ಬೆಳಗಾವಿಯಲ್ಲಿ ಶರಣ ಸಂಪ್ರದಾಯದ ಪ್ರಸ್ತುತತೆ ಕುರಿತು ಉಪನ್ಯಾಸ

ಬೆಳಗಾವಿ

ಲಿಂಗಾಯತ ಸಂಘಟನೆ ವತಿಯಿಂದ ಹಳಕಟ್ಟಿ ಭವನದಲ್ಲಿ ಶರಣ ಸಂಪ್ರದಾಯ ಮತ್ತು ಅದರ ಪ್ರಸ್ತುತತೆ ಕುರಿತು ವಾರದ ಉಪನ್ಯಾಸ ಹಾಗೂ ಪ್ರಾರ್ಥನೆ ಕಾರ್ಯಕ್ರಮ ರವಿವಾರ ನಡೆಯಿತು.

ಅನುಭಾವಿಗಳಾದ ಎಸ್.ಬಿ. ಸೋಮಣ್ಣವರ ಅವರಿಂದ ಶರಣ ಸಂಪ್ರದಾಯ ಮತ್ತು ಅದರ ಪ್ರಸ್ತುತತೆ ಕುರಿತು ಉಪನ್ಯಾಸ ನೆರವೇರಿತು.

ಶರಣರು, ಸಾತ್ವಿಕರು, ಐಕ್ಯರು, ಶಿವಯೋಗಿಗಳು, ಶಿವಾಗಮ ಸಾಧ್ಯರು ಎನ್ನುವ ಚನ್ನಬಸವಣ್ಣನವರ ವಚನ ವಿಶ್ಲೇಷಣೆಯೊಂದಿಗೆ ಶರಣರ ಕೊಡುಗೆಗಳನ್ನು ಸ್ಮರಿಸಿದರು.

ಶರಣರ ಕಾಯಕ, ದಾಸೋಹ, ಸಮಾನತೆ ಮತ್ತು ಭಕ್ತಿಯ ಕುರಿತಂತೆ ತಮ್ಮ ನಿಲುವುಗಳನ್ನು ವ್ಯಕ್ತಪಡಿಸಿದರು. ದೇವರ ಪರಿಕಲ್ಪನೆ ಮತ್ತು ಭಾಷೆಗಳ ಕುರಿತಂತೆ ಉಪನ್ಯಾಸಕರ ನಿಲುವು ಮತ್ತು ಹೇಳಿಕೆಗಳು ಶರಣರ ವಚನಗಳ ಹಿನ್ನೆಲೆಯಲ್ಲಿ ಚರ್ಚೆ ಮತ್ತು ಅಭಿಪ್ರಾಯ ಮಂಡನೆಯ ನಡೆಯಿತು.

ವಕೀಲರು ಶರಣರಾದ ಸುನೀಲ ಸಾನಿಕೊಪ್ಪ ಅವರು ಶರಣರ ಏಕದೇವೋಪಾಸನೆಯನ್ನು ಪುರಸ್ಕರಿಸುವ ವಚನಗಳನ್ನು ಉದಾಹರಣೆ ಮೂಲಕ ವಿಶ್ಲೇಷಿಸಿದರು. ಸರ್ವರಿಗೂ ಆಚರಣೆ ಯೋಗ್ಯವಾದ ತತ್ವಗಳು ಮತ್ತು ಎಲ್ಲರೂ ಕಡ್ಡಾಯವಾಗಿ ಪಾಲಿಸಲೇಬೇಕಾದ ಆಚರಣೆಯ ನಿಯಮಗಳು ನಮ್ಮ ಶರಣ ಧರ್ಮದಲ್ಲಿಯೂ ಬೇಕು ಎಂದು ಹೇಳುತ್ತ, ಬೇರೆ ಬೇರೆ ಧರ್ಮಗಳನ್ನು ಈ ಹಿನ್ನೆಲೆಯಲ್ಲಿ ಅವರು ಉದಾಹರಣೆಗಾಗಿ ನೆನಪಿಸಿಕೊಂಡರು.

