ನಂಜನಗೂಡಿನಲ್ಲಿ ಬಸವತತ್ವದ ಪ್ರಕಾರ ಉದ್ಘಾಟನೆಯಾದ ‘ಬಸವ ಆಯಿಲ್ಸ್’

ಬಸವ ಮೀಡಿಯಾ
ಬಸವ ಮೀಡಿಯಾ

ನಂಜನಗೂಡು:

ಮೈಸೂರಿನ ಪ್ರಸಿದ್ಧ ಅವ್ವಾಸ್ ಆಯಿಲ್ ಮಿಲ್ಸ್‌ ಸಂಸ್ಥೆಯ ಮರದ ಗಾಣದಲ್ಲಿ ತಯಾರಿಸಲಾಗುವ ಶುದ್ಧ ಎಣ್ಣೆಗಳ ಮಾರಾಟ ಕೇಂದ್ರ ‘ಬಸವ ಆಯಿಲ್ಸ್’ಎಂಬ ಹೆಸರಿನ ಪ್ರಾಂಚೈಸಿ ಬಸವೇಶ್ವರ ನಗರದಲ್ಲಿ ಈಚೆಗೆ ಬಸವತತ್ವದಂತೆ ಸರಳವಾಗಿ ಉದ್ಘಾಟನೆಗೊಂಡಿತು.

ಮೂಡುಗೂರು ವಿರಕ್ತಮಠದ ಪೂಜ್ಯ ಇಮ್ಮಡಿ ಉದ್ದಾನಸ್ವಾಮಿಗಳು ಷಟ್‌ಸ್ಥಲ ಧ್ವಜಾರೋಹಣ ಮಾಡಿ, ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಮೈಸೂರಿನ ಅವ್ವಾಸ್ ಆಯಿಲ್ ಮಿಲ್ಸ್‌ನ ಮಾಲಕರಾದ ಎಸ್. ಮಹಾದೇವಸ್ವಾಮಿ ಭಾಗವಹಿಸಿ ಮಾತನಾಡುತ್ತಾ, ಮರದ ಗಾಣದಲ್ಲಿ ಪಾರಂಪರಿಕ ವಿಧಾನದಲ್ಲಿ ತಯಾರಿಸುವ ಶುದ್ಧ, ರಾಸಾಯನಿಕರಹಿತ ಎಣ್ಣೆಗಳ ಮಹತ್ವ ಮತ್ತು ಆರೋಗ್ಯದ ಮೇಲಿನ ಪ್ರಯೋಜನಗಳ ಕುರಿತು ವಿವರಿಸಿದರು.

ಈ ಸಂದರ್ಭದಲ್ಲಿ ‘ಬಸವ ಆಯಿಲ್ಸ್’ನ ರೂಪ ಮಂಜುನಾಥ, ವಿಶ್ವ ಬಸವಸೇನೆಯ ಅಧ್ಯಕ್ಷ ಬಸವ ಯೋಗೇಶ, ಹಿರಿಯರಾದ ಕಾ.ಸು. ನಂಜಪ್ಪ, ಚೌಹಳ್ಳಿ ಲಿಂಗರಾಜಣ್ಣ, ಆಯರಳ್ಳಿ ಪ್ರಭುಸ್ವಾಮಿ ಸೇರಿದಂತೆ ಅನೇಕ ಗಣ್ಯರು ಇದ್ದರು.

‘ಬಸವ ಆಯಿಲ್ಸ್’ ಸ್ಥಾಪನೆಯ ಉದ್ದೇಶ ನಂಜನಗೂಡು ಭಾಗದ ಜನತೆಗೆ ನೈಸರ್ಗಿಕ, ಗುಣಮಟ್ಟದ ಮತ್ತು ವಿಶ್ವಾಸಾರ್ಹ ಅಡಿಗೆ ಎಣ್ಣೆಗಳನ್ನು ಒದಗಿಸಿ, ಆರೋಗ್ಯ ಜಾಗೃತಿಗೆ ಹೊಸ ದಿಕ್ಕು ನೀಡುವ ಉದ್ದೇಶ ಹೊಂದಲಾಗಿದೆ ಎನ್ನಲಾಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7eXkKdvSgzIz1asEX6uZh

Share This Article
Leave a comment

Leave a Reply

Your email address will not be published. Required fields are marked *