ಬಸವತತ್ವ ಪಾಲನೆಯಿಂದ ಸಾರ್ಥಕ ಬದುಕು: ಇಳಕಲ್ಲ ಶ್ರೀ

ಇಳಕಲ್ಲ

‘ಬಸವತತ್ವದ ಅನುಸರಣೆ ಹಾಗೂ ಬಸವನಾಮ ಸ್ಮರಣೆಯಿಂದ ಇಹದ ಬಂಧನಗಳಿಂದ ಮುಕ್ತರಾಗಿ ಸಾರ್ಥಕ ಜೀವನ ನಡೆಸಲು ಸಾಧ್ಯ’ ಎಂದು ಗುರುಮಹಾಂತ ಸ್ವಾಮೀಜಿ ಹೇಳಿದರು.

ವಿಜಯ ಮಹಾಂತೇಶ ಸಂಸ್ಥಾನಮಠದ ವಿಜಯ ಮಹಾಂತ ಶಿವಯೋಗಿಗಳವರ ಶರಣ ಸಂಸ್ಕೃತಿ ಮಹೋತ್ಸವದ ಅಂಗವಾಗಿ ವಿಜಯ ಮಹಾಂತೇಶ್ವರ ತರುಣ ಸಂಘದಿಂದ ಸೋಮವಾರ ಇಲ್ಲಿಯ ಗಾಂಧಿ ಚೌಕ್ ದಲ್ಲಿ 9 ದಿನ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ, ಮಾತನಾಡಿದರು.

ಮುಖ್ಯ ಅತಿಥಿಯಾಗಿದ್ದ ನಗರಸಭೆ ಅಧ್ಯಕ್ಷೆ ಸುಧಾರಾಣಿ ಮುರುಗೇಶ ಸಂಗಮ ಮಾತನಾಡಿದರು.

ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಕೆ.ಎ. ಬನ್ನಟ್ಟಿ, ರೋಟರಿ ಕ್ಲಬ್ ಅಧ್ಯಕ್ಷ ಮಹಾಂತೇಶ ಜಕ್ಕಲಿ ಭಾಗವಹಿಸಿದ್ದರು.

ತರುಣ ಸಂಘದ ಗೌರವಾಧ್ಯಕ್ಷ ವಿಶ್ವನಾಥ ಪಾಟೀಲ ಪ್ರಾಸ್ತಾವಿಕ ಮಾತನಾಡಿ, ಕಲಾವಿದರನ್ನು ಪ್ರೋತ್ಸಾಯಿಸಲು ಶ್ರೀಮಠ ಹಾಗೂ ತರುಣ ಸಂಘ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಜಾತ್ರೆ, ಅಡ್ಡಪಲ್ಲಕ್ಕಿ ನಡೆಯುವ 3 ದಿನವೂ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ’ ಎಂದರು.

ಸಾಂಸ್ಕೃತಿಕ ಕಾರ್ಯಕ್ರಮಗಳ ಅಧ್ಯಕ್ಷ ಮಂಜುನಾಥ ಬೆಳವಣಕಿ ಸ್ವಾಗತಿಸಿದರು. ತರುಣ ಸಂಘದ ಅಧ್ಯಕ್ಷ ಶರಣಗೌಡ ಪಾಟೀಲ, ಉಪಾಧ್ಯಕ್ಷ ಬಸನಗೌಡ ಪಾಟೀಲ, ಸಹಕಾರ್ಯದರ್ಶಿ ಚೆನ್ನಪ್ಪ ಕೌದಿ, ಖಜಾಂಚಿ ಮಹಾಂತೇಶ ಮಾಗಿ ವೇದಿಕೆಯಲ್ಲಿದ್ದರು.

ಪ್ರವೀಣ ಮುದಗಲ್ಲ ನಿರೂಪಿಸಿದರು, ಕಾರ್ಯದರ್ಶಿ ನಾಗರಾಜ ಕೋರೆನವರ ವಂದಿಸಿದರು. ಕುಷ್ಟಗಿಯ ಸ್ಪಂದನ ಮೆಲೋಡಿಸ್ ಇವರಿಂದ ಜಾನಪದ, ಭಕ್ತಿ ಗೀತೆಗಳನ್ನು ಮನರಂಜನಾ ಕಾರ್ಯಕ್ರಮ ನಡೆಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LCPORn7EbNfEBlG1MCXUuM

Share This Article
Leave a comment

Leave a Reply

Your email address will not be published. Required fields are marked *