಾರು 30 ಕ್ಕೂ ಹೆಚ್ಚು ವಚನ ಕಲ್ಯಾಣಗಳಲ್ಲಿ ಭಾಗವಹಿಸಿ ನಡೆಸಿಕೊಡುತ್ತಿದ್ದ ವೀರಭದ್ರಪ್ಪನವರು. ವಚನ ಕಲ್ಯಾಣ,ಹಲವಾರು ಗುರು ಪ್ರವೇಶಗಳು ,ಗರ್ಭ ಲಿಂಗದೀಕ್ಷೆ,ನಾಮಕರಣ ಕಾರ್ಯಕ್ರಮಗಳು,ಹಾಗು ಯುವ ಸಮುದಾಯಕ್ಕೆ ಕಮ್ಮಟಗಳ ಮುಖಾಂತರ ಶರಣತತ್ವದ ಅನುಭಾವ ನೀಡಿ ಮೇಲಿನ ಎರಡು ಜಿಲ್ಲೆಗಳಲ್ಲಿ ನೂರಾರು ಯುವಕರನ್ನ ಮತ್ತು ಹಲವು ಕುಟುಂಬಗಳಲ್ಲಿ ಮನೆ ಮಾತಾಗಿದ್ದ ವೀರಭದ್ರಣ್ಣನವರು.ಈ ಭಾಗದಲ್ಲಿ ಬಸವತತ್ವದ ಯುವಕರನ್ನ ಬಸವ ತತ್ವದ ಮನೆಗಳನ್ನ ಕಂಡರೆ ಇವರಿಗೆ ಎಲ್ಲಿಲ್ಲದ ಪ್ರೀತಿ.ಅದಕ್ಕೊಂದು ಕಾರಣವು ಇತ್ತು ಎಲ್ಲಾ ಕಡೆ ಬಸವತತ್ವದ ಪ್ರಚಾರಕರು ಹಿರಿಯರೆ ಇರುತಿದ್ದರು ಆದರೆ ಮೇಲಿನ ಎರಡು ಜಿಲ್ಲೆಗಳಲ್ಲಿ ಹಿರಿಯರ ಜೊತೆ ಯುವಕರು ಹೆಚ್ಚಿನ ಪ್ರಮಾಣದಲ್ಲಿ ಬಸವತತ್ವದಲ್ಲಿ ಇರುವುದನ್ನ ಕಂಡು ವೀರಭದ್ರಪ್ಪ ದಂಪತಿಗಳಿಬ್ಬರು ಆನಂದದಿಂದ ಸಂಭ್ರಮಿಸುತಿದ್ದರು. ಸದಾ ಶ್ವೇತವಸ್ತ್ರದಾರಿಯಾಗಿ ಎದುರು ಬಂದವರನ್ನ ಬರ್ರಿಶರಣು ಎಂದು ನಗತ್ತಲೆ ಕೈ ಮುಗಿಯುತ್ತಿದ್ದ ವೀರಭದ್ರಣ್ಣನವರ ನಗುಮುಖ ಮರೆಯಲು ಸಾಧ್ಯವಾಗುತ್ತಿಲ್ಲ. ಇತ್ತಿಚೆಗೆ ನಂಜನಗೂಡಿಗೆ ಬಂದಾಗ ವಿಶ್ವ ಬಸವಸೇನೆಯ ಪದಾಧಿಕಾರಿಗಳೊಂದಿಗೆ ಎಲ್ಲಾ ಶರಣರ ಜಯಂತಿಗಳನ್ನ ರಾಜ್ಯಾದ್ಯಂತ ಮಾಡಬೇಕೆಂದು ಮಾತನಾಡಿದ್ದರು. ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದಾಗಲೂ ಎಲ್ಲ ಶರಣರ ಜಯಂತಿ ಮಾಡುವ ಬಗ್ಗೆ ವಿಶ್ವ ಬಸವಸೇನೆಯ ಅದ್ಯಕ್ಷರಾದ ಬಸವಯೋಗೀಶ್ ರವರೊಂದಿಗೆ ಉತ್ಸಾಹದಿಂದ ಯೋಜನೆ ಹಾಕಿಕೊಂಡಿದ್ದರು.