ಅತ್ತಿವೇರಿಯ ಪೂಜ್ಯ ಬಸವೇಶ್ವರಿ ಮಾತಾಜಿಯವರು ನೀಡುತ್ತಿರುವ ‘ಬಸವಣ್ಣನವರ ಜೀವನ ದರ್ಶನ ಪ್ರವಚನ’ದ ತುಣುಕು.
ನಂಜನಗೂಡು
ಕೂಡಲಸಂಗಮಕ್ಕೆ ಹೋಗುತ್ತಿದ್ದ ಒಬ್ಬ ಬಡ ರೈತನ ಎತ್ತಿನ ಗಾಡಿಗೆ ಒಂದು ಬೆಕ್ಕು ಆಕಸ್ಮಿಕವಾಗಿ ಸಿಲುಕಿ ಸತ್ತು ಹೋಯಿತು.
ಗಾಬರಿಯಾದ ರೈತನಿಗೆ ಪಾಪ ಪರಿಹಾರಕ್ಕೆ ಒಬ್ಬ ಜ್ಯೋತಿಷಿಯ ಸಲಹೆ ಕೇಳಿದ. ನನಗೆ ಚಿನ್ನದ ಬೆಕ್ಕು ದಾನ ಮಾಡದಿದ್ದರೆ ನಿನ್ನ ವಂಶ ನಿರ್ವಂಶವಾಗುತ್ತದೆ ಎಂದು ಆ ಮಹಾನುಭಾವ ಹೆದರಿಸಿದ.
ಮತ್ತಷ್ಟು ಗಾಬರಿಯಾದ ರೈತನನ್ನು ಬಸವಣ್ಣನವರು ಸಮಾಧಾನಪಡಿಸಿದರು. ‘ತಿಳಿಯದೆ ಮಾಡಿದ ತಪ್ಪನ್ನು ದೇವರು ಕ್ಷಮಿಸುತ್ತಾನೆ, ನೀನು ಬೇಕೂಂತ ತಪ್ಪು ಮಾಡಿಲ್ಲ, ಇವರ ಸಹವಾಸಕ್ಕೆ ಹೋಗಬೇಡ,’ ಎಂದು ತಿಳಿಸಿ ಕಳಿಸಿದರು.
ಚಿನ್ನದ ಬೆಕ್ಕು ಕೇಳಿದರೆ ಕೊಡಬಹುದು, ಚಿನ್ನದ ಆನೆ ಕೇಳಿದರೆ, ಏನು ಮಾಡುವುದು ಎಂದು ಮಾತಾಜಿ ಕೇಳಿದರು.
ವಿಶ್ವ ಬಸವ ಸೇನೆ ಮತ್ತು ಬಸವ ಮಾಸ ಸಮಿತಿಯ ವತಿಯಿಂದ ಪ್ರವಚನ ನಡೆಯುತ್ತಿದೆ.