ಬಸವ ಪುರಾಣ ಪ್ರಸಾದಕ್ಕೆ 5 ಕ್ವಿಂಟಲ್ ಜಿಲೇಬಿ ದಾಸೋಹ ಮಾಡಿದ ಶರಣೆಯರು

ತೇರದಾಳ

ಇಲ್ಲಿನ ಗೋಲಬಾವಿ ಗ್ರಾಮದ ಭಕ್ತರು ಅನ್ನಪ್ರಸಾದ ವಿತರಣೆಗೆ 5 ಕ್ವಿಂಟಲ್ ಜಿಲೇಬಿ ನೀಡಿ, ಭಕ್ತಿ ಮೆರೆದರು.

ಪಟ್ಟಣದ ಆರಾಧ್ಯ ದೈವ ಅಲ್ಲಮಪ್ರಭು ದೇವರ ನೂತನ ದೇವಸ್ಥಾನ ಲೋಕಾರ್ಪಣೆ ಅಂಗವಾಗಿ ಜರುಗುತ್ತಿರುವ ಬಸವ ಪುರಾಣ ಕೇಳಲು ಬರುವ (ಮಂಗಲದ ಬಳಿಕ) ಭಕ್ತರಿಗೆ ವಿತರಣೆಯಾಗುವ ಅನ್ನಪ್ರಸಾದಕ್ಕೆ ದಿನಕ್ಕೊಂದು ಭಕ್ಷ್ಯವನ್ನು ಭಕ್ತರು ತಯಾರಿಸಿ, ಇಲ್ಲವೇ ದವಸ, ಧಾನ್ಯ ಅಥವಾ ಹಣದ ರೂಪದಲ್ಲಿ ದೇಣಿಗೆ ನೀಡುತ್ತ ಬಂದಿದ್ದಾರೆ.

16ನೇ ದಿನವಾದ ಅಕ್ಟೋಬರ್ 29 ತಾಲ್ಲೂಕಿನ ಗೋಲಬಾವಿ ಗ್ರಾಮದ ಭಕ್ತರು ದೇಣಿಗೆ ಸಂಗ್ರಹಿಸಿ 5 ಕ್ವಿಂಟಲ್ ಜಿಲೇಬಿ ತಯಾರಿಸಿ, ಮಹಿಳೆಯರು ತಯಾರಿಸಿದ ರೊಟ್ಟಿ ಹಾಗೂ ಸಂಗ್ರಹಿಸಿದ ₹3 ಲಕ್ಷ ಹಣವನ್ನು ದೇವಸ್ಥಾನ ಲೋಕಾರ್ಪಣೆ ಸಮಿತಿಗೆ ನೀಡಿದರು.

ಜಿಲೇಬಿ ತಯಾರಿಸಿ ಭಕ್ತರು ತಲೆ ಮೇಲೆ ಹೊತ್ತು ಅಂದಾಜು ಆರು ಕಿ.ಮೀ ಕಾಲ್ನಡಿಗೆಯಲ್ಲಿಯೇ ಬಂದು ದೇವಸ್ಥಾನ ತಲುಪಿದರು.

Share This Article
1 Comment
  • ಭಕ್ತಿಯ ಉನ್ನತ ಆಚರಣೆ. ದಾಸೋಹದಲ್ಲೂ ಅವರ ವ್ಯವಸ್ಥಿತವಾದ ಪಯಣ ಮತ್ತು ಅವರ ಅಚ್ಚುಕಟ್ಟಾಗಿ ಕುಳಿತ ಪರಿಯನ್ನು ನೋಡಿದರೆ 12 ನೇ ಶತಮಾನದ ಶಿವ ಶರಣ ಶರಣೆಯರ ಸಮಾವೇಶಗೊಂಡಿದೆ.
    ಆಚರಣೆ ಮೂಲಕ ಲಿಂಗಾಯತರಲ್ಲಿ ಜಾಗೃತಿ ಮೂಡಿಸಿದ ತಾಯಂದಿರಿಗೆ ಅನಂತ ಶರಣು ಶರಣಾರ್ಥಿಗಳು 🙏🙏

Leave a Reply

Your email address will not be published. Required fields are marked *