ಬೈಲಹೊಂಗಲದಲ್ಲಿ ಬಸವಣ್ಣನವರ ತೈಲವರ್ಣ ಚಿತ್ರ ಅನಾವರಣ

ಡಿ.ಪಿ. ನಿವೇದಿತಾ
ಡಿ.ಪಿ. ನಿವೇದಿತಾ

ಬೈಲಹೊಂಗಲ

ತಾಲೂಕಿನ ನೇಸರಗಿ ಗ್ರಾಮದ ರಾಜ್ಯ ಹೆದ್ದಾರಿಯ ಬಸವೇಶ್ವರ ವೃತದಲ್ಲಿ ವಿಶ್ವಗುರು ಬಸವೇಶ್ವರರ ಭಾವಚಿತ್ರ ಮತ್ತು ಐಕ್ಯಮಂಟಪದ ತೈಲವರ್ಣ ಚಿತ್ರದ ನಾಮಫಲಕ ಅನಾವರಣ ಕಾರ್ಯಕ್ರಮ ಈಚೆಗೆ ನಡೆಯಿತು.

ಜಾಗತಿಕ ಲಿಂಗಾಯತ ಮಹಾಸಭಾ ಗ್ರಾಮ ಘಟಕ, ಬಸವ ಚಿಂತನ ವೇದಿಕೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಫಲಕದ ಅನಾವರಣವನ್ನು ಬೆಳಗಾವಿ ಶ್ರೀ ರುದ್ರಾಕ್ಷಿಮಠ ನಾಗನೂರು ಪೂಜ್ಯರಾದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ನೆರವೇರಿಸಿದರು. ಪೂಜ್ಯ ಚಿದಾನಂದ ಮಹಾಸ್ವಾಮಿಗಳು ಶ್ರೀ ಗಾಳೇಶ್ವರಮಠ ನೇಸರಗಿ ಅವರು ಸಮ್ಮುಖ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕಿತ್ತೂರು ಶಾಸಕರಾದ ಬಾಬಾಸಾಹೇಬ್ ಪಾಟೀಲ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ, ಅಶೋಕ ಮಳಗಲಿ, ನ್ಯಾಯವಾದಿ ವಿ. ಕೆ. ಪಾಟೀಲ ಆಗಮಿಸಿದ್ದರು. ವೃತ್ತದಲ್ಲಿ ವಿಶ್ವಗುರು ಬಸವಣ್ಣನವರ ಅಶ್ವಾರೂಢ ಮೂರ್ತಿಯನ್ನು ಸ್ಥಾಪಿಸಬೇಕೆಂದು ನೇಸರಗಿ ಭಾಗದ ಬಸವ ಭಕ್ತರ ಪರವಾಗಿ ಶಾಸಕರಾದ ಬಾಬಾಸಾಹೇಬ ಪಾಟೀಲ್ ಅವರಿಗೆ ಮನವಿಯನ್ನು ಅರ್ಪಿಸಲಾಯಿತು.

ಸೆಪ್ಟೆಂಬರ್ ತಿಂಗಳಲ್ಲಿ ಜರುಗುವ ‘ಬಸವ ಸಂಸ್ಕೃತಿ ಅಭಿಯಾನ’ದ ಕುರಿತು ಬಸವರಾಜ ರೊಟ್ಟಿ ಈ ಸಂದರ್ಭದಲ್ಲಿ ಮಾತನಾಡಿದರು. ಅಭಿಯಾನದ ಕರಪತ್ರಗಳನ್ನು, ಶಾಸಕರು ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಈಶ್ವರ ಭಾಗೋಜಿ, ಪಕೀರಪ್ಪ ಸೋಮಣ್ಣವರ, ಎಸ್. ಬಿ. ಗೆಜ್ಜೆ ಚೋಬಾರಿ, ಸೋಮಣ್ಣವರ, ಹಸಬಿ ಹಾಗು ನೇಸರಗಿ ಭಾಗದ ಬಸವಭಕ್ತರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ

https://chat.whatsapp.com/LCPORn7EbNfEBlG1MCXUuM

Share This Article
Leave a comment

Leave a Reply

Your email address will not be published. Required fields are marked *

ಬಸವ ತತ್ವ ಪ್ರಚಾರಕರು, ಗುರು ಬಸವ ಮಠ, ನಾಗನೂರು