ಬೆಂಗಳೂರು:
ಮಹಾನಗರದ ಎನ್. ಎಮ್. ಹೆಚ್. ಬಡಾವಣೆಯಲ್ಲಿರುವ ಬಸವಧ್ಯಾನ ಕೇಂದ್ರದಲ್ಲಿ ಜಗನ್ಮಾತೆ, ಶರಣೆ ಅಕ್ಕಮಹಾದೇವಿ ಜಯಂತಿಯನ್ನು ಆಚರಿಸಲಾಯಿತು.
ಧ್ಯಾನ ಕೇಂದ್ರದ ಮಾತೆ ಓಂಕಾರೇಶ್ವರಿ ಸಾನಿಧ್ಯ ವಹಿಸಿ ಮಾತನಾಡಿದರು. ಭೂಮಿಕಾ ಸೇವಾ ಫೌಂಡೇಶನ್ ಅಧ್ಯಕ್ಷೆ ಲತಾ ಕುಂದರಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದದರು. ಶರಣೆ ಕಲ್ಯಾಣಮ್ಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಚನ ಪಠಣ, ವಚನ ನೃತ್ಯ, ವಚನ ಗಾಯನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಅನೇಕ ಶರಣ ಶರಣೆಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