ಜಗತ್ತಿನ ಎಲ್ಲಾ ಸಮುದಾಯದವರು ಸಾರ್ವತ್ರಿಕವಾಗಿ ಒಪ್ಪುವ, ಅಳವಡಿಕೊಳ್ಳಬಹುದಾದ ಸರಳ ವಿಚಾರಧಾರೆಗಳನ್ನು ಕೊಟ್ಟಂತಹ ಶರಣ ಧರ್ಮ ವಿಶ್ವಮಾನ್ಯವಾಗುವದರಲ್ಲಿ ಸಂದೇಹವಿಲ್ಲ ಎನ್ನುವ ವಿಚಾರವನ್ನು ಸಂಘಟನೆಯ ನಿಕಟಪೂರ್ವ ಅಧ್ಯಕ್ಷ ಶರಣ ಸದಾಶಿವ ದೇವರಮನಿ ಅವರು ವ್ಯಕ್ತಪಡಿಸಿದರು.

ಹಿರಿಯ ಶರಣ ವಿ. ಕೆ. ಪಾಟೀಲ ಅವರು ಉಪನ್ಯಾಸಕರ ಜೊತೆಗಿನ ತಮ್ಮ ಒಡನಾಟ ಮತ್ತು ಅವರ ಸಾದನೆ ಕುರಿತಂತೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಎಂ.ವೈ. ಮೆಣಸಿನಕಾಯಿ ಉಪನ್ಯಾಸಕರನ್ನು ಪರಿಚಯಿಸಿದರು.

ಪ್ರಾರಂಭದಲ್ಲಿ ವಚನ ಪ್ರಾರ್ಥನೆ ಮತ್ತು ಕಾರ್ಯಕ್ರಮ ನಿರ್ವಹಣೆಯನ್ನು ಸುರೇಶ ನರಗುಂದ ಅವರು ನೆರವೇರಿಸಿದರು. ನಿವೃತ್ತ ಉಪನ್ಯಾಸಕ ಬಾಳಗೌಡ ದೊಡ್ಡಭಂಗಿ ಅವರಿಂದ ಪ್ರಸಾದಸೇವೆ ನೆರವೇರಿತು. ಎ. ಬಿ. ಜೇವಣಿ, ಜಯಶ್ರೀ ಚಾವಲಗಿ, ಸುವರ್ಣ ಗುಡಸ, ಬಸವರಾಜ ಗುರನಗೌಡ್ರು, ಆನಂದ ಕರ್ಕಿ ಅವರಿಂದ ವಚನ ಗಾಯನ ನೆರವೇರಿತು.

ಪ್ರಸಾದ ಹಿರೇಮಠ, ಸುಜಾತಾ ಮತ್ತಿಕಕಟ್ಟಿ, ಶೋಭಾ ಮುನವಳ್ಳಿ, ಶ್ರೀದೇವಿ ನರಗುಂದ, ಕಮಲಾ ಗಣಾಚಾರಿ, ಕೆಂಪನ್ನವರ ದಂಪತಿಗಳು, ಅಶೋಕ ಖೋತ, ಅನಿಲ ರಘಶೆಟ್ಟಿ, ಬಸವರಾಜ ಬಿಜ್ಜರಗಿ, ಬಸವರಾಜ ಮತ್ತಿಕಟ್ಟಿ, ಶೇಖರ ವಾಲಿಇಟಗಿ, ಬಸವರಾಜ ಕರಡಿಮಠ , ಗುರುಸಿದ್ದಪ್ಪ ರೇವನ್ನವರ, ಮಹದೇವ ಕೆಂಪಿಗೌಡರ ಒಳಗೊಂಡಂತೆ ಲಿಂಗಾಯತ ಸಂಘಟನೆಯ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *