(ಸೆಪ್ಟೆಂಬರಿನಲ್ಲಿ ನಡೆಯಲಿರುವ ಬಸವ ಸಂಸ್ಕೃತಿ ಅಭಿಯಾನ ಬಗ್ಗೆ ಶರಣ ತತ್ವ ಚಿಂತಕ ಮಡಿವಾಳಪ್ಪ ಸಂಗೊಳ್ಳಿ ಅವರ ಚಿಂತನೆ. ಕಾರ್ಯಕ್ರಮ ಬಸವ ರೇಡಿಯೋದಲ್ಲಿ ಏಪ್ರಿಲ್ 7 ನಡೆಯಿತು.)
ಸವದತ್ತಿ
ಬಸವ ಸಂಸ್ಕೃತಿ ಅಭಿಯಾನ ಲಿಂಗಾಯತ ಮಠಾಧೀಶರ ಒಕ್ಕೂಟದ ದಿಟ್ಟ ಹೆಜ್ಜೆ. ಇದು ಕೇವಲ ಕಾಟಾಚಾರದ ಕೆಲಸ ಆಗಬಾರದು.
ನಾವು ಸಂಘಟನೆಯಲ್ಲಿ ಹಿಂದೆ ಇದ್ದೇವೆ ಆದುದರಿಂದ ಸಂಘಟನೆ ಮತ್ತು ತರಬೇತಿ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ಕೊಟ್ಟು ಕಾರ್ಯಕ್ರಮಗಳನ್ನು ರೂಪಿಸಬೇಕು. ಅಭಿಯಾನಕ್ಕೆ ಮುಂಚೆ ರಾಜ್ಯಾದ್ಯಂತ ಸರ್ವೇ ಮಾಡಿ, ಅವಶ್ಯಕತೆಗೆ ತಕ್ಕಂತೆ ಕಾರ್ಯಕ್ರಮ ರೂಪಿಸಬೇಕು.
ರಾಜ್ಯ, ಜಿಲ್ಲೆ, ತಾಲ್ಲೂಕು ಮತ್ತು ಮುಖ್ಯವಾಗಿ ಗ್ರಾಮ ಮಟ್ಟದಲ್ಲಿ ಶರಣ ಸಂಘಟನೆಗಳನ್ನು ಕಟ್ಟಬೇಕು ಮತ್ತು ತತ್ವ ಸಿದ್ಧಾಂತಗಳನ್ನು ಪ್ರಸಾರ ಮಾಡಬೇಕು. ವಾರದಲ್ಲಿ ಒಂದು ಗಂಟೆಯಾದರೂ ಆಚರಣೆಗಳ ಮತ್ತು ಅಥವಾ ಸಿದ್ಧಾಂತಗಳ ಬಗ್ಗೆ ಚರ್ಚಿಸುವಂತಾಗಬೇಕು. ಇದೆಲ್ಲಾ ಸಾಧ್ಯವಾಗುವುದು ಸಂಘಟನೆಯಿಂದ ಮಾತ್ರ ಸಾಧ್ಯ. ಮಠಾಧೀಶರ ಮುಂದಾಳತ್ವ ಈ ನಿಟ್ಟಿನಲ್ಲಿ ಅತಿ ಮುಖ್ಯ ಪಾತ್ರ ವಹಿಸಬೇಕು.
ಪ್ರತಿ ತಿಂಗಳೂ ಶರಣ ಸಂಘಟನೆಯ ತಾಲ್ಲೂಕು ಮಟ್ಟದ ಸಭೆಗಳನ್ನು ಮಾಡಬೇಕು. ನಿರಂತರವಾಗಿ ಧಾರ್ಮಿಕ ಕಾರ್ಯಗಳನ್ನು ಮತ್ತು ಸಂಭ್ರಮಾಚರಣೆಗಳನ್ನು ಆಯೋಜಿಸುವ ವ್ಯವಸ್ಥೆ ಮಾಡಿಕೊಳ್ಳಬೇಕು.
ಆಧ್ಯಾತ್ಮಿಕ ಶಿಕ್ಷಣಕ್ಕೆ ಒತ್ತುಕೊಡಬೇಕು. ಇವುಗಳ ಜವಾಬ್ದಾರಿಯನ್ನು ಎಲ್ಲರೂ ಒಟ್ಟಾಗಿ ನಿರ್ವಹಿಸಬೇಕು. ಧರ್ಮದ ತತ್ವಜ್ಞಾನವನ್ನು ಪ್ರಸಾರ ಮಾಡಬೇಕು. ನಿಜಾಚಾರಣೆ ಕಾರ್ಯಕ್ರಮ ಮತ್ತು ತರಬೇತಿ ಎಲ್ಲಾ ಮಟ್ಟದಲ್ಲೂ ನಡೆಯುವಂತೆ ನೋಡಿಕೊಳ್ಳಬೇಕು.
ಅಭಿಯಾನದ ಮುಂಚೆ ಮತ್ತು ನಂತರ ಮಠಾಧೀಶರುಗಳು ಮತ್ತು ಇತರೆ ಧಾರ್ಮಿಕ ಪ್ರಮುಖರು ನಿರಂತರವಾಗಿ ಜನರ ಸಂಪರ್ಕದಲ್ಲಿ ಇರಬೇಕು.
——
ಶರಣ ಮಡಿವಾಳಪ್ಪ ಸಂಗೊಳ್ಳಿ
ಬಿ.ಎಂ.ಶ್ರೀ ಮಾದರಿ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಮುಖೋಪಾಧ್ಯಯರಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಬಸವತತ್ವ ಚಿಂತಕರು ಮತ್ತು ಅನುಭಾವೀಗಳು. ಜೊತೆಗೆ, ಮಾಲೂರು ಗ್ರಾ, ಸವದತ್ತಿ ತಾಲ್ಲೂಕು ಇಲ್ಲಿ 10 ಗುಂಟೆ ಜಾಗದಲ್ಲಿ ಅನುಭವ ಮಂಟಪ ಸ್ಥಾಪಿಸಿ ಅಲ್ಲಿ ಯುವಕರೂ ಸೇರಿದಂತೆ ಆಸಕ್ತರಿಗೆ ಲಿಂಗಾಯತ ಧರ್ಮದ ನಿಜಾಚಾರಣೆಗಳ ಬಗ್ಗೆ ತರಬೇತಿ ನೀಡುವ ಕೆಲಸವನ್ನೂ ಮಾಡುತ್ತಿದ್ದಾರೆ.