ರಾಮನಗರ
ಇಲ್ಲಿನ ಮಂಗಳವಾರಪೇಟೆಯಲ್ಲಿ ಶಿಥಿಲಗೊಂಡಿದ್ದ ಬಸವೇಶ್ವರ ದೇವಾಲಯವನ್ನು ಮುಸ್ಲಿಂ ಉದ್ಯಮಿಯೊಬ್ಬರು ಕೋಟ್ಯಂತರ ರೂ. ವೆಚ್ಚ ಮಾಡಿ ಪುನರ್ ನಿರ್ಮಾಣ ಮಾಡಿದ್ದಾರೆ.
ಎಸ್. ಕೆ. ಬೀಡಿ ಮಾಲೀಕ ಸೈಯದ್ ಸದಾತ್ ವುಲ್ಲಾ ಸಖಾಫ್ ಅವರ ರೂ. 3 ಕೋಟಿ ದಾಸೋಹದ ನೆರವಿನಿಂದ ನಿರ್ಮಾಣವಾಗಿರುವ ನೂತನ ದೇಗುಲ ಕನ್ನಡ ರಾಜ್ಯೋತ್ಸವ ದಿನದಂದು ಅನಾವರಣಗೊಂಡಿತು.
ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಸೈಯದ್ ಉಲ್ಲಾ ಸಖಾಫ್ ಹಿಂದೂ ಮತ್ತು ಮುಸ್ಲಿಂ ಒಗ್ಗಟ್ಟಾಗಿ ಬದುಕುವುದು ಮುಖ್ಯ. ನಾವೆಲ್ಲ ಅಣ್ಣ-ತಮ್ಮಂದಿರಾಗಿ ಜೊತೆ ಜೊತೆಯಲ್ಲಿ ಸಾಗಿದರೆ ದೇಶ ಅಭಿವೃದ್ಧಿಯಾಗುತ್ತದೆ, ಎಂದರು.

ದೇವಸ್ಥಾನದ ಲೋಕಾರ್ಪಣೆ ಹಿನ್ನೆಲೆಯಲ್ಲಿ ಅನ್ನ ದಾಸೋಹ ಸೇರಿದಂತೆ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ವಿವಿಧ ಕಾರ್ಯಕ್ರಮಗಳು ಸೋಮವಾರ ಸಂಪನ್ನಗೊಂಡವು.
ದೇಗುಲ ನಿರ್ಮಾಣಕ್ಕೆ ಇದೇ ಗ್ರಾಮದ ಕೆಂಪಮ್ಮ ಹಾಗೂ ಮೋಟೇಗೌಡರು ಜಾಗ ಕೊಟ್ಟಿದ್ದಾರೆ. ಈ ಹಿಂದೆಯೂ ಸಂತೇ ಮೊಗೇನಹಳ್ಳಿಯಲ್ಲಿ ಸ್ವಂತ ಹಣದಲ್ಲಿ ಸೈಯದ್ ಉಲ್ಲಾ ವೀರಭದ್ರೇಶ್ವರ ದೇಗುಲವನ್ನು ನಿರ್ಮಾಣ ಮಾಡಿದ್ದಾರೆ.
ಶ್ರೀ ಬಸವೇಶ್ವರ ವಿನಾಯಕ ಯುವಕರ ಬಳಗದವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.

ದಾಸೋಹಿಗಳಿಗೆ ಶಲಣುಶರಣಾರ್ಥಿಗಳು 🙏🙏🙏🙏