ಬಸವನಬಾಗೇವಾಡಿ
ತಾಲೂಕಿನ ಇವಣಗಿ ಗ್ರಾಮದಲ್ಲಿ ಡಿ, 2 ರಂದು ನಡೆಯಲಿರುವ 10ನೇ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನವು ಬಸವ ವಿರೋಧಿಯಾಗಿದೆ ಎಂದು ಬಸವ ಸೈನ್ಯ ತಾಲೂಕ ಅಧ್ಯಕ್ಷ ಸಂಜುಗೌಡ ಬಿರಾದಾರ ಆರೋಪಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಕರ್ನಾಟಕದ ಸಾಂಸ್ಕೃತಿಕ ನಾಯಕರಾಗಿರುವ, ಜಗತ್ತಿನಲ್ಲಿ ಕನ್ನಡದ ಮೊದಲ ಜಗದ್ಗುರು ಯಾರಾದರೂ ಇದ್ದರೆ ಅದು ವಿಶ್ವಗುರು ಬಸವಣ್ಣನವರು. ಜನಸಾಮಾನ್ಯರಿಗೆ ತಿಳಿಯುವ ಹಾಗೆ ವಚನಗಳನ್ನು ರಚಿಸಿ, ಮನುಕುಲದ ಉದ್ಧಾರ ಮಾಡಿದ ಬಸವಣ್ಣನವರ ಜನ್ಮಸ್ಥಳದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯಲ್ಲಿ ಬಸವಣ್ಣನವರ ಭಾವಚಿತ್ರ ಹಾಕದೆ ಇರುವುದು ಖಂಡನೀಯವಾಗಿದೆ.
ಆದ ಕಾರಣ ಬಸವನಾಡಿನ ಮಠಾಧೀಶರು, ಜನಪ್ರದಿನಿಧಿಗಳು ಯಾರು ಕಾರ್ಯಕ್ರಮದಲ್ಲಿ ಭಾಗವಹಿಸಬಾರದು, ಬಹಿಷ್ಕರಿಸಬೇಕೆಂದು ಬಿರಾದಾರ ಎಲ್ಲರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಬಸವಣ್ಣ ಸಾಂಸ್ಕೃತಿಕ ನಾಯಕ ಅನ್ನೋದು ಈ ಅಧ್ಯಕ್ಷನಿಗೆ ಗೊತ್ತಿಲ್ಲವೆ ?
ಕನ್ನಡದ ಸಾಹಿತ್ಯಕ್ಕೆ ಬಸವಾದಿಶರಣರು ಕೊಟ್ಟ ಕೊಡುಗೆಯನ್ನ ಕನ್ನಡ ಸಮ್ಮೇಳನ ಆಯೋಜಕರು ಅರಿತುಕೊಳ್ಳಬೇಕು..
ಇಂತಹ ಮೂಖ೯ರು ಮತ್ತು ಹೊಲಸ್ಸು ಮನಸಿನ ದುರಹಂಕಾರಿಗಳು ಕನ್ನಡ ಪರಿಷತ್ತಿನ ಅಧ್ಯಕ್ಷರು ಇದು ನಮ್ಮ ಕನ್ನಡಿಗರ ದೌರ್ಭಾಗ್ಯ.