ಕೊಟ್ಟೂರು
ಬಸವಣ್ಣನವರು ಜಾತಿಪದ್ಧತಿ ತಿರಸ್ಕರಿಸಿದ್ದರು, ಮೌಢ್ಯಗಳನ್ನು ಧಿಕ್ಕರಿಸಿ ವೈಚಾರಿಕ ಹಾದಿಯನ್ನು ನಿರ್ಮಿಸಿದ್ದಾರೆ. ವೈದಿಕ ಪರಂಪರೆಯಲ್ಲಿ ಬೆಳೆದಿದ್ದರೂ ಸಹ ವೈದಿಕ ಆಚರಣೆಗಳನ್ನು ತಿರಸ್ಕರಿಸಿದ್ದಾರೆ. ಕಾಯಕವೇ ಶ್ರೇಷ್ಠ ಎಂದು ಸಾರಿದ ಬಸವಣ್ಣನವರು ತುಳಿತಕ್ಕೆ ಒಳಗಾದ ಸಮಾಜವನ್ನು ಎತ್ತಿದ್ದಾರೆ ಇಂಥಹ ಮಹಾಮಹಿಮ ವಿಶ್ವಗುರು ಸಾಂಸ್ಕೃತಿಕ ನಾಯಕ ಬಸವಣ್ಣನವರು ಎಲ್ಲರಿಗೂ ಆದರ್ಶ ಎಂದು ಶಾಲಾ ಮುಖ್ಯ ಶಿಕ್ಷಕ ಪ್ರದೀಪ ಜಿ. ಈ. ಮಕ್ಕಳಿಗೆ ತಿಳಿಸಿದರು.
ತರಳಬಾಳು ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಸವಣ್ಣನವರ ಪ್ರತಿಮೆ ಅನಾವರಣ ಮಾಡಿದ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷರಾದ ಟಿ.ಮಂಜನಗೌಡ್ರು ಮಾತಾಡುತ್ತ, ಮಕ್ಕಳು ವೈಚಾರಿಕತೆ ರೂಢಿಸಿಕೊಳ್ಳಬೇಕು ಎಂದರು.
ವಿಶೇಷ ಉಪನ್ಯಾಸಕರಾಗಿ ಡಾ. ಕೆ. ಕುಸುಮ ಸಜ್ಜನ ಅವರು ಶರಣ ಸಂಸ್ಕೃತಿ ಎಂಬ ವಿಷಯದ ಮೇಲೆ ಮಾತನಾಡುತ್ತ, ಭಾರತ ದೇಶ ಸಂಸ್ಕೃತಿ ಇರುವ ದೇಶ, ಇಂತಹ ದೇಶದಲ್ಲಿ “ಶರಣರ ಸಂಸ್ಕೃತಿಯು ನಮ್ಮ ತಾಯಿ ಬೇರು “ ಇದ್ದ ಹಾಗೆ , ಅನುಭವ ಮಂಟಪದಲ್ಲಿ ಸ್ತ್ರೀಯರಿಗೆ ಗೌರವ ನೀಡುವುದರ ಮೂಲಕ ಆಚಾರ ವಿಚಾರ ಪದ್ಧತಿಯ, ಜಾತಿ ನಿರ್ಮೂಲನೆ ಬಗ್ಗೆ ತಿಳಿಹೇಳಿ ಸದೃಢ ಸಮಾಜದ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದವರು ವಿಶ್ವಗುರು ಬಸವಣ್ಣನವರು. ದೇವರು ಎಲ್ಲಿದ್ದಾನೆ ಎಂದು ಪ್ರಶ್ನೆ ಬಂದಾಗ ಭಕ್ತರ ಮನದಲ್ಲಿ ಇದ್ದಾನೆ ಎಂದು ಹುಡುಕಿಕೊಂಡವರು, ಚಿಂತೆ ಬಿಟ್ಟು – ಚಿಂತನೆ ಮಾಡಬೇಕು ಆಗ ಮಾತ್ರ ಕತ್ತಲು ದೂರವಾಗಿ ಜ್ಞಾನದ ಬೆಳಕು ಸಿಗುತ್ತದೆ. ಬೇಲಿ ಎದ್ದು ಹೊಲ ಮೇದಂತೆ , ತಾಯಿಯ ಎದೆ ಹಾಲು ವಿಷವಾದರೆ? ಈ ರೀತಿ ಪ್ರಶ್ನೆ ಬಂದಾಗ ನಮ್ಮ ಜೀವನ ಹಾಳಾಗಬಾರದೆಂದು ಹೆಜ್ಜೆ ಹೆಜ್ಜೆಗೂ ಬುದ್ಧಿಮಾತು ಹೇಳಿದವರು ಶರಣರು, ಅವರ ಮಾರ್ಗ ನಮಗೆ ಆದರ್ಶವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಧ್ವಜಾರೋಹರಣ ನೆರವೇರಿಸಿದ ಸಾಧು ಸದ್ದರ್ಮ ಸಮಾಜದ ಉಪಾಧ್ಯಕ್ಷರಾದ ಡಾ. ಬಿ.ಸಿ. ಮೂಗಪ್ಪ ಅವರು, ಭಾರತ ದೇಶ ಉದ್ದಾರ ಆಗಬೇಕಾದರೆ ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕು ಜಾತಿ ಮುಖ್ಯವಲ್ಲ ಜ್ಞಾನಮುಖ್ಯ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಎ. ರೇವಣಸಿದ್ಧಪ್ಪ ಅವರು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ರಾಜ್ಯದ ಪಾತ್ರ ಬಹಳ ಮುಖ್ಯ. ಬ್ರಿಟಿಷರನ್ನು ಮೊಟ್ಟಮೊದಲ ಬಾರಿ ಸೋಲಿಸಿದ್ದು ಕರ್ನಾಟಕದ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ, ಅಂತಹ ನಾಯಕ -ನಾಯಕಿಯರನ್ನು ನೆನೆಸಿಕೊಳ್ಳುತ್ತಾ, ನಮ್ಮ ದೇಶದ ಮೇಲೆ ಪರಕೀಯರು ದಾಳಿ ಮಾಡಿದರೆ ನಾವು ರಕ್ಷಿಸಲು ಮುಂದಾಗೋಣ ಭಾರತಮಾತೆಯ ಸೇವೆ ಮಾಡೋಣ ಎಂದರು.
ಸ್ಥಳೀಯ ಸಲಹಾ ಸಮಿತಿ ಕಾರ್ಯದರ್ಶಿ ಜಿ. ಈಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು.
ಮಕ್ಕಳಿಂದ ಸಾಮೂಹಿಕ ವಚನಗಾನ ನಡೆಯಿತು. ಈ ಸಂದರ್ಭದಲ್ಲಿ ಮಕ್ಕಳು ಬಸವಾದಿ ಶರಣರ ವೇಷಭೂಷಣ ತೊಟ್ಟು ಸಮಾರಂಭಕ್ಕೆ ಮೆರುಗು ತಂದರು.
ವಿದ್ಯಾರ್ಥಿ ಸುರಕ್ಷಾ, ಸಿಂಧು ನಿರೂಪಿಸಿದರು. ಕೊಟ್ರೇಶ ಸ್ವಾಗತಿಸಿದರು. ವಂದಾನರ್ಪಣೆಯನ್ನು ಸಂಜಯ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರು, ಸಿಬ್ಬಂದಿ ವರ್ಗದವರು ಹಾಜರಿದ್ದರು.