ಬಸವಣ್ಣ ಸಾಂಸ್ಕೃತಿಕ ನಾಯಕ ಘೋಷಣೆ ವಿರುದ್ಧ ನಡೆಯುತ್ತಿರುವ ಪ್ರತಿ ಕ್ರಾಂತಿ ‘ವಚನ ದರ್ಶನ’ ಪುಸ್ತಕ: ಅಶೋಕ ಬರಗುಂಡಿ

ಕೊಪ್ಪಳ:

ವಿಶ್ವಗುರು ಬಸವಣ್ಣನವರನ್ನು ಕನಾ೯ಟಕದ ಸಾಂಸ್ಕೃತಿಕ ನಾಯಕ ಎಂದು ಸರಕಾರದಿಂದ ಘೋಷಣೆಯಾಗಿರುವುದನ್ನು ಸಹಿಸದ ಕೆಲವು ವಿಕೃತ ಮನಸ್ಥಿತಿಯ ವ್ಯಕ್ತಿಗಳು “ವಚನ ದರ್ಶನ” ಪುಸ್ತಕ ಬರೆದಿದ್ದಾರೆ, ಎಂದು ಚಿಂತಕ ಅಶೋಕ ಬರಗುಂಡಿ ಭಾನುವಾರ ಹೇಳಿದರು.

“ಕರ್ನಾಟಕದ ವಿವಿಧ ನಗರಗಳಲ್ಲಿ ಪುಸ್ತಕದ ಬಿಡುಗಡೆ, ಪ್ರಚಾರ ನೋಡಿದರೆ, ಇದು ಕಾಲಕಾಲಕ್ಕೆ ಸನಾತನಿಗಳು ತಮ್ಮ ವಿಕೃತಿಗಳಿಗೆ ಸವಾಲಾಗಿ ಬರುವ ಬಂಡಾಯದ ಚಳವಳಿಗಳನ್ನು ಭಕ್ತಿಯ ಚಳವಳಿಯಾಗಿ ಬಿಂಬಿಸುವ ಹುನ್ನಾರವೆಂದು,” ಎಂದು ಅಭಿಪ್ರಾಯಪಟ್ಟರು.

ಸಾಂಪ್ರದಾಯಕ ಭಕ್ತಿ ಚಳುವಳಿಯೆಂದು ತೇಲಿಸಿ ಬಿಡುವ, ವಚನಗಳ ಪ್ರಸ್ತುತತೆಯನ್ನು ಲಘುಗೊಳಿಸಿಬಿಡುವ ಸನಾತನ ಸಂಸ್ಕೃತಿಯ ಪ್ರತಿ ಕ್ರಾಂತಿಯ ಭಾಗವೇ ಇದಾಗಿದೆ, ಎಂದು ಹೇಳಿದರು.

ಇಂಥ ಯತ್ನಗಳು ಹೊಸದೇನಲ್ಲ ಈ ಶಕ್ತಿಗಳ ವಿರುದ್ದ ಬಸವಪರ ಸಂಘಟನೆಯವರಾದ ನಾವು ಸಂಘಟಿತರಾಗಿ ಹೋರಾಡಬೇಕಿದೆ ಎಂದು ಹೇಳಿದರು.

ನಗರದ ಗುರುಬಸವ ಮಹಾಮನೆಯಲ್ಲಿ ಆಗಸ್ಟ್ ೪ರಿಂದ ಸೆಪ್ಟೆಂಬರ್ ೩ರವರೆಗೆ ನಡೆಯುವ “ಸಂಚಾರಿ ಅರಿವಿನ ಮನೆ” ಗೋಷ್ಠಿಗಳ ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಿ ಬರಗುಂಡಿ ಅವರು ಮಾತನಾಡಿದರು

ಸಭೆಯ ಅಧ್ಯಕ್ಷತೆಯನ್ನು ಗುಡದಪ್ಪ ಹಡಪದ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಬಸವರಾಜಪ್ಪ ಮೆರವಣಿಗೆ, ಪಂಪಾಪತಿ ಹೊನ್ನಳ್ಳಿ, ವಿಶ್ವನಾಥ ನಿಲೋಗಲ್ಲ, ಚಂದ್ರಕಲಾ ಗಬ್ಬೂರ ಪಾಲ್ಗೊಂಡಿದ್ದರು.

ಕಾಯ೯ಕ್ರಮ ನಿರೂಪಣೆಯನ್ನು ಶರಣ ಗವೀಶ ಸಸಿಮಠ,
ಶರಣು ಸಮಪ೯ಣೆಯನ್ನು ಶರಣೆ ನೀಲಮ್ಮ ಎಸ್.ಪಾಟೀಲ ನಿರ್ವಹಿಸಿದರು

Share This Article
Leave a comment

Leave a Reply

Your email address will not be published. Required fields are marked *