ಬೆಂಗಳೂರು
ಸತ್ಯಶೋಧಕ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಹಂತಕರ ಗುಂಡಿಗೆ ಬಲಿಯಾಗಿ ಆಗಸ್ಟ್ 30ಕ್ಕೆ ಹತ್ತು ವರ್ಷ ಕಳೆಯುತ್ತದೆ.
ಕಲಬುರ್ಗಿಯವರ ಸಂಶೋಧನೆ ಮತ್ತು ಚಿಂತನೆಯ ಬಗ್ಗೆ ಜಾಗೃತಿ ಮೂಡಿಸಲು ಬಸವ ಮೀಡಿಯಾ ಸಮಾನ ಮನಸ್ಕ ಸಂಘಟನೆಗಳ ಜೊತೆ ವರ್ಷವಿಡೀ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.
ಈ ಯೋಜನೆಯ ಅಂಗವಾಗಿ ಇಂದು ‘ಬಸವ ಸಂಜೆ’ಯಲ್ಲಿ ಖ್ಯಾತ ವಿದ್ವಾಂಸ ಕೆ ರವೀಂದ್ರನಾಥ್ ಕಲಬುರ್ಗಿಯವರ ಬದುಕು ಮತ್ತು ಬರಹಗಳ ಪರಿಚಯ ಮಾಡಿಕೊಡಲಿದ್ದಾರೆ. ಬಸವ ಮೀಡಿಯಾ ಸಲಹಾ ಮಂಡಳಿ ಸದಸ್ಯ ಅಶೋಕ ಬರಗುಂಡಿಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಬಸವನಗುಡಿಯಲ್ಲಿರುವ ಸಭಾಂಗಣದಲ್ಲಿ ನಡೆಯಲಿರುವ ಬಸವ ಸಂಜೆ ಕಾರ್ಯಕ್ರಮದಲ್ಲಿ ಸಚಿವ ಎಂ.ಬಿ.ಪಾಟೀಲ ‘ಬೆಸ್ಟ್ ಆಫ್ ಬಸವ ಮೀಡಿಯಾ’ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.
ಜೊತೆಗೆ ‘ಬಸವ ತತ್ವ – ಸಂಘರ್ಷ, ಸವಾಲು, ಸಾಧ್ಯತೆ’ ವಿಷಯದ ಮೇಲೆ ನಡೆಯಲಿರುವ ಚರ್ಚಾ ಗೋಷ್ಠಿಯಲ್ಲಿ ಹಿರಿಯ ಶರಣತತ್ವ ಚಿಂತಕರಾದ ಡಾ. ಜೆ.ಎಸ್. ಪಾಟೀಲ್, ಪಿ ರುದ್ರಪ್ಪ ಮತ್ತು ಡಾ. ರಾಜಶೇಖರ ನಾರನಾಳ ಭಾಗವಹಿಸಲಿದ್ದಾರೆ. ಸಂವಾದವನ್ನು ಶಾಂತಕುಮಾರ ಹರ್ಲಾಪುರ ಅವರ ಅಧ್ಯಕ್ಷತೆಯಲ್ಲಿ ಡಾ ಎಚ್ ಎಂ ಸೋಮಶೇಖರಪ್ಪ ನಡೆಸಿಕೊಡಲಿದ್ದಾರೆ.
ದಿನಾಂಕ – ಆಗಸ್ಟ್ 17
ಸಮಯ – ಸಂಜೆ 4ರಿಂದ 8
ಸ್ಥಳ – ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣ, ಬಸವನಗುಡಿ, ಬೆಂಗಳೂರು

ಈ ಕಾರ್ಯಕ್ರಮದ ಸಂಘಟಕರಿಗೆ ಶರಣು ಶರಣಾರ್ಥಿಗಳು. ಈ ಕಾರ್ಯಕ್ರಮವನ್ನು Live ಆಗಿ ಕೇಳಲು ನೋಡಲು ವ್ಯವಸ್ಥೆ ಮಾಡಬೇಕೆಂದು ಕೋರುತ್ತೇವೆ.
ಬಹಳ ಉತ್ತಮ ಕೆಲಸ ಮಾಡಲು ಶ್ರಮಿಸುತ್ತಿರುವ ಬಸವ ಮೀಡಿಯಾ ತಂಡ ಮತ್ತು ಬಸವ ಮೀಡಿಯಾಕ್ಕೆ ಸಹಕಾರ ನೀಡುತ್ತಿರುವ ಎಲ್ಲರಿಗೂ ಶರಣು ಶರಣಾರ್ಥಿ