ಒಂದು ಕಬ್ಬು ತುಂಬಿದ ಟ್ರ್ಯಾಕ್ಟರ್ ಘೋಡವಾಡಿ ಗ್ರಾಮದಿಂದ ಉದಗೀರ್ ಪಟ್ಟಣದ ಸಕ್ಕರೆ ಕಾರ್ಖಾನೆಗೆ ಹೋಗಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಭಾಲ್ಕಿ
ಬಸವಣ್ಣನವರ ಪ್ರತಿಮೆಯ ಕೈ ಮುರಿದು ವಿರೂಪಗೊಳಿಸಿರುವ ಪ್ರಕರಣದಲ್ಲಿ ಮಹಾರಾಷ್ಟ್ರ ಮೂಲದ ಟ್ರ್ಯಾಕ್ಟರ್ ಚಾಲಕನನ್ನು ಬಂಧಿಸಲಾಗಿದೆ ಎಂದು ಬೀದರ್ ಪೊಲೀಸರು ತಿಳಿಸಿದ್ದಾರೆ.
ತಾಲೂಕಿನ ದಾಡಗಿ ಕ್ರಾಸ್ ಸಮೀಪದ ಬಸವಣ್ಣನವರ ಪ್ರತಿಮೆ ವಿರೂಪಗೊಳಿಸಿದ್ದನ್ನು ಖಂಡಿಸಿ ಜನವರಿ 15ರಂದು ಗ್ರಾಮಸ್ಥರು ಹಾಗೂ ಬಸವ ಭಕ್ತರು ರಸ್ತೆ ಸಂಚಾರ ತಡೆದು ಪ್ರತಿಭಟಿಸಿದ್ದರು.
ಜನವರಿ 16 ಮಧ್ಯರಾತ್ರಿ ಸುಮಾರು 3 ಗಂಟೆಗೆ ಟ್ರ್ಯಾಕ್ಟರ್ ಚಾಲಕನ ಅಚಾತುರ್ಯದಿಂದ ಅಪಘಾತ ಸಂಭವಿಸಿತು ಎಂದು ಚಿಂಚೋಳಿ ಪೊಲೀಸ್ ಠಾಣೆಯ ಪಿಎಸ್ಐ ಸುದರ್ಶನ್ ರೆಡ್ಡಿ ಸೋಮವಾರ ಮಾಧ್ಯಮಗಳೊಂದಿಗೆ ಘಟನೆಯ ವಿವರ ಹಂಚಿಕೊಂಡರು.

ಒಂದು ಕಬ್ಬು ತುಂಬಿದ ಟ್ರ್ಯಾಕ್ಟರ್ ಘೋಡವಾಡಿ ಗ್ರಾಮದಿಂದ ಉದಗೀರ್ ಪಟ್ಟಣದ ಸಕ್ಕರೆ ಕಾರ್ಖಾನೆಗೆ ಹೋಗಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅಂದು ರಾತ್ರಿ ಆ ಒಂದು ಕಬ್ಬಿನ ಟ್ರ್ಯಾಕ್ಟರ್ ಬಿಟ್ಟರೆ ಬೇರೆ ಯಾವುದೇ ಕಬ್ಬಿನ ವಾಹನ ಅಲ್ಲಿಂದ ಹೋಗಿರಲಿಲ್ಲ.
ಒಂದು ಕಬ್ಬು ತುಂಬಿದ ಟ್ರ್ಯಾಕ್ಟರ್ ಘೋಡವಾಡಿ ಗ್ರಾಮದಿಂದ ಉದಗೀರ್ ಪಟ್ಟಣದ ಸಕ್ಕರೆ ಕಾರ್ಖಾನೆಗೆ ಹೋಗಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಜನವರಿ 16 ರಂದೇ ಚಾಲಕ ಪತ್ತೆಯಾಗಿ ವಿಚಾರಿಸಿದಾಗ ತಪ್ಪೋಪ್ಪಿಕೊಂಡಿದ್ದಾನೆ. ಟ್ರ್ಯಾಕ್ಟರ್ ಕೂಡ ಮಹಾರಾಷ್ಟ್ರ ಮೂಲದ್ದು ಎಂದು ಪೊಲೀಸರು ತಿಳಿಸಿದ್ದಾರೆ.
ಬಸವಣ್ಣನ ಪ್ರತಿಮೆ ಮೇಲೆ ಮತ್ತು ಅಕ್ಕ ಪಕ್ಕ ಕಬ್ಬಿನ ಗುರುತುಗಳು ಸಿಕ್ಕಿದ್ದರಿಂದ ಕಬ್ಬು ತುಂಬಿದ್ದ ವಾಹನವೇ ಹೊಡೆದಿರಬಹುದು ಎಂದು ಶಂಕಿಸಲಾಗಿತ್ತು.
ಪ್ರತಿಮೆ ಮೇಲಿನ ಕಬ್ಬು ಸವರಿದ ಗುರುತು, ಕಬ್ಬಿನ ರಸದ ಕಲೆ ಮತ್ತು ಮುರಿದ ಬಲಿಷ್ಠ ರಾಡ್ ನೋಡಿದಾಗ ಮೇಲ್ನೋಟಕ್ಕೆ ಕಬ್ಬು ತುಂಬಿದ ಲಾರಿ ತಗುಲಿ ಈ ಹಾನಿಯಾಗಿದೆ ಎಂದು ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಒಂದು ಹೇಳಿಕೆ ನೀಡಿದ್ದರು.

