ಬೆಳಗಾವಿ
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕದ ವತಿಯಿಂದ ನಾಲ್ಕರಿಂದ ಏಳನೆಯ ತರಗತಿ ಮಕ್ಕಳಿಗೆ ‘ಮಹಾತ್ಮಾ ಬಸವಣ್ಣನವರ ಬಾಲ್ಯ ಜೀವನ’ ಕುರಿತು ನಿಬಂಧ ಸ್ಪರ್ಧೆಯನ್ನು 2025 ಫೆಬ್ರುವರಿ 9ರ ರವಿವಾರದಂದು ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಮುಂಜಾನೆ 11 ಗಂಟೆಗೆ ಏರ್ಪಡಿಸಲಾಗಿದೆ.
ನಿಬಂಧದ ಮಿತಿ 2 ಪುಟ ಇರುವದು. ವಿಜೇತ ಮಕ್ಕಳಿಗೆ ನಗದು ಪುರಸ್ಕಾರ ಮತ್ತು ಪ್ರಶಸ್ತಿಪತ್ರ ನೀಡಿ, ಫೆಬ್ರುವರಿ 29 ರಂದು ಲಿಂಗಾಯತ ಭವನದಲ್ಲಿ ನಡೆಯುವ ಅಮಾವಾಸ್ಯೆಯ ಅನುಭಾವ ಕಾರ್ಯಕ್ರಮದಲ್ಲಿ ಗೌರವಿಸಲಾಗುವದು ಎಂದು ಬೆಳಗಾವಿ ಜಿಲ್ಲಾ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷೆ ಶರಣೆ ರತ್ನಪ್ರಭಾ ಬೆಲ್ಲದ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಯಾವುದೇ ಶಾಲೆಯ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಹೆಚ್ಚಿನ ವಿವರಗಳಿಗೆ ಪ್ರಧಾನ ಕಾರ್ಯದರ್ಶಿ ಡಾ. ಮಹೇಶ ಗುರನಗೌಡರ-99720 53882 ಅಥವಾ ಪ್ರವೀಣ-91643 45208, 63663 16671ಅವರುಗಳನ್ನು ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಿದೆ.