ಬೆಂಗಳೂರು
ಬಸವ ಪರಿಷತ್ ವತಿಯಿಂದ ಕೊಡಮಾಡುವ ‘ಬಸವ ಪುರಸ್ಕಾರ-2025’ ಪ್ರಶಸ್ತಿಯನ್ನು ವಿವಿಧ ಕ್ಷೇತ್ರದ 15 ಸಾಧಕರಿಗೆ ಇಂದು ಪ್ರದಾನ ಮಾಡಲಾಗುವುದು.
ಸತತ ನಾಲ್ಕು ವರ್ಷಗಳಿಂದ ಈ ಪುರಸ್ಕಾರ ನೀಡಲಾಗುತ್ತಿದ್ದು,
ಆ.9 ರಂದು ಬೆಳಿಗ್ಗೆ 9.30ಕ್ಕೆ ನಗರದ ಕಂಠೀರವ ಒಳಾಂಗಣದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ ಅಧ್ಯಕ್ಷೆ ರೇಖಾ ಹಿರೇಮಠ ತಿಳಿಸಿದ್ದಾರೆ.
ಪ್ರಶಸ್ತಿ ಪುರಸ್ಕೃತರು, ನ್ಯಾಯಾಂಗ ವಿಭಾಗದಲ್ಲಿ ಮಾಜಿ ಅಡ್ವೊಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ, ಚಲನಚಿತ್ರ ವಿಭಾಗದಲ್ಲಿ ನಟಿ ಉಮಾಶ್ರೀ, ಪರಿಸರ ರಕ್ಷಣೆ ವಿಭಾಗದಲ್ಲಿ ಹೆಸರಾದ ಅಲ್ಮಿತ್ರಾ ಪಟೇಲ್, ಸಹಕಾರ ಮಹಿಳಾ ಸಬಲೀಕರಣ ವಿಭಾಗದಲ್ಲಿ ಡಾ.ಎಂ.ಎನ್. ರಾಜೇಂದ್ರ ಕುಮಾರ್, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ನಾಗರಾಜಯ್ಯ ಎನ್, ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಎ.ಎಸ್. ಕಿರಣಕುಮಾರ್, ಶಿಕ್ಷಣ, ಸಮಾಜಸೇವೆ ಕ್ಷೇತ್ರದಲ್ಲಿ ಬಸವರಾಜ ಎಸ್. ದೇಶಮುಖ, ಮಾನಂದಿ ರಮೇಶ್, ಡಾ.ಎಸ್.ಪಿ. ದಯಾನಂದ್, ಡಾ.ವಿ.ಎಸ್.ವಿ. ಪ್ರಸಾದ್, ರವಿಕುಮಾರ ಸ್ವಾಮಿ ಹಿರೇಮಠ, ಬಸವರಾಜ ಧನ್ನೂರ, ಶಿಕ್ಷಣ ಕ್ಷೇತ್ರದಲ್ಲಿ ಮಾಜಿ ಸಚಿವ ಎಸ್.ಆರ್. ಪಾಟೀಲ್, ಶಾಮನೂರು ಎಸ್. ಗಣೇಶ್, ಸರಕಾರಿ ಸೇವೆ ವಿಭಾಗದಲ್ಲಿ ವಿಜಯಪುರದ ಡಿವೈಎಸ್ಪಿ ಬಸವರಾಜ ಯಲಿಗಾರ ಆಯ್ಕೆಗೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಪೂಜ್ಯ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮೈಸೂರು, ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ, ಕಾರ್ಮಿಕ ಸಚಿವ ಸಂತೋಷ ಲಾಡ್, ಸಂಸದ ಬಿ.ವೈ. ರಾಘವೇಂದ್ರ, ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡ್ರು, ಶಾಸಕಿ ಎಂ.ಪಿ. ಲತಾಮಲ್ಲಿಕಾರ್ಜುನ, ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ.
ಇದೇ ವೇಳೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನೂತನ ಮೇಯರ್ ಜ್ಯೋತಿ ಪಾಟೀಲ ಅವರನ್ನು ಅಭಿನಂದಿಸಲಾಗುವುದು.

