ಬಸವಣ್ಣನವರಿಗೆ ಪಂಚಪೀಠಗಳು ಬೇಕು ಅನ್ನುವ ಭ್ರಮೆಯಿಂದ ಹೊರಗೆ ಬನ್ನಿ

ನಮ್ಮಪ್ಪ ಬಸವಣ್ಣನವರು ಏನೇ ಹೇಳಿದರು ವೈಜ್ಞಾನಿಕತೆಯಿಂದ ಮತ್ತು ಅನುಭಾವದಿಂದ ಹೇಳಿದ್ದಾರೆ. ಅಜ್ಞಾನಿ ತರ ಅವರು ಕಲ್ಲಾಗ ಹುಟ್ಟಿದ್ದು, ಇವರು ಕಲ್ಲಾಗ ಉದ್ಭವಿಸಿದ್ದು ಅಂತಾ ಹೇಳಿಲ್ಲ.

ನಾಗನೂರು

ಬಸವಣ್ಣನವರಿಗೂ ಪಂಚಪೀಠಗಳು ಬೇಕು, ಪಂಚಪೀಠಗಳಿಗೆ ಬಸವಣ್ಣನವರು ಬೇಕು ಎಂದು ಪಂಚಪೀಠದ ಡಾ. ಚನ್ನಸಿದ್ಧರಾಮ ಶಿವಾಚಾರ್ಯರು ಗಜೇಂದ್ರಗಡದಲ್ಲಿ ನಡೆದ ಬಸವ ಪುರಾಣದಲ್ಲಿ ಹೇಳಿದ್ದಾರೆ.

ಈ ಹೇಳಿಕೆಯನ್ನು ಬಸವತತ್ತ್ವದವರಾದ ನಾವುಗಳು ಎಂದಿಗೂ ಒಪ್ಪಲು ಸಾಧ್ಯವಿಲ್ಲ. ಇನ್ನೂ ಬೇಕಾದರೆ ಪಂಚಪೀಠದವರಿಗೆ ಬಸವಣ್ಣನವರು ಅನಿವಾರ್ಯ. ಯಾಕಂದರೆ ಗುರು ಬಸವಣ್ಣನವರ ತತ್ತ್ವ ರಾಜ್ಯಾದ್ಯಂತ, ರಾಷ್ಟ್ರಾದ್ಯಂತ ಅಷ್ಟೇ ಏಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ನಿಂತಿದೆ. ಮನೆ ಮನೆಗೂ, ಮನ ಮನಕ್ಕೂ ಬಸವತತ್ತ್ವ ಪರಿಚಯವಾಗಿದೆ. ಇನ್ನೂ ಸ್ವಲ್ಪ ದಿನದಲ್ಲಿ “ಲಿಂಗಾಯತ ಧರ್ಮ”ಕ್ಕೆ ಮಾನ್ಯತೆ ಸಿಗುತ್ತದೆ. ಹಾಗಾಗಿ ಗತಿಯಿಲ್ಲದೆ ಅನಿವಾರ್ಯವಾಗಿ ಪಂಚಪೀಠದವರಿಗೆ ಗುರು ಬಸವಣ್ಣನವರು ಬೇಕು.

ಅಂತಹ ಗರ್ಜ ನಮಗೇನಿಲ್ಲ. ನಮ್ಮಲ್ಲಿ ಏನು ಕಡಿಮೆ ಇದೆ ಎಂದು ನಾವು ಪಂಚಪೀಠದವರು ಬೇಕೆಂದು ಹೇಳೋಣ? ನಮ್ಮಲ್ಲಿರುವ ಆಧ್ಯಾತ್ಮದ ಸಂಪತ್ತು ಎಲ್ಲೋ ಯಾರದೋ ಕಡೆಯಿಂದ ಎರವಲು ತಂದದ್ದಲ್ಲ. ಅದನ್ನ ಕಷ್ಟಪಟ್ಟು ನಮ್ಮ ತಂದೆ ತಾಯಿ ಗಳಿಸಿಟ್ಟು ಹೋಗಿದ್ದಾರೆ. ಲಕ್ಷಾಂತರ ತಲೆಮಾರುಗಳಾದರೂ ಅದು ಕರಗದು. ಹೀಗಿರುವಾಗ ಪಂಚಪೀಠದವರ ಅವಶ್ಯಕತೆ ನಮಗೇನಿದೆ?

