ರಾಷ್ಟ್ರೀಯ ಬಸವದಳ ಸಂಘಟನೆಗೆ ಆದ್ಯತೆ ನೀಡಿ: ವೀರೇಶ ಚಳ್ಳಕೇರಿ

ಬಸವ ಮೀಡಿಯಾ
ಬಸವ ಮೀಡಿಯಾ

ಚಿಟಗುಪ್ಪ

ಸಂಘಟನೆಗೆ ಹೆಚ್ಚು ಆದ್ಯತೆ ನೀಡಿ, ಬಸವತತ್ವ ಮನೆ ಮನಗಳಿಗೆ ಪ್ರಚಾರ ಮಾಡಬೇಕು ಎಂದು ರಾಷ್ಟ್ರೀಯ ಬಸವದಳದ ರಾಜ್ಯಾಧ್ಯಕ್ಷ ಕೆ. ವೀರೇಶ ಚಳ್ಳಕೇರಿ ತಿಳಿಸಿದರು. ತಾಲೂಕಿನ ಕಂದಗೋಳ ಗ್ರಾಮದ ರಾಷ್ಟ್ರೀಯ ಬಸವ ದಳದ ಕಾರ್ಯಾಲಯದಲ್ಲಿ ಹಮ್ಮಿಕೊಂಡ ತಾಲೂಕು ಸಂಘಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಬಸವದಳದ ಪ್ರಮುಖ ಉದ್ದೇಶಗಳ ಬಗ್ಗೆ ಪ್ರಸ್ತಾಪಿಸಿ, ಅವುಗಳನ್ನು ಕಡ್ಡಾಯವಾಗಿ ಪಾಲಿಸಿ, ಜಾರಿಗೆ ತರುವ ಕೆಲಸ ಆಗಬೇಕು. ನಿರಂತರವಾಗಿ ತಾಲೂಕಿನಾದ್ಯಂತ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳಿಗೊಮ್ಮೆ ಸಭೆ ಆಗಲೇ ಬೇಕು. ಸದಸ್ಯತ್ವ ಅಭಿಯಾನ ನಿರಂತರವಾಗಿ ನಡೆಸಬೇಕು. ಬಸವತತ್ವ ಬೆಳೆಸುವ ಕಾಯಕ ಪ್ರಾಮಾಣಿಕವಾಗಿ ಮಾಡಬೇಕೆಂದು ಹೇಳಿದರು.

ಸಾನಿಧ್ಯ ವಹಿಸಿದ್ದ ಬಸವ ಧರ್ಮ ಪೀಠದ ಸಾಧಕರಾದ ಪೂಜ್ಯ ನಿಮಿಷಾನಂದ ಸ್ವಾಮಿಗಳು ಮಾತನಾಡಿ, ಲಿಂಗೈಕ್ಯ ಲಿಂಗಾನಂದ ಸ್ವಾಮಿಗಳು ಹಾಗೂ ಮಾತಾಜಿ ಅವರ ನಿಸ್ವಾರ್ಥ ಸೇವೆ, ತ್ಯಾಗದ ಪರಿಣಾಮದಿಂದ ಇಂದು ರಾಷ್ಟ್ರೀಯ ಬಸವ ದಳ ಸಂಘಟನೆ ರಾಷ್ಟ್ರ ಮಟ್ಟದಲ್ಲಿ ಹೆಮ್ಮರವಾಗಿ ಬೆಳೆದು ನಿಂತಿದೆ.

ಅವರುಗಳು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು. ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಪ್ರತಿದಿನ ಕೆಲಸ ಮಾಡಲು ಸ್ವಾಮೀಜಿ ತಿಳಿಸಿದರು. ತಾಲೂಕಾಧ್ಯಕ್ಷ ರಾಜಶೇಖರ ದೇವಣಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಸಭೆಯಲ್ಲಿ ಸಾಹಿತಿ ಸಂಗಮೇಶ ಜವಾದಿ, ಚಂದ್ರಶೇಖರ ತಂಗಾ, ವೀರೇಶ ಮಠಪತಿ, ಜಗನ್ನಾಥ ದೇವಣಿ, ಬಂಡೆಪ್ಪಾ ಮೂಲಗೆ, ಅನೀಲಕುಮಾರ ಸಿಂದಗಿರಿ, ಬಸವಂತರಾವ ಮಾಲಿಪಾಟೀಲ, ರವೀಂದ್ರ ಪವಾಡಶೆಟ್ಟಿ, ಶಿವರಾಜ ಸಜ್ಜನಶೆಟ್ಟಿ, ಪ್ರವೀಣ ಕಲ್ಯಾಣಿ, ಮಲ್ಲಶೆಟ್ಟಿ ಧೂಳಾ, ಶರಣಪ್ಪ ಚಿಟ್ನಳ್ಳಿ, ಶ್ರೀನಿವಾಸ ಧೋಮಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ 24ನೇ ಕಲ್ಯಾಣ ಪರ್ವ ಉತ್ಸವದ ಅಂಗವಾಗಿ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ https://chat.whatsapp.com/BvguxN7Z0AG9g7Il7l5Lzh

Share This Article
Leave a comment

Leave a Reply

Your email address will not be published. Required fields are marked *