ಬಸವ ತತ್ವದ ವಿರುದ್ಧ ಗೆರಿಲ್ಲಾ ಯುದ್ಧ ಘೋಷಿಸಿರುವ ವಚನ ದರ್ಶನ, ಶರಣರ ಶಕ್ತಿ

ಜಿ. ಬಿ. ಪಾಟೀಲ್
ಜಿ. ಬಿ. ಪಾಟೀಲ್

ಬೆಂಗಳೂರು

ಕರ್ನಾಟಕ ಸರಕಾರ ಬಸವಣ್ಣನವರನ್ನು ‘ಸಾಂಸ್ಕೃತಿಕ ನಾಯಕ’ ನೆಂದು ಘೋಷಣೆ ಮಾಡಿದ ನಂತರ ವೈರಿಪಡೆ ಎಚ್ಛೆತ್ತು ಕೊಂಡಿದೆ. ಅದೀಗ Now or never ಎಂಬಂತೆ ಮೈಕೊಡವಿಕೊಂಡು ತಂತ್ರಗಳನ್ನು ಹೆಣೆಯಲಾರಂಭಿಸಿದೆ.

ಶರಣರ ವಚನಗಳನ್ನು ತಾವೇ ಪ್ರಚಾರಮಾಡುವಂತೆ ನಟಿಸಿ, ಬಸವಣ್ಣನವರನ್ನು ಕೇವಲ ಧಾರ್ಮಿಕ ವ್ಯಕ್ತಿ ಎಂಬಂತೆ ಚಿತ್ರಿಸಿ, ಅವರನ್ನು ಭಕ್ತಿ ಚಳುವಳಿಗೆ ಸೀಮಿತಗೊಳಿಸಿ,ಅವರನ್ನು ಹಿಂದೂ ಧರ್ಮದ ಒಬ್ಬ ಉಧಾರವಾದಿ ಧಾರ್ಮಿಕ ಚಿಂತಕನೆಂಬಂತೆ ಬಿಂಬಿಸಿ, ಅವರಿಗೂ ಕಬಿರ, ಮೀರಾ, ವಿವೇಕಾನಂದ ರಂತೆ ಇವರೂ ಸಹ ಒಬ್ಬ ಹಿಂದೂಧರ್ಮದ ‘ಭಕ್ತಿಪಂತದ ನಾಯಕರು’ ಎಂದು ಪಟ್ಟ ಕಟ್ಟುವ ಆಲೋಚನೆಯಲ್ಲಿದೆ.

ವೈದಿಕರ ಕುರುಹಾದ ಆರ್. ಎಸ್. ಎಸ್. ಸಂಘಟನೆಯು ಇಂದು ಬಸವಣ್ಣನವರ ಬಗ್ಗೆ ಅಪಾರ ಕಾಳಜಿಯನ್ನು ವ್ಯಕ್ತಪಡಿಸುತ್ತಲಿದೆ. ಅವರೇ “ವಚನ ದರ್ಶನ” ಪುಸ್ತಕದ ರೂವಾರಿಗಳು. ಅದನ್ನು ಮುದ್ರಿಸಿದ್ದಲ್ಲದೆ ಅಪಾರ ಪ್ರಮಾಣದ ಹಣ ಖರ್ಚು ಮಾಡಿ ಜಿಲ್ಲೆ ಜಿಲ್ಲೆಗಳಲ್ಲಿ ಆರ್. ಎಸ್. ಎಸ್. ನಾಯಕರಿಂದ ಬಿಡುಗಡೆ ಗೊಳಿಸುತ್ತಲಿದ್ದಾರೆ. ಕೇವಲ ಮುದ್ರಣ ಮಾಧ್ಯಮವಲ್ಲದೆ ದೃಶ್ಯ ಮಾಧ್ಯಮದಲ್ಲಿಯೂ ನಮ್ಮ ಶರಣರನ್ನು ಚಿತ್ರಿಕರಿಸಲಾರಂಭಿಸಿದ್ದಾರೆ.

ಮೂರನೆಯದಾಗಿ ಸಂಘ ಪರಿವಾರದ ಸಂಘಟನೆಯೊಂದು ಕಾಲೇಜು ವಿದ್ಯಾರ್ಥಿಗಳಿಗೆ ಲಿಂಗಧಾರಣ ಮಾಡಿ, ವಚನಪಾಠ ಮಾಡಿಸುವುದಾಗಿ ಚಿಂತಿಸುತ್ತಿದ್ದಾರಂತೆ. ಎಂಟನೂರು ವರ್ಷಗಳಿಂದ ಲಿಂಗಾಯತವನ್ನು ದ್ವೇಷಿಸಿಕೊಂಡು ಬಂದ ವೈದಿಕ ಧರ್ಮಗಳು ಮತ್ತು ಅದರ ಅಂಗಸಂಸ್ಥೆಗಳು ಇಂದೇಕೆ ಶರಣ ಸಂಕುಲದ ಪ್ರಚಾರಕ್ಕಿಳಿದಿವೆ?

