ಬೆಂಗಳೂರು
”ಅಥಣಿಯ ಶ್ರೀ ಮುರುಘೇಂದ್ರ ಶಿವಯೋಗಿಗಳ ಜಯಂತ್ಯುತ್ಸವ’ ಹಾಗೂ ಬಸವೋತ್ಸವ’ ನವೆಂಬರ್ 14 ರಿಂದ 16ರವರೆಗೆ ವಿಜಯನಗರದ ಹಂಪಿನಗರ ಕ್ರೀಡಾಂಗಣದ ಚಂದ್ರಶೇಖರ ಅಜಾದ್ ವೇದಿಕೆಯಲ್ಲಿ ಪ್ರತಿದಿನ ಸಂಜೆ 6ಗಂಟೆಗೆ ಆಯೋಜಿಸಲಾಗಿದೆ.
‘ಅಥಣಿ ಸ್ವಾಮೀಜಿ ಬೇರೆಯಲ್ಲ, ಬಸವಣ್ಣ ಬೇರೆಯಲ್ಲ, ಬಸವಣ್ಣನ ವಚನಗಳನ್ನು ಪ್ರಚಾರ ಮಾಡಿದ ಅಥಣಿ ಶ್ರೀ ಅವರ ಚಿಂತನೆಗಳನ್ನು ನಗರದ ಜನರಿಗೆ ಪರಿಚಯಿಸಬೇಕೆಂಬ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದು ಯಾವುದೇ ಜಾತಿ ಧರ್ಮಕ್ಕೆ ಸೀಮಿತವಲ್ಲ’ ಎಂದು ಎಂದು ಗಚ್ಚಿನಮಠ ಶಿವಬಸವ ಸ್ವಾಮೀಜಿ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಸವೋತ್ಸವ ಕಾರ್ಯಕ್ರಮದಲ್ಲಿ ಎಲ್ಲಾ ಸಮುದಾಯಗಳ ಸ್ವಾಮೀಜಿಗಳು, ರಾಜಕೀಯ ನಾಯಕರು ಭಾಗವಹಿಸುವರು. ಬಸವಣ್ಣ ಮತ್ತು ಅಥಣಿ ಸ್ವಾಮೀಜಿ ಅವರ ಕುರಿತು ಚರ್ಚೆ, ಗೋಷ್ಠಿ ನಡೆಯಲಿದೆ. ಇತರೆ ಯಾವುದೇ ವಿಷಯ ಚರ್ಚೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಪ್ರತಿನಿತ್ಯ ಸಂಪನ್ಮೂಲ ವ್ಯಕ್ತಿಗಳು ಯುವಕರಿಗೆ ಸ್ಪೂರ್ತಿದಾಯಕ ಹಿತನುಡಿ ಹೇಳುವರು. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾದಾರ ಚೆನ್ನಯ್ಯ ಗುರುಪೀಠದ ಮಾದಾರ ಚೆನ್ನಯ್ಯ ಸ್ವಾಮೀಜಿ, ಹೊಸದುರ್ಗ ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ, ಬ್ಯಾಡಗಿ ವಿರಕ್ತಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಹೊಳಲ್ಕೆರೆ ಒಂಟಿಕಂಬದ ಮಠದ ತಿಪ್ಪೇರುದ್ರ ಸ್ವಾಮೀಜಿ, ಅನ್ನಪೂರ್ಣೇಶ್ವರಿ ಮಠದ ಬಸವಲಿಂಗ ಸ್ವಾಮೀಜಿ, ಡಿಎಕ್ಸ್ ಮ್ಯಾಕ್ಸ್ ಸಂಸ್ಥೆಯ ಮುಖ್ಯಸ್ಥ ದಯಾನಂದ, ರಾಷ್ಟ್ರೀಯ ಬಸವತತ್ವ ಪರಿಷತ್ತು ಅಧ್ಯಕ್ಷ ಅರುಣಕುಮಾರ ಮತ್ತಿತರರು ಉಪಸ್ಥಿತರಿದ್ದರು.

ರಾಜಕಾರಣಿಗಳು ಭಕ್ತರಾಗಿ ಪ್ರೇಕ್ಷಕರಾಗಿ ಬರ್ಲಿ… ವೇದಿಕೆ ಹತ್ತಿ ಮುಖ ತೋರಿಸೋದು ಬೇಡ… ಈಗಾಗ್ಲೇ 2017 ರಿಂದ ಇಲ್ಲೀವರ್ಗೆ ಮಾನ್ಯತೆ ಬಗ್ಗೆ ಇವ್ರ ರಾಜಕೀಯ ನಡೆ ಕಂಡು ಲಿಂಗಾಯತ ಸಮಾಜ ಬೇಸತ್ತಿದೆ.!