ಬಸವಣ್ಣನವರ ಪ್ರತಿಮೆ ವಿರೂಪ: ಬಸವಕಲ್ಯಾಣದಲ್ಲಿ ಬೃಹತ್ ಪ್ರತಿಭಟನೆ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಬಸವಕಲ್ಯಾಣ

ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಪ್ರತಿಮೆ ಮತ್ತು ಬಸವಧರ್ಮ ಧ್ವಜವನ್ನು ವಿರೂಪಗೊಳಿಸಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಬಸವೇಶ್ವರ ವೃತ್ತದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು.

ಭಾಲ್ಕಿ ತಾಲೂಕಿನ ದಾಡಗಿ ಕ್ರಾಸ್ ಬಳಿ ನಡೆಸಿರುವ ಕೃತ್ಯದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕೆಂದು, ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಮತ್ತು ವಿಶ್ವಸ್ಥ ಸಮಿತಿ ಹಾಗೂ ಲಿಂಗಾಯತ, ಸಕಲ ಬಸವಪರ ಸಂಘಟನೆಗಳಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಬಸವಣ್ಣನವರು ಮನಕುಲದ ನಾಯಕ, ಅವರು ಇವನಾರವ ಇವನಾರವ ಎಂದೆನಿಸದಿರಯ್ಯಾ ಎಂದು ಎಲ್ಲರನ್ನು ನನ್ನವರೆಂದು ಸಾರಿದ್ದಾರೆ. ಸಮಾನತೆ, ಕಾಯಕವೇ ಕೈಲಾಸ ಎಂಬ ತತ್ವದಡಿಯಲ್ಲಿ ಸಮಾಜವನ್ನು ಮಹಾತ್ಮಾ ಬಸವೇಶ್ವರರು ನಿರ್ಮಿಸಿದವರು. ದೇಶದಲ್ಲಿ ಸಾಧು, ಸಂತರ, ಶರಣರ, ಮಹಾತ್ಮರು ಹಾಗೂ ಸಾಧಕರ ಪ್ರತಿಮೆಗಳಿಗೆ ಅವಮಾನ ಎಸಗುತ್ತಿರುವ ಇಂತಹ ದುಷ್ಟರನ್ನು ಕಾನೂನು ರೀತಿ ಶಿಕ್ಷೆಗೆ ಗುರಿಪಡಿಸಬೇಕೆಂದು ಹೋರಾಟಗಾರರು ಸರ್ಕಾರವನ್ನು ಆಗ್ರಹಿಸಿದರು.

ಬಸವಕಲ್ಯಾಣ ತಹಶೀಲ್ದಾರರು ಸ್ಥಳಕ್ಕೆ ಆಗಮಿಸಿ ಮನವಿಪತ್ರ ಸ್ವೀಕರಿಸಿದರು.

ಪೂಜ್ಯ ಶ್ರೀ ಶಿವಾನಂದ ದೇವರು ಸಂಚಾಲಕರು ಅನುಭವ ಮಂಟಪ, ಪೂಜ್ಯ ಶ್ರೀ ಸಿದ್ರಾಮೇಶ್ವರ ಸ್ವಾಮಿಜಿ ಬಸವ ಮಹಾಮನೆ, ಶರಣು ಸಲಗರ ಶಾಸಕರು, ಬಾ.ಕಲ್ಯಾಣ, ವಿಜಯಸಿಂಗ್ ಮಾಜಿ ವಿ.ಪ.ಸದಸ್ಯರು, ಬಸವರಾಜ ಕೋರಕೆ ಅಧ್ಯಕ್ಷರು ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ, ಮಲ್ಲಿಕಾರ್ಜುನ ಚಿರಡೆ, ಅನೀಲ ರಗಟೆ, ಶ್ರೀಕಾಂತ ಬಡದಾಳೆ, ವೀವೇಕ ಹೊದಲುರೆ, ಅಶೋಕ ನಾಗರಾಳೆ, ಬಸವರಾಜ ಬಾಲಕಿಲೆ, ಡಾ.ಜಿ. ಎಸ್. ಭುರಾಳೆ, ಶ್ರೀಶೈಲ ಹುಡೇದ, ರವಿಂದ್ರ ಕೋಳಕುರ, ಶಿವಕುಮಾರ ಬಿರಾದಾರ, ಶಿವು ಶೆಟಗಾರ, ಡಾ. ಪೃಥ್ವಿರಾಜ ಬಿರಾದರ, ಸಿದ್ದು ಬಿರಾದರ, ಮಲ್ಲಯ್ಯಾ ಸ್ವಾಮಿ, ಸೋಮಶೇಖರ ವಸ್ತ್ರದ, ರಾಜಕುಮಾರ ಹೋಳಕುಂದೆ, ಲಕ್ಷ್ಮೀಬಾಯಿ ಪಾಟೀಲ, ವಿಜಯಲಕ್ಷ್ಮಿ ಗಡ್ಡೆ, ಜಗನ್ನಾಥ ಪಾಟೀಲ ಮತ್ತೀತರರು ಹೋರಾಟದ ನೇತೃತ್ವ ವಹಿಸಿ ಸಭೆಯಲ್ಲಿ ಮಾತನಾಡಿದರು.

ನಾಲ್ಕು ನೂರಕ್ಕೂ ಹೆಚ್ಚು ಬಸವಭಕ್ತರು, ಅನುಯಾಯಿಗಳು ಪ್ರತಿಭಟನೆಯಲ್ಲಿದ್ದರು. ರಾಷ್ಟ್ರೀಯ ಬಸವದಳ, ಬಸವತತ್ವ ಪ್ರಸಾರ ಕೇಂದ್ರ, ಅಕ್ಕನ ಬಳಗ, ದಲಿತ ಸಂಘಟನೆಗಳು, ಮುಸ್ಲಿಂ ಸಂಘಟನೆಗಳು ಹೋರಾಟ ಬೆಂಬಲಿಸಿ ಭಾಗವಹಿಸಿದ್ದವು.

Share This Article
Leave a comment

Leave a Reply

Your email address will not be published. Required fields are marked *