ಇದನ್ನೆಲ್ಲ ಗಮನಿಸಿದರೆ, ಲಿಂಗಾಯತ ವಿರೋದಿ ಶಕ್ತಿಗಳು ದೊಡ್ಡ ಮಟ್ಟದ ಯುದ್ದಕ್ಕಿಳಿದಂತಿದೆ. ಆದರೆ ಈ ಬಾರಿಯ ಯುದ್ದವು ‘conventional ಯುದ್ದ’ವಲ್ಲ, ಇದು ‘ಗೆರಿಲ್ಲಾ ವಾರ್’. ಇದು ಎದುರು ಬಂದು ಕೊಲ್ಲುವ ಯುದ್ದವಲ್ಲ. ಬೆನ್ನಿಗೆ ಚೂರಿ ಹಾಕುವ ಯುದ್ದ. ವೈರಿ ಪಡೆಯವರನ್ನು ಖರಿದಿಸಿ ಮೋಸದಿಂದ ನಮ್ಮವರನ್ನೇ ನಮ್ಮೆದರು ಎತ್ತಿ ಕಟ್ಟುವ ನೀಚ ಯುದ್ದ. ವಿರೋಧಿಗಳು ನಮ್ಮ ‘ನಮಕ್ ಹರಾಮ್’ ಗಳನ್ನು ಖರಿದಿಸಿ ನಮ್ಮೆದುರೆ ಎತ್ತಿ ಕಟ್ಟುತ್ತಿದ್ದಾರೆ. ಎದೆಯ ಮೇಲೆ ಇಷ್ಟಲಿಂಗ ಧರಿಸಿ, ಅದೆ ಲಿಂಗಕ್ಕೆ ಗುಂಡಿನ ಗುರಿ ಇಡಿ ಎಂದು ಹೇಳುವ ನೀಚರು ಅವರ ಕೈ ಸೇರಿದ್ದಾರೆ.

ಭಾರತದ ಇತಿಹಾಸವನ್ನು ಒಮ್ಮೆ ಗಮನಿಸಿದರೆ ಪರಕಿಯರು ನಮ್ಮ ಮೇಲೆ ಯುದ್ದಗಳನ್ನು ಗೆದ್ದಿದ್ದು ಇಂತಹ ನಮಕ್ ಹರಾಮಗಳನ್ನು ಖರಿದಿಸಿಯೇ ಅಲ್ಲವೆ?

ಇರಲಿ. ವಿಷಯಕ್ಕೆ ಬರೋಣ. ಈಗಾಗಲೇ “ವಚನ ದರ್ಶನ” ಪುಸ್ತಕ ಮುದ್ರಣಗೊಂಡು ಜಿಲ್ಲೆ ಜಿಲ್ಲೆಗಳಲ್ಲಿ ಆರ್.ಎಸ್.ಎಸ್. ನಾಯಕರಿಂದ ಬಿಡುಗಡೆಗೊಂಡಿದೆ. ಮೇಲಾಗಿ “ವಚನ ದರ್ಶನ” ವೆಂಬ ೨೫೦ ಪುಟಗಳ ಕನ್ನಡದ ಒಂದು ಪುಸ್ತಕವು ಭಾರತದ ರಾಜದಾನಿ ದೆಹಲಿಯಲ್ಲಿ ಬಿಡುಗಡೆ ಯಾಗುತ್ತಿದೆ. ಬಲಪಂತಿಯ ಸರಕಾರದ ಮಂತ್ರಿಗಳು ಅದನ್ನು ಬಿಡುಗಡೆ ಗೊಳಿಸುತ್ತಿದ್ದಾರೆ.

ಇನ್ನೊಂದು ಕಡೆ “ಶರಣರ ಶಕ್ತಿ” ಎಂಬ ಚಲನಚಿತ್ರ ಮುಂದಿನ ತಿಂಗಳ ೮ರಂದು ತೆರೆ ಕಾಣುತ್ತಿದೆ. ಈ ಚಿತ್ರದಲ್ಲಿ ಬಸವಣ್ಣನವರನ್ನು ಕೊಲ್ಲಲಾಗಿದೆಯಂತೆ, ಅಕ್ಕನಾಗಮ್ಮನ ತೇಜೋವಧೆ ಮಾಡಲಾಗಿದೆಯಂತೆ. ಜಂಗಮರನ್ನು ‘ಪುಂಡ ಜಂಗಮ’ ಎಂದು ಕರೆಯಲಾಗಿದೆಯಂತೆ. ಕಾರಣ ಕೇಳಿದರೆ ಇದಕ್ಕೆ ಗ್ರಂಥಗಳ ಆಧಾರವಿದೆಯಂದು ಉತ್ತರಿಸುತ್ತಿದ್ದಾರೆ. ‘ಮಹತ್ಮಾಗಾಂಧಿಯಿಂದ ಸ್ವಾತಂತ್ರ ದೂರಕಿಲ್ಲ ಅವನೊಬ್ಬ ಹೇಡಿ’ ಎಂದು ಬರೆದ ಗ್ರಂಥಗಳನ್ನು ಬರೆಸಿದ್ದಾರೆ. ಅಂತಹ ಒಂದು ಗ್ರಂಥದ ಆಧಾರದಲ್ಲಿ ಮಹಾತ್ಮರ ವ್ಯಕ್ತಿತ್ತ ಅಳೆಯಲು ಸಾಧ್ಯವೆ?

