ಬೆಳಗಾವಿಯ ಹಲಗಾ ಗ್ರಾಮದಲ್ಲಿ ‘ಶ್ರೀಗಳ ನಡೆ ಭಕ್ತರ ಮನೆಯ ಕಡೆ’ ಕಾರ್ಯಕ್ರಮ

ಬೆಳಗಾವಿ

ಬೆಳಗಾವಿ ತಾಲೂಕು ಹಲಗಾ ಗ್ರಾಮದಲ್ಲಿ ‘ಶ್ರೀಗಳ ನಡೆ ಭಕ್ತರ ಮನೆಯ ಕಡೆ’ ಕಾರ್ಯಕ್ರಮ ನಡೆಯಿತು.

ನಾಗನೂರು ರುದ್ರಾಕ್ಷಿ ಮಠದ ಪೂಜ್ಯ ಶ್ರೀ ಡಾ.ಅಲ್ಲಮಪ್ರಭು ಸ್ವಾಮಿಜಿಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ಹೊರಟರು.

ಶ್ರೀಮತಿ ಮಂಜುಳಾ ಶ್ರೀ ಗೋಪಾಲ ಶಹಾಪುರಿ ಇವರು ಗುರು ಬಸವಣ್ಣನವರ ನೂತನ ಮೂರ್ತಿಯನ್ನು ತಮ್ಮ ಮನೆಗೆ ಬರಮಾಡಿಕೊಂಡರು. ನಂತರ ಸಾಮೂಹಿಕ ಇಷ್ಟಲಿಂಗ ಪೂಜೆಯನ್ನು ಸಂಚಾರಿ ಗುರು ಬಸವ ಬಳಗದ ಸಂಚಾಲಕರಾದ ಶ್ರೀ ಮಾಂತೇಶ ತೋರಣಗಟ್ಟಿ ಇವರ ನೇತೃತ್ವದಲ್ಲಿ ನೇರವೇರಿತು.

ಜಾಗತಿಕ ಲಿಂಗಾಯತ ಮಹಾಸಭಾ, ಸಂಚಾರಿ ಗುರು ಬಸವ ಬಳಗ ಹಾಗೂ ಗ್ರಾಮದ ಲಿಂಗಾಯತ ಸಮಾಜ ಬಾಂಧವರ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಯಿತು. ಸಂಘಟನೆಗಳ ಮುಖಂಡರಾದ ಬಿ.ಜಿ.ವಾಲಿಇಟಗಿ, ಆನಂದ ಯಲ್ಲಪ್ಪ ಕೊಂಡಗುರಿ, ಕಲ್ಲಯ್ಯ ಸ್ವಾಮಿ ಹಿರೇಮಠ, ಬಸವರಾಜ ಹಿರೇಹೊಳಿ, ಬಸವರಾಜ ಕೊರಿಶೆಟ್ಟಿ, ಸಂಜು ಕ್ವಾನ್ಯಾರ, ಈರಪ್ಪ ಹಂಪನ್ನವರ, ಗುಂಡು ಮೊದಲಾದವರು ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ ಜಾಗತಿಕ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕ ಬೆಳಗಾವಿ.