ಅಷ್ಟೇ ಅಲ್ಲದೆ ನಮ್ಮದು ಪರಿಶುದ್ಧವಾದ ಮತ್ತು ವೈಜ್ಞಾನಿಕ ಹಿನ್ನೆಲೆಯುಳ್ಳ ಜಾತಿ, ಮತ, ಪಂಥವನ್ನು ಸುಟ್ಟು ಹಾಕಿದ, ಪುರುಷ ಹೆಚ್ಚು ಸ್ತ್ರೀ ಕಡಿಮೆ ಎಂಬ ಲಿಂಗ ತಾರತಮ್ಯವನ್ನು ಹೊಡೆದು ಹಾಕಿದ, ಮಾನವರೆಲ್ಲ ದೇವನ ಮಕ್ಕಳು ಎಂದು ಸಾರಿ ಹೇಳಿದ “ಅಪ್ಪನು ನಮ್ಮ ಮಾದಾರ ಚನ್ನಯ್ಯ, ಬೊಪ್ಪನು ನಮ್ಮ ಡೋಹಾರ ಕಕ್ಕಯ್ಯ” ಅಂತಾ ಅಪ್ಪಿ ಒಪ್ಪಿದಂತಾ ಶ್ರೇಷ್ಠ ಧರ್ಮ. ನಮ್ಮಪ್ಪ ಬಸವಣ್ಣನವರು ಏನೇ ಹೇಳಿದರು ವೈಜ್ಞಾನಿಕತೆಯಿಂದ ಮತ್ತು ಅನುಭಾವದಿಂದ ಹೇಳಿದ್ದಾರೆ. ಅಜ್ಞಾನಿ ತರ ಅವರು ಕಲ್ಲಾಗ ಹುಟ್ಟಿದ್ದು, ಇವರು ಕಲ್ಲಾಗ ಉದ್ಭವಿಸಿದ್ದು ಅಂತಾ ಹೇಳಿಲ್ಲ.

ಪಂಚಪೀಠದವರ ಮತ್ತು ಬಸವತತ್ತ್ವದವರ ಮಧ್ಯೆ ಕಂದಕ ನಿರ್ಮಾಣ ಮಾಡುವವರಿದ್ದಾರೆ, ಅವರಿಗೆ ಇತಿಹಾಸ ಗೊತ್ತಿಲ್ಲ ಎನ್ನುತ್ತಾರೆ. ಕಂದಕ ಯಾರೂ ಸೃಷ್ಠಿಸಿಲ್ಲ ತಮಗೆ ತಾವೇ ಸೃಷ್ಠಿ ಮಾಡಿಕೊಂಡಿದ್ದಾರೆ. 850 ವರ್ಷ ಸಂದರೂ, ಸತ್ಯ ಗೊತ್ತಿದ್ದರೂ, ಇತಿಹಾಸ ಹೇಳುತ್ತಿದ್ದರೂ ಅಪ್ಪ ಬಸವಣ್ಣನವರನ್ನು ಧರ್ಮಗುರು ಅಂತಾ ಒಪ್ಪಿಕೊಳ್ಳುವ ಮನೋಭಾವ ಪಂಚಪೀಠದವರಿಗಿಲ್ಲ. ಇದು ಬಿಡಿ, ಒಂದು ಕಾಲಕ್ಕೆ ಗುರು ಬಸವಣ್ಣನವರ ಫೋಟೋ ಮೇಲ್ಗಡೆ ಇದ್ದರೆ ಇವರೇ ಕೆಳಗಡೆ ಹಾಯ್ದು ಹೋಗುತ್ತಿರಲಿಲ್ಲ. ಹಿಂದೊಮ್ಮೆ ಕೂಡಲಸಂಗಮದ ಸಭಾಭವನದಲ್ಲಿ ಗುರು ಬಸವಣ್ಣನವರ ಫೋಟೋ ಇದ್ದ ಕಾರಣ ನಾವಿಲ್ಲಿ ಕಾರ್ಯಕ್ರಮ ಮಾಡಲ್ಲ ಅಂತಾ ಇವರು ಎದ್ದು ಹೊರಟ್ಟಿದ್ದರು.

