ಅಭಿಯಾನ 2025: ಜಿಲ್ಲಾ ಮಟ್ಟದಿಂದ ಗ್ರಾಮ ಮಟ್ಟದವರೆಗೂ ನಡೆಯಲಿ

ಮಠಾಧೀಶರ ಉಸ್ತುವಾರಿಯಲ್ಲಿ ಗ್ರಾಮ ಗ್ರಾಮಗಳಲ್ಲಿ ಯುವಪಡೆಗಳನ್ನು ರಚಿಸಬೇಕು.

ಕೊಪ್ಪಳ

(ಸೆಪ್ಟೆಂಬರಿನಲ್ಲಿ ನಡೆಯಲಿರುವ ಬಸವ ಸಂಸ್ಕೃತಿ ಅಭಿಯಾನ ಬಗ್ಗೆ ಶರಣ ತತ್ವ ಚಿಂತಕ ಡಾ. ಸಂಗಮೇಶ ಕಾಲಹಾಳ ಅವರ ಚಿಂತನೆ. ಕಾರ್ಯಕ್ರಮ ಬಸವ ರೇಡಿಯೋದಲ್ಲಿ ಏಪ್ರಿಲ್ 7 ನಡೆಯಿತು.)

ಬಸವ ಸಂಸ್ಕೃತಿ ಅಭಿಯಾನ ಸೂಕ್ತವಾಗಿದ್ದು ಸಮಯೋಚಿತವಾಗಿದೆ. ಮಠಾಧೀಶರ ಉಸ್ತುವಾರಿಯಲ್ಲಿ ಗ್ರಾಮ ಗ್ರಾಮಗಳಲ್ಲಿ ಯುವಪಡೆಗಳನ್ನು ರಚಿಸಬೇಕು. ಮಠಾಧೀಶರುಗಳು ವಾರದಲ್ಲಿ ನಾಲ್ಕು ದಿನವಾದರೂ ಬಸವತತ್ವ ಪ್ರಚಾರ ಮಾಡಬೇಕು.

ಅಭಿಯಾನವನ್ನು ಜಿಲ್ಲಾ ಮಟ್ಟದಿಂದ ಗ್ರಾಮ ಮಟ್ಟದವರೆಗೂ ಮಾಡಬೇಕು. ಗ್ರಾಮಗಳಲ್ಲಿ ಕಾರ್ಯಪಡೆಗಳನ್ನು ರಚಿಸಬೇಕು. ರಾಷ್ಟ್ರೀಯ ಬಸವದಳವೂ ಸೇರಿ ಎಲ್ಲಾ ಬಸವಪರ ಸಂಘಟನೆಗಳು ಭಾಗವಹಿಸುವಂತೆ ಆಗಬೇಕು.

ಯುವ ಸಮೂಹವನ್ನು ತಲುಪುವ ಕಾರ್ಯಕ್ರಮಗಳನ್ನು ರೂಪಿಸಬೇಕು ಮತ್ತು ಒಳಗೊಳ್ಳಬೇಕು. ಕ್ರಿಶ್ಚಿಯನ್ ಮಿಷನರಿ ಮಾದರಿಯಲ್ಲಿ ಮನೆ ಮನೆಗೆ ಭೇಟಿಕೊಟ್ಟು ಜನರ ಕಷ್ಟಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು.

ಲಿಂಗಾಯತ ಧರ್ಮಕ್ಕೆ ಸಂಬಂಧ ಪಡದ ಆಚರಣೆಗಳಲ್ಲಿ ಲಿಂಗಾಯತರು ತೊಡಗಿದ್ದಾರೆ. ಅವರಿಗೆ ಲಿಂಗಾಯತದ ಬಗ್ಗೆ ಅರಿವು ಮೂಡಿಸಿ ಲಿಂಗಾಯತ ತತ್ವದ ಆಚರಣೆಗಳ ಕಡೆಗೆ ಕರೆತರಬೇಕು. ಪ್ರಾರ್ಥನೆಯ ಸರಳ ವಿಧಾನಗಳ, ಪೂಜೆಯ ವಿಧಾನಗಳ ಮಾದರಿಯನ್ನು ಅಭಿವೃದ್ಧಿಪಡಿಸಬೇಕು.

