ಬೆಳಗಾವಿ
18ನೆಯ ಮಾಸಿಕ ಶಿವಯೋಗ ಹಾಗೂ ಇಷ್ಟಲಿಂಗ ದೀಕ್ಷೆ ಕಾರ್ಯಕ್ರಮ ರವಿವಾರ ಶ್ರೀ ನಾಗನೂರು ರುದ್ರಾಕ್ಷಿಮಠದಲ್ಲಿ ನಡೆಯಿತು.
ಪೂಜ್ಯ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಅವರು ಮಾತನಾಡುತ್ತ, ಶಿವಯೋಗವು ನೆಮ್ಮದಿಯ ಬದುಕಿಗೆ ದಾರಿದೀಪವೆಂದು ಹೇಳಿದರು.

ನಾಗನೂರು ರುದ್ರಾಕ್ಷಿಮಠ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಜೆ.ಎಲ್.ಎಂ. ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ಹಾಗೂ ಪದಾಧಿಕಾರಿಗಳು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಅಶೋಕ ಮಳಗಲಿ, ಲಿಂಗಾಯತ ಸಂಘಟನೆ, ಬಸವದಳ, ಗುರು ಬಸವ ಬಳಗದ ಸದಸ್ಯರು, ಸಂಚಾರಿ ಗುರು ಬಸವ ಬಳಗದ ಸಂಚಾಲಕ ಶಿವಾನಂದ ಲಾಳಸಿಂಗಿ, ಮಹಾಂತೇಶ ತೋರಣಗಟ್ಟಿ ಹಾಗೂ ಪದಾಧಿಕಾರಿಗಳು. ಸ.ಜ. ನಾಗಾಲೋಟಿಮಠ ವಿಜ್ಞಾನ ಕೇಂದ್ರ ಯೋಜನಾಧಿಕಾರಿ ರಾಜಶೇಖರ ಪಾಟೀಲ, ಕುಮಾರೇಶ್ವರ ಪ್ರಸಾದ ನಿಲಯದ ವ್ಯವಸ್ಥಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.