ಹಿಂದೊಮ್ಮೆ ಕೂಡಲಸಂಗಮದ ಸಭಾಭವನದಲ್ಲಿ ಗುರು ಬಸವಣ್ಣನವರ ಫೋಟೋ ಇದ್ದ ಕಾರಣ ನಾವಿಲ್ಲಿ ಕಾರ್ಯಕ್ರಮ ಮಾಡಲ್ಲ ಅಂತಾ ಇವರು ಎದ್ದು ಹೊರಟ್ಟಿದ್ದರು.

ಇಂಥಾ ಘಟನೆಗಳು ತುಂಬಾ ನೆನಪಿನಲ್ಲಿವೆ. ಈಗ ನಮ್ಮ ಹಾಗು ಬಸವಣ್ಣನವರ ಮಧ್ಯೆ ಯಾರೋ ಕಂದಕ ಸೃಷ್ಠಿಸಿದರು ಅಂತಾ ಹೇಳುತ್ತಾರೆ.

ಪಂಚಪೀಠಗಳು ಸನಾತನ ಕಾಲದಿಂದಲೂ ಯಾವುದೇ ತಾರತಮ್ಯ ಇಲ್ಲದೆ ಎಲ್ಲರಿಗೂ ಧರ್ಮ ಸಂಸ್ಕಾರ ನೀಡುವುದರ ಜೊತೆಗೆ ಮಾರ್ಗದರ್ಶನ ಮಾಡ್ತಾ ಬಂದಿವೆ, ಅದೇ ಹಾದಿಯಲ್ಲಿ ಬಸವಾದಿ ಶರಣರು ನಡೆದು ಬಂದಿದ್ದಾರೆ ಎನ್ನುತ್ತಾರೆ. ಆದರೆ ಜಾತಿ ಭೇದವನ್ನು ತೊಡೆದು ಸರ್ವರಿಗೂ ಸಮನಾಗಿ ಧರ್ಮ ಸಂಸ್ಕಾರವನ್ನು ನೀಡುವ ಕಲ್ಪನೆ ಆರಂಭವಾಗಿದ್ದೇ ಧರ್ಮಗುರು ಬಸವಣ್ಣನವರಿಂದ. ನಂತರ ಬಂದ ಇವರ ಹಾದಿಯನ್ನು ಬಸವಾದಿಶರಣರು ಅನುಸರಿಸಿದರೆಂದರೇ ಏನು ಹೇಳುವುದು?

56
ಬಸವಣ್ಣನವರು ಮತ್ತು ಪಂಚಾಚಾರ್ಯರು

ಬಸವಣ್ಣನವರು, ಪಂಚಪೀಠಗಳು ಶತ್ರುಗಳಲ್ಲ ಎಂದು ಶ್ರೀಶೈಲ ಶ್ರೀಗಳು ಹೇಳಿದ್ದಾರೆ. ಇದಕ್ಕೆ ಕಾರಣ:

ಇತ್ತೀಚೆಗೆ ಇವರುಗಳ ಕಾರ್ಯಕ್ರಮಗಳಲ್ಲಿ ಗುರು ಬಸವಣ್ಣನವರ ಭಾವ ಚಿತ್ರಗಳು, ಇವರ ಭಾಷಣಗಳಲ್ಲಿ ವಚನಗಳು ಕಂಡು ಬರುತ್ತಿವೆ. ಕಾರಣ ಇಷ್ಟೇ ಧರ್ಮಗುರು ಬಸವಣ್ಣನವರಿಲ್ಲದೆ ಬದುಕಿಲ್ಲ ಎಂಬ ಸತ್ಯ ಅರಿವಾದಂತೆ ಕಾಣುತ್ತದೆ. ಬಸವತತ್ತ್ವ ಉದಯವಾಗಿದ್ದೇ ಎಲ್ಲ ಕರ್ಮಠಗಳನ್ನ ಕಳೆಯಲು, ತಾರತಮ್ಯ ಇಲ್ಲದೆ ಸಂಸ್ಕಾರ ಕೊಡ್ತಿವಿ ಅಂತಾರಲ್ಲ ಹೆಣ್ಣು ಮಕ್ಕಳಿಗೆ ದೀಕ್ಷೆ ಕೊಟ್ಟು, ತಮ್ಮ ಒಂದು ಪೀಠಕ್ಕೆ ಗುರು ಮಾಡಲಿ. ಸರ್ವರಿಗೂ ಸಂಸ್ಕಾರ ಕೊಟ್ಟು ತೋರಿಸಲಿ.

ತಾರತಮ್ಯ ಇಲ್ಲದೆ ಸಂಸ್ಕಾರ ಕೊಡ್ತಿವಿ ಅಂತಾರಲ್ಲ ಹೆಣ್ಣು ಮಕ್ಕಳಿಗೆ ದೀಕ್ಷೆ ಕೊಟ್ಟು, ತಮ್ಮ ಒಂದು ಪೀಠಕ್ಕೆ ಗುರು ಮಾಡಲಿ. ಸರ್ವರಿಗೂ ಸಂಸ್ಕಾರ ಕೊಟ್ಟು ತೋರಿಸಲಿ.

ವೀರಶೈವ ಲಿಂಗಾಯತ ಅಂತಾ ಬಳಸುತ್ತಾರೆ, ಆದರೆ ವೀರಶೈವ ಬೇರೆ ಲಿಂಗಾಯತ ಬೇರೆ. ಗುರು ಬಸವಣ್ಣನವರ ಪೂರ್ವದಲ್ಲಿ ಇದ್ದದ್ದು ವೀರಶೈವ; ಸ್ಥಾವರಲಿಂಗ ಪೂಜಕರು. ಋಷಿಮುನಿಗಳೆಲ್ಲ ಸ್ಥಾವರಲಿಂಗ ಪೂಜಿಸುತ್ತಿದ್ದರು, ಎಲ್ಲಿಯಾದರು ಹೋಗಬೇಕೆಂದಾಗ ಆ ಸ್ಥಾವರಲಿಂಗವನ್ನು ತಲೆಯ ಜುಟ್ಟಿನಲ್ಲಿ ಅಥವಾ ಬಲಗೈ ರಟ್ಟೆಗೆ ಕಟ್ಟಿಕೊಂಡು ಹೋಗುತ್ತಿದ್ದರು.

ಲಿಂಗಾಯತ ಧರ್ಮ 12ನೇ ಶತಮಾನದಲ್ಲಿ ಗುರು ಬಸವಣ್ಣನವರಿಂದ ಉದಯವಾದ ನವನವೀನವಾದ ಧರ್ಮ ಅದಕ್ಕೆಂದೆ ಚೆನ್ನಬಸವಣ್ಣನವರು “ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು” ಎಂದು ಹೇಳುತ್ತಾರೆ. ಅದಕ್ಕೆ ನಾವು ಇಷ್ಟಲಿಂಗಧಾರಿಗಳು. ನಮಗೂ ವೀರಶೈವರಿಗೂ ವ್ಯತ್ಯಾಸವಿದೆ. ಗುರು ಬಸವಣ್ಣನವರನ್ನ ಪಂಚಪೀಠದವರು ಧರ್ಮಗುರು ಅಂತಾ ಒಪ್ಪಿದ ಮರುಕ್ಷಣವೇ ನಾವು ಅವರಿಗೆ ಹೃತ್ಪೂರ್ವಕ ಶರಣು ಶರಣಾರ್ಥಿಗಳನ್ನು ಹೇಳುತ್ತೇವೆ.

Share This Article
4 Comments
  • ಪಂಚಪೀಠದವರು ಪಂಚ ಪೀಡೆಗಳಂತೆ ಬಸವಣ್ಣನವರಿಗೆ ಕಾಡದಿದ್ದರೆ ಸಾಕು. ಅವರು ಬಸವಣ್ಣನವರ ಹತ್ತಿರ ಬರುವುದು ಬೇಡ

  • ಈ ಗಟ್ಟಿತನ ಚಿರಸ್ಥಾಯಿಯಾಗಿ ಉಳಿಯಲಿ

    ಶರಣು ಶರಣಾರ್ಥಿ

  • ನಿಮ್ಮ ಸಹವಾಸವೆ ಬೇಡ ಪಂಚಪೀಠಾದಿಶರೆ ಗುರು ಬಸವಣ್ಣನವರು ವಿಶ್ವ ವ್ಯಾಪಿ

Leave a Reply

Your email address will not be published. Required fields are marked *

-ಪೂಜ್ಯ ಬಸವಗೀತಾ ಮಾತಾಜಿ, ಗುರುಬಸವ ಮಠ, ನಾಗನೂರ