ಬಸವಣ್ಣನವರ ವಿರಾಟ ಶಕ್ತಿ ಸ್ಥಾವರವಲ್ಲ ಜಂಗಮ: ಪ್ರಭುದೇವ ಶ್ರೀ

ಸುಪ್ರೀತ ಪತಂಗೆ
ಸುಪ್ರೀತ ಪತಂಗೆ

ಬೀದರ

ಬಸವಣ್ಣ ಬಯಲಾಗಲಿಲ್ಲ ಇಂದಿಗೂ ವಚನ ಶರೀರಧಾರಿಯಾಗಿ ಮನುಕುಲಕ್ಕೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಬಸವಣ್ಣನವರ ವಿರಾಟ ಶಕ್ತಿ ಸ್ಥಾವರವಲ್ಲ ಜಂಗಮ ಎಂದು ಲಿಂಗಾಯತ ಮಹಾಮಠದ ಪೂಜ್ಯ ಪ್ರಭುದೇವ ಸ್ವಾಮೀಜಿ ನುಡಿದರು.

ಬಸವಕಲ್ಯಾಣದ ಅರಿವಿನ ಮನೆಯಲ್ಲಿ 5 ದಿನಗಳ ಶಿವಯೋಗ ಅನುಷ್ಠಾನ ಸಮಾರೋಪ ಹಾಗೂ ಬಸವ ಪಂಚಮಿ ಆಚರಣೆ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಗೋರ್ಟ(ಬಿ) ಗ್ರಾಮದ ನೀಲಮ್ಮನ ಬಳಗದ ಶರಣೆಯರು ಹಾಗೂ ಬಸವಕಲ್ಯಾಣದ ಬಸವ ಭಕ್ತರೆಲ್ಲ ಸೇರಿ ಅರಿವಿನ ಮನೆಯಲ್ಲಿ ಇಷ್ಟಲಿಂಗಪೂಜೆ ಪ್ರಾರ್ಥನೆ ಹಾಗೂ 108 ವಚನ ಪಠಣ ಮಾಡುವುದರ ಮುಖಾಂತರವಾಗಿ ಬಸವ ಪಂಚಮಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿರುವ ಪೂಜ್ಯರು ಜಾತಿಭೇದ, ವರ್ಗಭೇಧ, ವರ್ಣಭೇದ ಮುಂತಾದ ಅಂಧಕಾರವನ್ನು ತುಂಬಿದ ಸಂದರ್ಭದಲ್ಲಿ ಬಸವಣ್ಣನವರು ಆಕಾಶ ದೀಪವಾಗಿ, ಜ್ಞಾನದ ಖಡ್ಗ ಹಿಡಿದು ಜಗತ್ತಿಗೆ ಬಂದವರು.

ಮರ್ತ್ಯಲೋಕದ ಮಹಾಮನೆ ಹಾಳಾಗಿ ಹೋಗಬಾರದೆಂದು ಭಕ್ತಿ ಪಥವ ತೋರಲು ಬಸವಣ್ಣನವರು ಬಂದರೆಂದು ಶರಣರ ವಚನಗಳಲ್ಲಿ ನಾವು ನೋಡುತ್ತೇವೆ. ಅವರು ಕಟ್ಟಿದ ಭಕ್ತಿ ಸಾಮ್ರಾಜ್ಯ ಶಾಶ್ವತವಾಗಿದ್ದು, ಮನಕುಲವನ್ನು ರಕ್ಷಿಸುತ್ತಿದೆ.

ಯಾರಿಗೆ ಯಾರಿಲ್ಲವೋ ಅವರಿಗೆ ನಾನಿದ್ದೇನೆ ಎಂದು ಅಭಯ ನೀಡಿ ಮೇಲೆತ್ತಿದವರು ಗುರು ಬಸವಣ್ಣನವರು. ಎಲ್ಲೆಲ್ಲಿ ಶರಣ ಗಣ ಮೇಳಾಪ ನಡೆವುದೋ ಅಲ್ಲಿ ಬಸವಣ್ಣನವರಿರುವರು ಎಂದು ತಿಳಿಸಿದರು.

ನಾಡಿನಾದ್ಯಂತ ಇಂದು ಬಸವ ಪಂಚಮಿ ಆಚರಿಸುವುರುವರು ಹುತ್ತಿಗೆ ಹಾಲೆರೆಯುವ ಮೌಢ್ಯ ಆಚರಣೆಯಿಂದ ಹೊರಬಂದು, ಇಂದು ಬಸವಭಕ್ತರೆಲ್ಲ ಹಾಲು ಕುಡಿಯುವ ಹಬ್ಬವಾಗಿ ಆಚರಿಸುತ್ತಿರುವುದು ತುಂಬಾ ಸಂತೋಷ. ಹಾಲು ಹಾವಿನ ಆಹಾರವಲ್ಲ ಹುತ್ತಿಗೆ ಹಾಲೆರೆದು ಹಾಲು ಹಾಳು ಮಾಡುವ ಬದಲಿಗೆ ಉಂಬ ಉಡುವ ಕೂಡಲಸಂಗಮದೇವ ಜಂಗಮ ಮುಖದಲ್ಲಿ ಎನ್ನುವ ವಚನದಂತೆ ಹಸಿದ ಹೊಟ್ಟೆಗೆ ಹಾಲು ನೀಡಬೇಕು ವಿನಹಃ ಹಾಳುಮಾಡಬಾರದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸೋಮನಾಥಪ್ಪ ರಾಜೇಶ್ವರೆ ವಚನ ಗಾಯನ ಮಾಡಿದರು. ಸೋನಾಲಿ ನೀಲಕಂಠ ಗುರುಪೂಜೆ ನೆರವೇರಿಸಿದರು.
ಬಸವೇಶ್ವರ ದೇವಸ್ಥಾನದ ಪಂಚ ಕಮಿಟಿಯ ನಿರ್ದೇಶಕರಾದ ಕಾಶಪ್ಪ ಸಕ್ಕರಭಾವಿ ಅವರು ದಾಸೋಹಗೈದರು. ರವೀಂದ್ರ ಕೊಳಕೂರ ಅವರು
ಪೂಜೆ ಪ್ರಾರ್ಥನೆಯಲ್ಲಿ ಭಾಗಿಯಾದರು.

ಚಂದ್ರಕಾಂತ ಕಣಜೆ, ಬಸವರಾಜ ಮಾಶೆಟ್ಟಿ, ಬಾಬುರಾವ ರಾಜೊಳೆ, ಸುಭಾಷ ಪತಂಗೆ, ಶಿಖರೇಶ್ವರ ರಾಜೊಳೆ, ಸುಮಿತ್ರ ದಾವಣಗಾವೇ ಮತ್ತಿತರರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/GC2sh4ZJxi0HaucjgFblZs

Share This Article
Leave a comment

Leave a Reply

Your email address will not be published. Required fields are marked *