ಅತ್ತಿವೇರಿಯ ಪೂಜ್ಯ ಬಸವೇಶ್ವರಿ ಮಾತಾಜಿಯವರು ನೀಡುತ್ತಿರುವ ‘ಬಸವಣ್ಣನವರ ಜೀವನ ದರ್ಶನ ಪ್ರವಚನ’ದ ತುಣುಕು.
ನಂಜನಗೂಡು
ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಬೇಕಾದರೆ ಅದು ತೀರ್ಥ, ತಾಯತಗಳಂತಹ ಮೂಢನಂಬಿಕೆಗಳಿಂದ ಸಾಧ್ಯವಿಲ್ಲ. ಸತಿ ಪತಿ ಒಬ್ಬರೊನ್ನಬ್ಬರು ಅರಿತು ಅಕ್ಕರೆ, ಸಂಯಮದಿಂದ ವರ್ತಿಸಿದರೆ ಮಾತ್ರ ಸಾಧ್ಯ.
ಒಬ್ಬಳು ದಿನಾ ಮನೆಯಲ್ಲಿ ನಡೆಯುತ್ತಿದ್ದ ಜಗಳವನ್ನು ನಿಲ್ಲಿಸಲು ತೀರ್ಥ ಮಂತ್ರಿಸಿ ಕೊಡಿ ಎಂದು ತನ್ನ ಗುರುಗಳನ್ನು ಕೇಳಿದಳು. ಅವಳಿಗೆ ಜೀವನದ ಒಂದು ದೊಡ್ಡ ಪಾಠವನ್ನು ಗುರುಗಳು ಸರಳವಾಗಿ ಕಲಿಸಿದ ರೀತಿಯನ್ನು ಮಾತಾಜಿ ವಿವರಿಸಿದರು.
ಶರಣ ಧರ್ಮ ದಾಂಪತ್ಯ ಧರ್ಮ. ಸುಂದರವಾದ ದಾಂಪತ್ಯ ಜೀವನ ರೂಪಿಸಿಕೊಳ್ಳುವ ದಾರಿಯನ್ನೂ ಶರಣರು ತೋರಿಸಿದರು. ಬಸವಣ್ಣನವರು ಸೇರಿದಂತೆ ಬಹುತೇಕ ಶರಣರು ಗ್ರಹಸ್ಥ ಬದುಕಿನಲ್ಲಿಯೇ ಸಾರ್ಥಕತೆ ಕಂಡುಕೊಂಡರು. ಅವರ ಆದರ್ಶದಲ್ಲೇ ನಡೆಯಿರಿ, ಎಂದು ಮಾತಾಜಿ ಹೇಳಿದರು.
ಕಥೆಯನ್ನು ತುಂಬ ಸ್ವಾರಸ್ಯವಾಗಿ ಹೇಳಿದಾರೆ , ಅರ್ಥಪೂರ್ಣವಾಗಿದೆ.