ಬೆಳಗಾವಿ ವಚನ ಕಂಠಪಾಠ ಸ್ಪರ್ಧೆಯಲ್ಲಿ ನೂರಾರು ವಚನಗಳನ್ನು ಹೇಳಿದ ಮಕ್ಕಳು

ಬೆಳಗಾವಿ

ನಗರದಲ್ಲಿ ರವಿವಾರ ನಡೆದ ವಚನ ಕಂಠಪಾಠ ಸ್ಪರ್ಧೆಯಲ್ಲಿ 70 ಜನ ಮಕ್ಕಳು ಹಾಗೂ ವಯಸ್ಕರರು ಭಾಗವಹಿಸಿದ್ದರು.

180 ವಚನಗಳನ್ನು ಹೇಳಿದ ಕುಮಾರ ಶ್ರೇಯಸ್ಸ ಕುರಗುಂದಿ ಪ್ರಥಮ ಸ್ಥಾನ, 97 ವಚನ ಹೇಳಿದ ಶ್ರವಣಕುಮಾರ ದೇವರಮನಿ ದ್ವಿತೀಯ ಸ್ಥಾನ, 96 ವಚನ ಹೇಳಿದ ಸುಪ್ರೀತಾ ಕುಂಬಾರ ತೃತೀಯ ಸ್ಥಾನ ಗಳಿಸಿ ಎಲ್ಲರ ಮೆಚ್ಚುಗೆ ಪಡೆದರು.

ವಿಜೇತರಿಗೆ ಮುಂಬರುವ ಮಾಸಿಕ ಅನುಭಾವ ಗೋಷ್ಠಿಯಲ್ಲಿ ಬಹುಮಾನಗಳನ್ನು ವಿತರಣೆ ಮಾಡಲಾಗುವುದು ಎಂದು ತಿಳಿಸಲಾಯಿತು. ಹಾಗೂ ಭಾಗವಹಿಸಿದ ಎಲ್ಲ ಸ್ಪರ್ಧಾಳುಗಳಿಗೂ ಪ್ರಮಾಣ ಪತ್ರವನ್ನು ವಿತರಣೆ ಮಾಡಲಾಯಿತು.

ಸ್ಪರ್ಧೆ ಜಾಗತಿಕ ಲಿಂಗಾಯತ ಮಹಾಸಭಾ ಬೆಳಗಾವಿ ಮಹಾನಗರ ಹಾಗೂ ತಾಲೂಕ ಘಟಕಗಳ ವತಿಯಿಂದ ಶಿವಬಸವ ನಗರದ ಶ್ರೀ ಸಿದ್ದರಾಮೇಶ್ವರ ಪ್ರೌಢಶಾಲೆಯಲ್ಲಿ ಏರ್ಪಡಿಸಿಲಾಗಿತ್ತು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷರಾದ ಶರಣ ಬಸವರಾಜ ರೊಟ್ಟಿ ವಚನಗಳ ಕಂಠಪಾಠ ಮಾಡುವುದರಿಂದ ಮಕ್ಕಳಲ್ಲಿ ಸ್ಮರಣಶಕ್ತಿ ವೃದ್ಧಿಸುತ್ತದೆ ಎಂದು ಹೇಳಿದರು.

ಅದರೊಂದಿಗೆ ಉತ್ತಮ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಬಾಳಲು ಸಹಕಾರ ನೀಡುತ್ತವೆ. ಬಸವಾದಿ ಶರಣರ ಕಾಯಕ, ದಾಸೋಹ, ಅನುಭವ, ಅನುಭಾವದಿಂದ ವಚನಗಳು ಮೂಡಿ ಬಂದಿವೆ. ಮನುಷ್ಯನಲ್ಲಿರುವ ಮೌಢ್ಯವನ್ನು ವಚನಗಳು ದೂರಮಾಡಿ, ಬಾಳಲ್ಲಿ ಬೆಳಕು ನೀಡುತ್ತವೆ ಎಂದು ಹೇಳಿದರು.

ಪ್ರಾರಂಭದಲ್ಲಿ ಜಾಲಿಂ ಮಹಾಸಭಾದ ಮಹಾನಗರ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಎಂ. ಬೂದಿಹಾಳ ಸ್ವಾಗತಿಸಿದರು. ಸಂಚಾರಿ ಗುರು ಬಸವ ಬಳಗದ ಸಂಚಾಲಕರಾದ ಮಹಾಂತೇಶ ತೋರಣಗಟ್ಟಿ ಸ್ಪರ್ಧಾ ನಿಯಮಗಳನ್ನು ತಿಳಿಸಿದರು. ಬೆಳಗಾವಿ ಜಿಲ್ಲಾ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ರಾಜಶೇಖರ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕ ಘಟಕದ ಅಧ್ಯಕ್ಷ ಬಿ.ಜಿ ವಾಲಿಇಟಗಿ, ಪ್ರಾಯೋಜಕ ಬಸವರಾಜ ಮಿಂಡೊಳ್ಳಿ ಹಾಗೂ ಜಿಲ್ಲಾ ಖಜಾಂಚಿ ಮುರಿಗೆಪ್ಪ ಬಾಳಿ ವೇದಿಕೆಯ ಮೇಲಿದ್ದರು.

ಜಾ.ಲಿಂ ಮಹಾಸಭಾದ ಪದಾಧಿಕಾರಿಗಳಾದ ಆನಂದ ಕೊಂಡಗುರಿ, ಎಫ್. ಆರ್. ಪಾಟೀಲ, ಈರಣ್ಣ ಚಿನಗುಡಿ, ಸುಜಾತಾ ಮತ್ತಿಕಟ್ಟಿ, ನೈನಾ ಗಿರಿಗೌಡರ, ಕಾವೇರಿ ಕಿಲಾರಿ, ಶೋಭಾ ಶಿವಳ್ಳಿ, ಮಹಾದೇವಿ ಬೂದಿಹಾಳ, ಕೆಂಪಣ್ಣಾ ರಾಮಾಪುರಿ, ನೇತ್ರಾವತಿ ರಾಮಾಪುರಿ, ಭಾರತಿ ಪವಾಡೆಪಗೋಳ, ಮಹಾನಂದಾ ಪಾರುಶೆಟ್ಟಿ, ರಾಜಶ್ರೀ ದೇಯನ್ನವರ, ಬಿ. ಎಸ್. ಮತ್ತಿಕೊಪ್ಪ, ಶಿವಾನಂದ ಲಾಳಸಂಗಿ, ಎನ್.ಪಿ.ಉಪ್ಪಿನ, ಬಾಬುಗೌಡ ಪಾಟೀಲ, ಶರಣ ಹಿರೇಹೊಳಿ, ಸಿ.ಎಮ್. ಹುಬ್ಬಳ್ಳಿ, ಪಿ.ಎ. ರೊಟ್ಟಿ, ಮಹಾಸಭಾ, ಗುರುಬಸವ ಬಳಗದ ಸದಸ್ಯರು, ಶಿಕ್ಷಕರು, ಪಾಲಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ

https://chat.whatsapp.com/IxxC2m7AXyW84KPf73t5iL

Share This Article
Leave a comment

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ ಜಾಗತಿಕ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕ ಬೆಳಗಾವಿ.