ನಂಜನಗೂಡು
ಬಸವ ಮಾಸ ಕಾರ್ಯಕ್ರಮದ ಅಂಗವಾಗಿ 12ನೇ ಶತಮಾನದ ಶರಣರ ವೇಷಭೂಷಣ ಸ್ಪರ್ಧೆ ಮತ್ತು ಪ್ರದರ್ಶನ ಶನಿವಾರ ಪಟ್ಟಣದಲ್ಲಿ ನಡೆಯಿತು.
ಪುಟಾಣಿ ಮಕ್ಕಳಿಂದ ಪ್ರಾರಂಭಗೊಂಡು ಹಿರಿಯರು ಕೂಡ ಶರಣರ ವೇಷ ಭೂಷಣವನ್ನು ಹಾಕಿಕೊಂಡು ಭಕ್ತರ ಮುಂದೆ ಪ್ರದರ್ಶನ ನೀಡಿದ್ದು ಎಲ್ಲರ ಮನಸೂರೆಗೊಂಡಿತು.

ವಿಶೇಷವಾಗಿ ಕೆಲವರು ಕುಟುಂಬ ಸಮೇತರಾಗಿ ವೇಷಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಗಮನ ಸೆಳೆಯಿತು. ಹರಳಯ್ಯ, ಕಲ್ಯಾಣಮ್ಮನವರಾಗಿ ಬಂದ ಅಂಗಳಪುರದ ಸುರೇಶ್ ದಂಪತಿಗಳು ಎಲ್ಲರ ಮೆಚ್ಚುಗೆ ಪಡೆದರು. ರವಿ ದಂಪತಿಗಳು ತಮ್ಮ ಪುಟ್ಟ ಮಗುವಿನ ಜೊತೆ ಛದ್ಮವೇಷ ಪಾತ್ರವಹಿಸಿದ್ದರು.

ಕೊಟ್ಟಿದ್ದ ಸೊಮವ್ವೆ ಆಯ್ದಕ್ಕಿ ಲಕ್ಕಮ್ಮ, ಬಸವಣ್ಣ, ನೀಲಾಂಬಿಕೆ, ಬೊಂತಾದೇವಿಯಾಗಿ ಬಂದ ಪಾತ್ರದಾರಿಗಳನೆಲ್ಲಾ ನೋಡಿ ಪ್ರೇಕ್ಷಕರಿಗೆ 12ನೇ ಶತಮಾನದ ಶರಣರೇ ಕಣ್ಣಮುಂದೆ ಬಂದಂತೆ ಬಾಸವಾಗಿತ್ತು. ಅಕ್ಕನಾಗಮ್ಮನವರ ಛದ್ಮವೇಷ ದಾರಿ ಎಲ್ಲರ ಮೆಚ್ಚುಗೆ ಪಡೆದರು.
ಬಸವ ಮಾಸ ಸಮಿತಿ ಆಯೋಜಿಸಿದ್ದ ಪ್ರವಚನಗಳಲ್ಲಿ ಮತ್ತು ಇತರ ಕಾರ್ಯಕ್ರಮಗಳಲ್ಲಿ ಹಿಂದೆಂದೂ ಕಾಣದಷ್ಟು ಭಕ್ತರು ಈ ವರ್ಷ ನೆರೆದಿದ್ದರು.





ದಕ್ಷಿಣದ ನಂಜಗೂಡಿನಲ್ಲಿ ಇದೊಂದು ವಿಶೇಷವಾದ ಕಾರ್ಯಕ್ರಮ
ಓಂ ಶ್ರೀ ಗುರುಬಸವಾಯ ನಮಃ. ಅವಕಾಶವೆಂಬ ಆಸೆಯ ತೋರಿ ಪ್ರಶಂಸೆ ಎಂಬಾ ಬಹುಮಾನ ನೀಡಿದ ಬಸವ ಮಾಸ ಸಮಿತಿಗೆ ಹೃದಯ ತುಂಬಿ ಅಭಿನಂದನೆಗಳು. ಶರಣು ಶರಣಾರ್ಥಿ🙏