ಅನಾರೋಗ್ಯ ಸದ್ಯಕ್ಕೆ ಸರಿಯಾಗುತ್ತೆ ಬೇಗ ಗುಣಮುಖನಾಗಿ ಬರುತ್ತೇನೆ ಶರಣ ಚಿಂತನೆಗಳನ್ನ ವಿಶ್ವ ಮಟ್ಟಕ್ಕೆ ತಲುಪಿಸುವ ಕೆಲಸವಾಗಬೇಕಿದೆ ಯಾಕಂದ್ರೆ ಪ್ರಸ್ತುತ ಜಗತ್ತಿಗೆ ಬಸವಣ್ಣನವರ ತತ್ವಸಿದ್ದಾಂತಗಳು ಜಗತ್ತಿನ ಸರ್ವಸಮಸ್ಯೆಗಳಿಗೆ ಪರಿಹಾರಕ್ಕೆ ಮಾರ್ಗಸೂಚಕವಾಗಿವೆ ಅದಕ್ಕಾಗಿ ಸರ್ವಸಮುದಾಯದ ಕಾಯಕ ಶರಣರ ಜಯಂತಿ ನಡೆಸಿ ಎಲ್ಲರಿಗೂ ತಿಳಿಸೋಣವೆಂದು ಕಾತರಿಸುತಿದ್ದರು.ರಾಜ್ಯದ ಹಲವು ಮಠದ ಸ್ವಾಮೀಜಿಗಳು ಹಾಗು ಬಸವಾಭಿಮಾನಿಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು ರಾಯಚೂರಿನಿಂದ ಊಟಿಯವರೆಗೂ ಶರಣ ಅನುಭಾವದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ವೀರಭದ್ರಣ್ಣನವರು ಇಂದು ನಮ್ಮೊಡನೆ ಇಲ್ಲದಿರವುದನ್ನ ನೆನೆಸಿಕೊಳ್ಳಲು ಕಷ್ಟವಾಗುತ್ತಿದೆ. ಅವರ ಲಿಂಗೈಕ್ಯ ಸುದ್ದಿ ಕೇಳಿದಾಕ್ಷಣ ಬಸವ ಭಕ್ತರಿಗೆ ಸಿಡಿಲುಬಡಿದಂತಾಯಿತು. ಎಲ್ಲರ ಆಶಯ ಒಂದೇ ಶರಣ ವೀರಭದ್ರಪ್ಪನವರ ಲಿಂಗ ಜ್ಯೋತಿ ಬಸವನಲ್ಲಿ ಐಕ್ಯ ಹೊಂದಲ್ಲಿ. ಪುನರ್ಜನ್ಮದ ಅವಕಾಶವಿದ್ದರೆ ಅವರು ಮಾಡದೆ ಉಳಿದ ಶರಣತತ್ವದ ಕಾರ್ಯಗಳ ಮಾಡಲು ಮತ್ತೊಮ್ಮೆ ಬಸವನನಾಡಲ್ಲಿ ಜನ್ಮವೆತ್ತು ಬಂದು *ಬಸವ ಬೆಳಗ* ಬೆಳಗಲಿ.ಎಂದು ಸ್ಮರಿಸೋಣ 🙏🙏
*ಶರಣರ ಸ್ಮಾರಕಗಳ ಶುಚಿತ್ವ ಕಾಪಾಡುವಲ್ಲಿ ಆಡಳಿತ ಇಲಾಖೆ ಹಾಗು ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆ*
ಬಸವ ಕಲ್ಯಾಣ ಪ್ರವಾಸ ಮಾಡಿ ಶರಣರ ಪವಿತ್ರ ಸ್ಥಳಗಳನ್ನ ವೀಕ್ಷಿಸಲು ಹೊರಟಿದ್ದ ನಮಗೆ ಕೆಲವು ಶರಣರ ಸ್ಥಳಗಳಂತೂ ಬೇಸರ ಮತ್ತು ದುಃಖ ತರಿಸುವಂತಹ ಸ್ಥಿತಿಯಲ್ಲಿದ್ದವು. ಅದರಲ್ಲಿಯೂ ದಿನಾಂಕ 31/10/2024 ರಂದು ಬೇಟಿ ನೀಡಿದ ಇಂಗಳೇಶ್ವರದಲ್ಲಿನ ಸಾಂಸ್ಕೃತಿಕ ನಾಯಕ, ಸ್ತ್ರೀ ಕುಲೋಧ್ಧಾರಕ,ಮಹಾಮಾನವತಾವಾದಿ, ಸಕಲಾಭಿವೃಧ್ಧಿಯ ಹಾಗು ಸರ್ವರ ಅಭಿವೃದ್ಧಿಯ ಸಿದ್ದಾಂತಗಳನ್ನ ವಚನಗಳ ಮುಖಾಂತರ ನೀಡಿದ ಬಸವಣ್ಣನವರ ತಾಯಿ ಮಾದಲಾಂಬಿಕೆಯವರ ಮನೆಯ ಸ್ಮಾರಕಕ್ಕೆ ಹೋಗುವ ರಸ್ತೆಯಲ್ಲಿನ ಅಶುಚಿತ್ವದ ದುಃಸ್ಥಿತಿ ಕಂಡು ಮನನೊಂದಿತು ಕಾರಣ ಊರಿನ ಚರಂಡಿಯಲ್ಲಿನ ಗಲೀಜು ನೀರು ಸ್ಮಾರಕಕ್ಕೆ ಹೋಗಲು ಸಹ ಆಗದಂತೆ ರಸ್ತೆಯ ಮದ್ಯ ಪೂರ್ತಾ ನಿಂತಿದೆ. ಜಗತ್ತಿನಾದ್ಯಂತ ದೇಶ ವಿದೇಶದಿಂದ ಬಸವಣ್ಣನವರ ಪಿಲಾಷಪಿಯನ್ನ ತಿಳಿದ ಜನರು ಹಾಗು ಸಾಹಿತಿಗಳು, ಸಂಶೋಧಕರು , ಇತಿಹಾಸ ತಜ್ಞರು ಬರುತಿದ್ದಾರೆ ಆದರೆ ಅಲ್ಲಿನ ವ್ಯವಸ್ಥೆಯನ್ನ ಕಂಡು ಬೇಸರ ವ್ಯಕ್ತಪಡಿಸಿದ್ದಾರೆ. ಈಗಾದರೆ ಕರ್ನಾಟಕದ ಶರಣರ ಅದ್ಯಯನ ಮಾಡಲು ಯಾರು ಬರುವಂತೆ ಕಾಣುತ್ತಿಲ್ಲ.ಅಲ್ಲಿನ ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರಿರುವುದನ್ನ ನೋಡಿದರೆ ಮತ್ತೊಮ್ಮೆ ಶರಣರ ಬಗೆಗಿನ ಸಂಶೋಧನ ಅಭಿವೃದ್ಧಿಯನ್ನ ಬೇಕಂತಲೆ ನಿರ್ಲಕ್ಷ್ಯ ಮಾಡಿದಂತೆ ಕಾಣಿಸುತ್ತದೆ. ಅಲ್ಲಿನ ಪಂಚಾಯಿತಿಯ ಆಡಳಿತ ಮಂಡಳಿಯ ವಿರುದ್ಧ ಕಾನೂನುಬದ್ದ ಶಿಸ್ತುಕ್ರಮ ಕೈಗೊಳ್ಳುವಂತೆ ಆ ಭಾಗದ ಬಸವ ಭಕ್ತರು ಎಚ್ಚರಿಸಬೇಕಿದೆ.
ಇದಷ್ಟೇಯಲ್ಲದೆ ಬಸವಣ್ಣನವರ ಅರಿವಿನ ಮನೆ ,ಮಡಿವಾಳ ಮಾಚಿದೇವರ ಗದ್ದಿಗೆ, ಕೂಡಲಸಂಗಮದಲ್ಲಿನ ನೀಲಾಂಬಿಕೆ ತಾಯಿಯ ಐಕ್ಯ ಸ್ಥಳ, ಬಸವ ಕಲ್ಯಾಣ ವ್ಯಾಪ್ತಿಯ ಒಕ್ಕಲಿಗ ಮುದ್ದಣ್ಣನವರ ಗದ್ದಿಗೆ,ಶಂಕರದಾಸಿಮಯ್ಯನವರ ದೇವಸ್ಥಾನ ಈಗೇ ಹಲವು ಶರಣರ ಸ್ಮಾರಕ ಸ್ಥಳಗಳು ಹೇಳಿಕೊಳ್ಳುವಷ್ಟು ಅಭಿವೃದ್ಧಿಯನ್ನ ಕಂಡಿಲ್ಲ.
ಇತ್ತೀಚಿಗೆ ಕಲ್ಯಾಣ ಅಭಿವೃದ್ಧಿ ನಿಗಮ ಮಾಡಿರುವುದು ಸಂತೋಷದ ವಿಷಯವಾದರೂ ಸಹ ಮುಂದಿನ ದಿನಗಳಲ್ಲಿ ತುರ್ತಾಗಿ ಶರಣರ ಸ್ಥಳಗಳನ್ನ ಪ್ರವಾಸೋದ್ಯಮ ಕಾರಣದಿಂದ ಅಭಿವೃದ್ಧಿಪಡಿಸಬೇಕಿದೆ.