ಅಭಿಯಾನದ ಪೂರ್ವ ಮತ್ತು ನಂತರದಲ್ಲಿ ಶರಣ ಸಂಸ್ಕಾರದ ಶಿಕ್ಷಣವನ್ನು ಕೊಡುವ ಅವಶ್ಯಕತೆಯಿದೆ. ನಿರಂತರವಾಗಿ ಶರಣ ಸಂಸ್ಕೃತಿಯ ಕಮ್ಮಟಗಳನ್ನು ಮಾಡಬೇಕು. ಎಲ್ಲರೂ ಮೇಲರಿಮೆ ಮತ್ತು ಕೀಳರಿಮೆ ಬಿಟ್ಟು ಒಟ್ಟಾಗಬೇಕು. ಅನ್ಯಸಂಸ್ಕೃತಿಗೆ ಮಾರುಹೋಗಿರುವವರನ್ನು ಶರಣ ಸಂಸ್ಕೃತಿಗೆ ಕರೆತರಬೇಕು. ಬಸವತತ್ವ ಆಚರಣೆಗಳನ್ನು ಹೆಚ್ಚು ಹೆಚ್ಚು ಮಾಡುವ ಅವಶ್ಯಕತೆಯಿದೆ.

ಶಾಲಾಕಾಲೇಜುಗಳಲ್ಲಿ ಪರಿಣಾಮಕಾರಿಯಾದ ಶರಣ ಸಂಸ್ಕೃತಿ ಮತ್ತು ವಚನ ಸಾಹಿತ್ಯ ಪಾಠಗಳು ಪಠ್ಯಕ್ರಮಗಳನ್ನು ಸೇರಿಸುವಂತೆ ಸರ್ಕಾರದ ಮೇಲೆ ಒತ್ತಾಯ ತರಬೇಕು. ಒಟ್ಟಾರೆಯಾಗಿ ಲಿಂಗಾಯತ ಧರ್ಮದಿಂದ ದೂರಹೋದವರನ್ನು ಅರಿವು ಆಚರಣೆಗಳ ಮೂಲಕ ಹಿಂದೆ ಕರೆತರಬೇಕು. ಲಿಂಗಾಯತರು ಕನಿಷ್ಠ ಅವಶ್ಯಕತೆಗಳಾದ ವಿಭೂತಿ ಧಾರಣೆ ಮತ್ತು ಲಿಂಗ ಧರಿಸುವುದನ್ನು ಆಚರಣೆಗೆ ತರಬೇಕು.

ಎಲ್ಲಾ ಉಪಪಂಗಡಗಳನ್ನು ಒಟ್ಟಿಗೆ ತರಬೇಕು. ಮೀಸಲಾತಿ ಕಾರಣಕ್ಕಾಗಿ ಲಿಂಗಾಯತ ಉಪಪಂಗಡಗಳು ಜನಗಣತಿ ಸಮಯದಲ್ಲಿ ಹಿಂದೂ ಎಂದು ಬರೆಸುತ್ತಿರುವುದರಿಂದ ಲಿಂಗಾಯತ ಸಮಾಜದ ಜನಸಂಖ್ಯೆ ಕಡಿಮೆಯಾಗುತ್ತಿದೆ.

ವಚನ ದರ್ಶನ ಗುಂಪು ದೊಡ್ಡಮಟ್ಟದಲ್ಲಿ ದಾಳಿಯಿಡುತ್ತಿದೆ. ಐಟಿ ಸೆಲ್ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳಬೇಕು.

ಶರಣ ಡಾ. ಸಂಗಮೇಶ ಕಾಲಹಾಳ
ಶರಣ ಡಾ. ಸಂಗಮೇಶ ಕಾಲಹಾಳ ಇವರು ಆಯುರ್ವೇದ ವೈದ್ಯರಾಗಿದ್ದು, ಜಿಲ್ಲಾ ವೈದ್ಯಾಧಿಕಾರಿಗಳಾಗಿ ನಿವೃತ್ತಿ ಹೊಂದಿದ್ದಾರೆ. ಇವರು ಕೊಪ್ಪಳ ವಿಶ್ವಗುರು ಬಸವೇಶ್ವರ ಟ್ರಸ್ಟಿನ ಪ್ರೇರಕ ಶಕ್ತಿಯಾಗಿದ್ದಾರೆ. ರಾಜ್ಯ ಮಡಿವಾಳ ಸಂಘದಲ್ಲಿ ಮುಖಂಡರಾಗಿ ಕಾರ್ಯನಿರ್ವಹಿಸಿದ್ದಾರೆ. ನೌಕರ ಸಂಘದಲ್ಲಿ ರಾಜ್ಯಮಟ್ಟದ ನಾಯಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಜೊತೆಗೆ ಸಾಕಷ್ಟು ಸಾಹಿತ್ಯ ಕೃಷಿಯನ್ನೂ ಮಾಡಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/FEOgQepEXSP8R5OtHvcD7O

Share This Article
Leave a comment

Leave a Reply

Your email address will not be published. Required fields are marked *