ತೆರೆಕಾಣಲಾರುವ ಈ ಚಿತ್ರವನ್ನು ಪುನರ್ ಪರಿಶೀಲಿಸಬೇಕು ಎಂಬ ಮನವಿಯನ್ನು ಕರ್ನಾಟಕ ಫಿಲ್ಮ ಚೆಂಬರ್ ಆಫ್ ಕಾಮರ್ಸ ಅವರಿಗೆ ಇತ್ತೀಚೆಗೆ ಸ್ನೇಹಿತರೊಂದಿಗೆ ಸಲ್ಲಿಸಿದೆ. ಸಂಸ್ಥೆಯ ಅಧ್ಯಕ್ಷರು ನಮ್ಮ ಸಮಕ್ಷಮದಲ್ಲಿ ನಿರ್ಮಾಪಕರನ್ನು ಸಂಪರ್ಕಿಸಿ ನಮ್ಮ ಆಕ್ಷೇಪಣೆಯನ್ನು ವಿವರಿಸಿದರು. ಆಗ ನಿರ್ಮಾಪಕರು ತೆರೆಕಾಣುವ ಮುಂಚೆ ಚಿತ್ರವನ್ನು chamber of commerce ನವರೊಂದಿಗೆ ನಮ್ಮ ವಿದ್ವಾಂಸರಿಗೂ ಸಹ ಪ್ರದರ್ಶನ ಮಾಡುತ್ತೇವೆ ಎಂದು ಮಾತುಕೊಟ್ಟಿದ್ದಾರೆ. ನೋಡೋಣ.

ಮುಂದಿನ ಹಂತಕ್ಕೆ ನಮ್ಮ ಮಠ ಮಾನ್ಯಗಳು ಸಿದ್ಧತೆ ಮಾಡಿಕೊಳ್ಳಬೇಕು. ಇಂದು ಲಿಂಗಾಯತ ಮಠಗಳು ಧರ್ಮ ಉಳಿಸಲು ಹೊರಬರಬೇಕಾಗಿದೆ ಮತ್ತು ಲಿಂಗಾಯತವನ್ನು ಜಾಗತೀಕರಣ ಗೊಳಿಸಬೇಕಾಗಿದೆ.

Share This Article
2 Comments
  • ಖಂಡಿತ ಸತ್ಯ….ವೈದಿಕ ಪಾಷಂಡಿಗಳು ನೇರವಾಗಿ ಯುದ್ಧಮಾಡಿ ಕಾದಾಡಿ ವ್ಯಕ್ತಿಯನ್ನು ಗೆಲ್ಲುವುದಿಲ್ಲ ಕುತಂತ್ರದಿಂದ ಬೆನ್ನಿಗೆ ಚೂರಿ ಹಾಕುವ ಮೂಲಕ ಇವರ ಕುಹಕ ಶೌರ್ಯವನ್ನು ಪ್ರದರ್ಶಿಸುತ್ತಿದ್ದಾರೆ…ಲಿಂಗವಂತರು ಲಿಂಗಾಯತ ಧರ್ಮಿಯರು ಎಚ್ಚೆತ್ತುಕೊಳ್ಳದಿದ್ದರೆ…ಈ ವೈದಿಕರಿಗೆ ತಕ್ಕ ಉತ್ತರ ನೀಡದಿದ್ದರೆ ಶರಣರ ಆದರ್ಶ ತತ್ವ ಮೌಲ್ಯಗಳನ್ನು ಇತಿಹಾಸದ ಪಳುಯುಳಿಕೆಗಳಲ್ಲಿ ಇಗೂ ಒಂದು ಧರ್ಮ ಇತ್ತಂತೆ ಎಂದು ಪುಸ್ತಕಗಳಲ್ಲಿ ಇವರೆ ನಿಂತು ಬರೆಸಿ ಬಿಡ್ತಾರೆ. ಪ್ರಜ್ಞಾವಂತ ಬಸವ ಭಕ್ತರು ಇವರ ವಿರುದ್ಧ ಹೊರಾಡಲು ಸಿದ್ಧರಾಗಬೇಕಿದೆ.

  • ತಪ್ಪು ತಿಳಿದುಕೊಳ್ಳಬೇಡಿ, ಅವರು ಈ ಬಾರಿ ನೇರವಾಗಿಯೇ ಯುದ್ದಕ್ಕೆ ಇಳಿದಿದ್ದಾರೆ. ಗೆರಿಲ್ಲಾ ಯುದ್ಧ ಅನ್ನುವ ಭ್ರಮೆಯಿಂದ ಹೊರಬಂದು ನೇರ ಯುದ್ದ ಮಾಡಿ.

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