ಬೆಳಗಾವಿ ಸತ್ಸಂಗದಲ್ಲಿ ಶರಣ ಕಿನ್ನರಿ ಬೊಮ್ಮಯ್ಯನವರ ಜೀವನ, ವಚನ ಪರಿಚಯ

ಬೆಳಗಾವಿ

ವಿಶ್ವಗುರು ಬಸವಣ್ಣನವರ ಪ್ರಭಾವದಿಂದ ಕಿನ್ನರಿ ಬೊಮ್ಮಯ್ಯನವರು ಆಂಧ್ರದ ಪುದೂರಿನಿಂದ ಬಂದು ಕಲ್ಯಾಣದಲ್ಲಿ ನೆಲೆನಿಂತು, ಅಕ್ಕಸಾಲಿಗ ವೃತ್ತಿಯೊಂದಿಗೆ ಕಿನ್ನರಿ ನುಡಿಸುವ ಪ್ರವೃತ್ತಿಯನ್ನು ಮೈಗೂಡಿಸಿಕೊಂಡು, ತ್ರಿಪುರಾಂತಕ ದೇವ ಎನ್ನುವ ಅಂಕಿತದೊಂದಿಗೆ ಒಟ್ಟು ಹದಿನೆಂಟು ವಚನಗಳನ್ನು ರಚಿಸಿದವರು.

ಕಲ್ಯಾಣ ಕ್ರಾಂತಿಯ ನಂತರ ಚನ್ನಬಸವಣ್ಣನವರೊಂದಿಗೆ ಉಳವಿಗೆ ಹೋಗಿ ಬಿಜ್ಜಳನ ಸೈನ್ಯವನ್ನು ಚದುರಿಸಲು ಉಪಾಯ ಮಾಡಿದ್ದು, ಅಕ್ಕಮಹಾದೇವಿಯು ಕಲ್ಯಾಣಕ್ಕೆ ಬಂದ ಪ್ರಸಂಗದಲ್ಲಿ ಅಕ್ಕನನ್ನು ಪರೀಕ್ಷಿಸಿದ್ದು, ಹೀಗೆ ಶೂನ್ಯ ಸಂಪಾದನೆಯಲ್ಲಿ ಉಲ್ಲೇಖಿತ ಹಲವಾರು ಸನ್ನಿವೇಶಗಳಲ್ಲಿ ಶರಣ ಕಿನ್ನರಿ ಬೊಮ್ಮಯ್ಯಗಳ ಪಾತ್ರ ಕುರಿತಂತೆ ಪ್ರೌಢಶಾಲೆ ಶಿಕ್ಷಕಿ ಶರಣೆ ಕಮಲಾ ಗಣಾಚಾರಿ ಮಾತನಾಡಿದರು.

ಹಳಕಟ್ಟಿ ಭವನದಲ್ಲಿ ಕಿನ್ನರಿ ಬೊಮ್ಮಯ್ಯ ಜಯಂತಿ ನಿಮಿತ್ಯ ರವಿವಾರ ನಡೆದ ಉಪನ್ಯಾಸದ ಸತ್ಸಂಗ ಕಾರ್ಯಕ್ರಮದಲ್ಲಿ ಅನುಭಾವಿ ಶರಣ ಕಿನ್ನರಿ ಬೊಮ್ಮಯ್ಯನವರ ಜೀವನ ಮತ್ತು ವಚನ ಸಂದೇಶ ಕುರಿತಂತೆ ಕುರಿತು ಮಾತನಾಡಿದರು.

ಕಿನ್ನರಿ ಬೊಮ್ಮಯ್ಯನವರ ಬದುಕಿಗೆ ಸಂಬಂಧಿತ ಕತೆಗಳನ್ನು ಹೇಳುತ್ತ, ನಿಜಗುಣ ಶಿವಯೋಗಿಗಳು, ಪುರಂದರ ದಾಸರ ಪದಗಳನ್ನು ಸಾಂದರ್ಭಿಕವಾಗಿ ಬಳಸಿಕೊಂಡಿದ್ದು ಕಮಲಾ ಅವರ ಉಪನ್ಯಾಸದ ವಿಶೇಷತೆಯಾಗಿತ್ತು.

ಪ್ರಾರಂಭದಲ್ಲಿ ಶರಣೆ ಮಹಾದೇವಿ ಅರಳಿ ಪ್ರಾಥ೯ನೆ ನಡೆಸಿಕೊಟ್ಟರು, ಬಿ.ಪಿ. ಜೇವಣಿ, ಜಯಶ್ರೀ ಚಾವಲಗಿ, ಅನಸೂಯಾ ಬಶೆಟ್ಟಿ, ಆನ೦ದ ಕಕಿ೯, ವಿ.ಕೆ.ಪಾಟೀಲ ವಚನಗಳನ್ನು ಪ್ರಸ್ತುತ ಪಡಿಸಿದರು.

ಸ೦ಗಮೇಶ ಅರಳಿ ನಿರೂಪಿಸಿದರು, ಹಿರಿಯ ಶರಣೆ ಚಂಪಾವತಿ ತಂಗಡೆ ದಾಸೋಹ ಸೇವೆ ಸಲ್ಲಿಸಿದರು, ಶಂಕರ ಗುಡಸ ಅವರು ಉಪನ್ಯಾಸ ಕುರಿತಂತೆ ತಮ್ಮ ನಿಲುವುಗಳನ್ನು ವ್ಯಕ್ತಪಡಿಸಿದರು.

ಶರಣ ಸದಾಶಿವ ದೇವರಮನಿ ಅವರೂ ಕೂಡ ಈ ಸಂದರ್ಭದಲ್ಲಿ ಶರಣ ಯುಗದ ಕೆಲವು ಘಟನೆಗಳನ್ನು ನೆನಪಿಸಿಕೊಂಡರು.

ಬಸವರಾಜ ಬಿಜ್ಜರಗಿ, ವಿದ್ಯಾ ಕಕಿ೯, ಮಹಾದೇವಿ ತಿಗಡಿ, ಮಂಗಳಾ ಕಾಕತಿಕರ್, ಅಡವೇಶ ಇಟಗಿ, ಲಿಂಗಾಯತ ಸಂಘಟನೆಯ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *