ಬಸವದಳದಿಂದ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ

ಸಿದ್ದಣ್ಣ ಅಂಗಡಿ
ಸಿದ್ದಣ್ಣ ಅಂಗಡಿ

ಗದಗ

ದೇಶದ ೭೯ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ, ಬಸವದಳದ ಬಸವ ಸಮುದಾಯ ಭವನ ಆವರಣದಲ್ಲಿ ವರ್ಷದಂತೆ ಈ ವರ್ಷವೂ ಸಡಗರದಿಂದ ಧ್ವಜಾರೋಹಣವನ್ನು ಬಸವದಳದ ಅಧ್ಯಕ್ಷರಾದ ವಿ.ಕೆ. ಕರೇಗೌಡ್ರ ನೆರವೇರಿಸಿದರು. ಅವರು ಮಾತನಾಡುತ್ತಾ, ಮಹಾತ್ಮಾಗಾಂಧೀಜಿಯವರ ನೇತೃತ್ವದಲ್ಲಿ ಅನೇಕ ಮಹನೀಯರು, ಹೋರಾಟಗಾರರ ತ್ಯಾಗ, ಬಲಿದಾನಗಳಿಂದ ನಮಗೆ ಸ್ವಾತಂತ್ರ ದೊರಕಿದೆ. ಅವರ ತ್ಯಾಗ, ಬಲಿದಾನಗಳನ್ನು ನಾವು ನಿತ್ಯ ಸ್ಮರಿಸಬೇಕು.

ಸಂವಿಧಾನ ಶಿಲ್ಪಿ ಬಿ. ಆರ್. ಅಂಬೇಡ್ಕರರು ನೀಡಿದ ಸಂವಿಧಾನದ ಅಡಿಯಲ್ಲಿ ನಾವಿದ್ದೇವೆ. ಭಾರತೀಯರೆಲ್ಲ ಅಂದರೆ ೧೪೦ ಕೋಟಿ ಜನರೂ ಒಂದಾಗಿಯೇ ಹೋಗಬೇಕು. ಬಹುತ್ವದಲ್ಲಿ ಏಕತೆಯಿಂದ ಸಾಗಬೇಕೆಂದರು. ಅಲ್ಲದೇ ದೇಶಾಭಿಮಾನ ಹೆಚ್ಚಿಸಿಕೊಳ್ಳಬೇಕೆಂದರು.

ನಂತರ ಬಸವದಳದ ಹಿರಿಯರಾದ ನಿವೃತ್ತ ಶಿಕ್ಷಕರಾದ ಶರಣ ಎನ್.ಎಸ್. ಹಕಾರಿಯವರು ಸ್ವಾತಂತ್ರೋತ್ಸವದ ಕುರಿತಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಇದೇ ಸಂದರ್ಭದಲ್ಲಿ ಲಿಂಗದೊಳಗಾದ ಶರಣ ಪೂಜ್ಯ ಶರಣಬಸವಪ್ಪ ಅಪ್ಪಾ ಅವರಿಗೆ ಭಾವಪೂರ್ಣ ಶೃದ್ಧಾಂಜಲಿ ಅರ್ಪಿಸಲಾಯಿತು. ಪ್ರಕಾಶ ಅಸುಂಡಿಯವರು ಲಿಂಗೈಕ್ಯರ ದಾಸೋಹ ಸೇವೆ ಸ್ಮರಿಸಿ‌ ಅವರ ಗುಣಗಾನ ಮಾಡಿದರು.

ಬಸವದಳದ ಶರಣ ಶರಣೆಯರು ಉಪಸ್ಥಿತರಿದ್ದರು. ವಂದೇ ಮಾತರಂ ಘೋಷಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LCPORn7EbNfEBlG1MCXUuM

Share This Article
Leave a comment

Leave a Reply

Your email address will not be published. Required fields are marked *