ಬೆಳಗಾವಿಯಲ್ಲಿ ವಚನ ಸಾಹಿತ್ಯವನ್ನು ರಕ್ಷಿಸಲು ಹೋರಾಡಿದ ಶರಣೆ ಕಲ್ಯಾಣಮ್ಮನವರ ಸ್ಮರಣೆ

ಬೆಳಗಾವಿ:

ಪುರೋಹಿತಶಾಹಿ ಶಕ್ತಿಗಳಿಂದ ಇಡೀ ಶರಣ ಸಮುದಾಯ ಹಾಗೂ ವಚನ ಸಾಹಿತ್ಯದ ಮೇಲೆ ದಾಳಿ ನಡೆಯುತ್ತದೆ. ಆ ಸಂದರ್ಭದಲ್ಲಿ ತಮ್ಮ ಜೀವಕ್ಕಿಂತ ಮಿಗಿಲಾಗಿ, ವಚನ ಸಾಹಿತ್ಯವನ್ನು ರಕ್ಷಿಸಲು ಹೋರಾಡಿ ನಿರಂತರವಾಗಿ ಕಾಯಕನಿಷ್ಠೆಯಿಂದ ದುಡಿದವರು ಶರಣೆ ಕಲ್ಯಾಣಮ್ಮನವರು ಎಂದು ಸುನಿತಾ ನಂದೆನ್ನವರ ಹೇಳಿದರು.

ರವಿವಾರದಂದು ಲಿಂಗಾಯತ ಸಂಘಟನೆ ವತಿಯಿಂದ ವಾರದ ಸತ್ಸಂಗ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಲ್ಯಾಣಮ್ಮನವರ ಮಾದರಿ ಸರಳ ಜೀವನ ಮತ್ತು ಬಸವಣ್ಣನವರ ಕುರಿತಾದ ಅವರ ಅಪಾರ ಭಕ್ತಿ ಸಮಾಜದಲ್ಲಿ ಸಮಾನತೆಗಾಗಿ ಶರಣರು ದುಡಿಯುತ್ತಿದ್ದ ಆ ಸಂದರ್ಭದಲ್ಲಿ ಅವರು ಸಲ್ಲಿಸಿದ ಸೇವೆ ಅನನ್ಯವಾದದ್ದು ಎಂದರು. ಅವರ ಅನೇಕ ದೃಷ್ಟಾಂತ ನೀಡುವುದರ ಜೊತೆಗೆ ಅವರ ಜೀವನ ವೃತ್ತಾಂತವನ್ನು ನಂದೆನ್ನವರ ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘಟನೆ ಅಧ್ಯಕ್ಷ ಈರಣ್ಣ ದೇಯನ್ನವರ ಮಾತನಾಡಿ, ಪ್ರಸ್ತುತ ಅಸಮಾನತೆಯಿಂದ ನರಳುತ್ತಿರುವ ಸಮಾಜಕ್ಕೆ ಶರಣೆ ಕಲ್ಯಾಣಮ್ಮನವರ ಜೀವನ ನಿಜಕ್ಕೂ ಸ್ಪೂರ್ತಿಯನ್ನು ಉಂಟುಮಾಡುತ್ತದೆ. ಸಮಾಜಕ್ಕೆ ಸಮಾನತೆಯ ದಾರಿದೀಪವಾಗಿರುವ ವಚನ ಸಾಹಿತ್ಯ ಅಮೂಲ್ಯವಾದದ್ದು ಎಂದರು.

ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಹಿರಿಯರ ಈಜು ಸ್ಪರ್ಧೆಯಲ್ಲಿ ಎರಡು ಚಿನ್ನ ಸಹಿತ ನಾಲ್ಕು ಪದಕಗಳನ್ನು ಗೆದ್ದು ವಿಶೇಷ ಸಾಧನೆ ಮಾಡಿ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಶರಣ ಲಕ್ಷ್ಮಣ ಕುಂಬಾರ ಅವರನ್ನು ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಶಶಿಭೂಷಣ ಪಾಟೀಲ, ಶಂಕರ ಗುಡಸ, ಸದಾಶಿವ ದೇವರಮನಿ, ಆನಂದ ಕಕಿ೯, ಸುನೀಲ ಸಾನಿಕೊಪ್ಪ, ವಿರುಪಾಕ್ಷಿ ದೊಡ್ಡಮನಿ, ಎಂ.ವೈ. ಮೆಣಸಿನಕಾಯಿ, ಶಿವಾನಂದ ತಲ್ಲೂರ, ಶಿವಾನಂದ ನಾಯಕ, ಜ್ಯೋತಿ ಬದಾಮಿ, ಶೊಭಾ ದೇಯನ್ನವರ, ವಿದ್ಯಾ ಕಕಿ೯, ಶಾಂತಮ್ಮ ತಿಗಡಿ, ಬಾಬು ತಿಗಡಿ, ಸೇರಿದಂತೆ ಶರಣರು ಉಪಸ್ಥಿತರಿದ್ದರು.

ಆರಂಭದಲ್ಲಿ ಮಹಾದೇವಿ ಅರಳಿ ಪ್ರಾರ್ಥಿಸಿದರು. ಸುರೇಶ ನರಗುಂದ ಸ್ವಾಗತಿಸಿದರು. ಉಪಾಧ್ಯಕ್ಷ ಸಂಗಮೇಶ ಅರಳಿ ನಿರೂಪಿಸಿದರು. ವಿ.ಕೆ. ಪಾಟೀಲ ವಂದಿಸಿದರು.

Share This Article
Leave a comment

Leave a Reply

Your email address will not be published. Required fields are marked *