ಬೀದರ
ವಚನ ವಿಜಯೋತ್ಸವವನ್ನು ದಿನಾಂಕ 10 ರಿಂದ 12 ಫೆಬ್ರವರಿ 2025ಕ್ಕೆ ಬಸವಗಿರಿಯಲ್ಲಿ ಆಚರಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ಸರ್ವ ಶರಣ ಬಂಧುಗಳು ಪ್ರತಿ ವರ್ಷದಂತೆ ಭಕ್ತಿ ಹಾಗೂ ಶೃದ್ಧೆಯಿಂದ ಈ ಉತ್ಸವದಲ್ಲಿ ಸಹಭಾಗಿಯಾಗಿ ಶರಣರ ಕರುಣೆಗೆ ಪಾತ್ರರಾಗಬೇಕೆಂದು ಕೋರಲಾಗುತ್ತಿದೆ ಎಂದು ಬಸವ ಸೇವಾ ಪ್ರತಿಷ್ಠಾನ ಬಸವಗಿರಿಯ ಅಧ್ಯಕ್ಷರಾದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸವ ಸೇವಾ ಪ್ರತಿಷ್ಠಾನ ಬೀದರ ವತಿಯಿಂದ 2002 ರಿಂದ ಪ್ರತಿವರ್ಷ ವಚನ ವಿಜಯೋತ್ಸವ ಆರಂಭದಲ್ಲಿ 6 ವರ್ಷ ಇಲ್ಲಿನ ಶರಣ ಉದ್ಯಾನದಲ್ಲಿ ಆಚರಿಸಲಾಗುತ್ತಿತ್ತು. ಅದೇ ಉತ್ಸವ 2008 ರಿಂದ ಬಸವ ಸೇವಾ ಪ್ರತಿಷ್ಠಾನದ ಮುಖ್ಯಾಲಯ ಬಸವಗಿರಿಯಲ್ಲಿ ಸತತವಾಗಿ 17 ವರ್ಷಗಳಿಂದ ಭಕ್ತಿ, ಶೃದ್ಧೆ ಹಾಗೂ ವಿಜೃಂಭಣೆಯಿಂದ ಆಚರಿಸುತ್ತಾ ಬಂದಿದೆ, ಎಂದು ಹೇಳಿದ್ದಾರೆ.