ಬೆಳಗಾವಿ:
ಜಗಜ್ಯೋತಿ ಬಸವೇಶ್ವರ ಜಯಂತಿ ಉತ್ಸವ ಕೇಂದ್ರ ಸಮಿತಿಗೆ ಬಾಲಚಂದ್ರ ಬಾಗಿ ಅಧ್ಯಕ್ಷರನ್ನಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ನ್ಯಾಯವಾದಿ ವಿ.ಕೆ.ಪಾಟೀಲ, ಗುರುದೇವ ಪಾಟೀಲ, ವಿದ್ಯಾ ಚಂದ್ರಶೇಖರ ಗೌಡರ, ಮಹಾನಂದಾ ಶಿವಾನಂದ ಲೋಕನ್ನವರ, ಕೋಶಾಧ್ಯಕ್ಷರಾಗಿ ಬಸವರಾಜ ಕಾಡಪ್ಪಾ ಮಾದಗೌಡ, ಪ್ರಧಾನ ಕಾರ್ಯದರ್ಶಿಗಳಾಗಿ ಕಿರಣ ಅಗಡಿ ಅವರು ಆಯ್ಕೆಯಾಗಿದ್ದಾರೆ.
ಬೆಳಗಾವಿ ಅಖಿಲ ಭಾರತ ವೀರಶೈವ ಮಹಾಸಭೆ ಪ್ರತಿವರ್ಷ ಬಸವ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾ ಬಂದಿದ್ದು, ನೂತನ ಆಯ್ಕೆ ಸಮಿತಿ ಎಲ್ಲ ಜವಾಬ್ದಾರಿಗಳನ್ನು ನೆರವೇರಿಸಲಿದೆ, ಎಂದು ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ತಿಳಿಸಿದ್ದಾರೆ.
