ಮಾತಾಜಿಯವರ 80ನೇ ಹುಟ್ಟುಹಬ್ಬ, 7ನೇ ಲಿಂಗೈಕ್ಯ ದಿನದ ಸಂಸ್ಮರಣೆ
ಬಸವಕಲ್ಯಾಣ
ನಾಳೆ 29 ರವಿವಾರ ಮುಂಜಾನೆ 11ಗಂಟೆಗೆ ಬಸವಧರ್ಮ ಪೀಠ, ಬಸವ ಮಹಾಮನೆ, ಮಹಾಮಠದ ಬಸವ ಪುತ್ಥಳಿ ಆವರಣದಲ್ಲಿ ವಿಶ್ವದ ಪ್ರಥಮ ಮಹಿಳಾ ಮಹಾಜಗದ್ಗುರು ಪೂಜ್ಯ ಡಾ. ಮಾತೆ ಮಹಾದೇವಿ ಅವರ 80ನೇ ಹುಟ್ಟುಹಬ್ಬ ಹಾಗೂ 7ನೇ ಲಿಂಗೈಕ್ಯ ಸಂಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು
ಅಲ್ಲಮಪ್ರಭು ಶೂನ್ಯ ಪೀಠಾಧ್ಯಕ್ಷರಾದ ಪೂಜ್ಯ ಸಿದ್ದರಾಮೇಶ್ವರ ಸ್ವಾಮೀಜಿ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ನಾಡಿನ ಪರಮ ಪೂಜ್ಯರುಗಳು, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯರು, ವಿವಿಧ ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದರು.
ಇದೇ ಸಂದರ್ಭದಲ್ಲಿ ಇತ್ತೀಚಿಗೆ ನೂತನವಾಗಿ ಆಯ್ಕೆಯಾಗಿರುವ, ಬಸವೇಶ್ವರ ದೇವಸ್ಥಾನ ಪಂಚಕಮಿಟಿಯ ಪದಾಧಿಕಾರಿಗಳಿಗೆ ವಿಶೇಷ ಗೌರವ ಸನ್ಮಾನ ಮಾಡಲಾಗುವುದು.
ಡಾ. ಮಾತೆ ಮಹಾದೇವಿ ಅವರು ಮಹಿಳೆಯರ ಸಬಲೀಕರಣ ಕುರಿತಾಗಿ ಸಂಕಲ್ಪಿಸಿದ ಸಮಾಜ ಸೇವೆಯ ಕಾರ್ಯ ಮುಂದುವರೆಸಿಕೊಂಡು ಹೋಗಲು ಶುರುವಾಗಿರುವ ಬಸವಾತ್ಮಜೆ ಮಹಿಳಾ ಸಹಕಾರಿ ಸಂಘದ ಶುರುವಾಗಲಿದೆ.
ಪೂಜ್ಯ ಲಾವಣ್ಯ ಮಾತಾಜಿ ಅವರ ಅಧ್ಯಕ್ಷತೆಯಲ್ಲಿ ನೊಂದಾಯಿತವಾಗಿರುವ ಸಂಘದ ಉದ್ಘಾಟನೆಯನ್ನು ಬೆಂಗಳೂರು ಸುಮಂಗಲೀ ಸೇವಾಶ್ರಮ ಅಧ್ಯಕ್ಷರಾದ ಪದ್ಮಶ್ರೀ ಎಸ್. ಜಿ. ಸುಶೀಲಮ್ಮ ನೆರವೇರಿಸಲಿದ್ದಾರೆ.
ಅಲ್ಲದೆ ವಿಶೇಷವಾದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದ್ದು, ಡಾ. ಹರೀಶ್ ಕಾಕನಾಳೆ ಕ್ಯಾನ್ಸರ್ ತಜ್ಞರು, ಡಾ. ಶಿವಕುಮಾರ ಕೆ. ಪಾಟೀಲ ಮೂಳೆ ತಜ್ಞರು, ಡಾ. ಪ್ರಶಾಂತ ಕೆ. ಪಾಟೀಲ ಜನರಲ್ ಸರ್ಜನ್, ಡಾ. ಯೋಗೇಶ್ವರಿ ಪಾಟೀಲ, ಡಾ. ಶ್ವೇತಾ ಪಾಟೀಲ ಮಕ್ಕಳ ತಜ್ಞರು ಆಗಮಿಸಿ ಆರೋಗ್ಯ ತಪಾಸಣೆ ನಡೆಸಿಕೊಡುವರು.

ರಾಷ್ಟ್ರೀಯ ಬಸವ ದಳ, ಅಕ್ಕನಾಗಲಾಂಬಿಕಾ ಮಹಿಳಾಗಣ ಹಾಗೂ ಎಲ್ಲಾ ಬಸವಪರ ಸಂಘಟನೆಗಳ ಸಹಯೋಗದೊಂದಿಗೆ ನಡೆಯುವ ಭವ್ಯ ಕಾರ್ಯಕ್ರಮಕ್ಕೆ ಶರಣ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ತಪ್ಪದೆ ಆಗಮಿಸಿ, ಭಾಗವಹಿಸಿ, ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡು, ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೋರಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಪೂಜ್ಯ ಲಾವಣ್ಯ ಮಾತಾಜಿ, ರಾಷ್ಟ್ರೀಯ ಬಸವದಳದ ರವಿಂದ್ರ ಕೋಳಕುರ, ಬಸವ ಕೇಂದ್ರದ ಆಕಾಶ ಖಂಡಾಳೆ, ಜೈಶ್ರೀ ಪಾಟೀಲ, ಶಿವು ಕುದ್ರೆ, ರವಿ ಬೇಲೂರೆ ಉಪಸ್ಥಿತರಿದ್ದರು.
