ಅಭಿಯಾನ: ಸಮಾರೋಪ ಸಿದ್ದತೆಯ ಬಗ್ಗೆ ಪೂರ್ವಭಾವಿ ಸಭೆಯಲ್ಲಿ ಚರ್ಚೆ

ಬೆಂಗಳೂರು

ನಗರದಲ್ಲಿ ಅಕ್ಟೊಬರ್ 5 ನಡೆಯಲಿರುವ “ಬಸವ ಸಂಸ್ಕೃತಿ ಅಭಿಯಾನ”ದ ಸಮಾರೋಪ ಸಮಾರಂಭದ ಸಿದ್ಧತೆಗಳನ್ನು ಚರ್ಚಿಸಲು ಪೂರ್ವಭಾವಿ ಸಭೆಯನ್ನು ಶನಿವಾರ ಬಸವನಗುಡಿಯ ನಿಜಗುಣಾನಂದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಗದಗಿನ ಶ್ರೀ ಸಿದ್ಧರಾಮ ಸ್ವಾಮೀಜಿ, ಬೇಲಿಮಠದ ಶಿವರುದ್ರ ಸ್ವಾಮೀಜಿ ಮತ್ತು ಬೆಂಗಳೂರು ಪ್ರಾಂತ್ಯದ ಹಲವಾರು ಸ್ವಾಮೀಜಿಗಳ ಮತ್ತು ಜೆಎಲ್ಎಂ ರಾಷ್ಟ್ರೀಯ ಮಹಾಕಾರ್ಯದರ್ಶಿ ಡಾ . ಜಮಾದಾರ್ ಅವರ ನೇತೃತ್ವದಲ್ಲಿ ಸಭೆ ನಡೆಯಿತು.

ಸಭೆಯಲ್ಲಿ ಇಲ್ಲಿಯವರೆಗೆ ಆಗಿರುವ ತಯಾರಿ ಬಗ್ಗೆ ಚರ್ಚಿಸಿ, ಮುಂದೆ ಮಾಡಬೇಕಾಗಿರುವ ಸಂಘಟನಾತ್ಮಕ ಕೆಲಸಗಳ ಬಗ್ಗೆ ಚರ್ಚಿಸಿ ಪ್ರಮುಖ ಜವಾಬ್ದಾರಿಗಳಾದ ಪ್ರಚಾರ, ಸಾರಿಗೆ, ವಸತಿ ಸೌಲಭ್ಯಗಳ ವ್ಯವಸ್ಥೆಯ ಬಗ್ಗೆ ವಿವರವಾಗಿ ಚರ್ಚಿಸಿ ಈ ಜವಾಬ್ದಾರಿಗಳನ್ನು ಆಯ್ದ ಪ್ರಮುಖ ವ್ಯಕ್ತಿಗಳಿಗೆ ವಹಿಸಲಾಯಿತು.

ಅಲ್ಲದೆ, ರಾಜ್ಯಾದ್ಯಂತ ಬರಲಿರುವ ಸುಮಾರು 500 ಮಠಾಧೀಶರುಗಳಿಗೆ ಸೂಕ್ತ ಮತ್ತು ಸುವ್ಯವಸ್ಥಿತ ವಸತಿ ವ್ಯವಸ್ಥೆಯ ಬಗ್ಗೆಯೂ ಚರ್ಚಿಸಿ ಅದರ ಜವಾಬ್ದಾರಿಯನ್ನು ಸ್ಥಳೀಯ ಮಠಾಧೀಶರುಗಳಿಗೆ ವಹಿಸಲಾಯಿತು.

ಸಮಾರೋಪ ಸಭೆಯಲ್ಲಿ ಭಾಗವಹಿಸುವ ಸಲುವಾಗಿ ರಾಜ್ಯಾದ್ಯಂತ ಬರಲಿರುವ ಶರಣ/ಶರಣೆಯರ ವಸತಿ ವ್ಯವಸ್ಥೆಯ ಬಗ್ಗೆಯೂ ಚರ್ಚಿಸಿ ಸೂಕ್ತ ವಸತಿ ಪ್ರದೇಶಗಳನ್ನು ಗುರುತಿಸಿ ವ್ಯವಸ್ಥೆ ಮಾಡುವ ಬಗ್ಗೆ ಚರ್ಚಿಸಲಾಯಿತು ಮತ್ತು ಕೆಲವು ಬಸವಪರ ಸಂಘಟನೆಗಳ ಪದಾಧಿಕಾರಿಗಳು ಅದರ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಾಗಿ ಮುಂದೆ ಬಂದರು.

ಸಮಾರಂಭ ನಡೆಯುವ ಸ್ಥಳದಲ್ಲಿ ಬಂದ ಅತಿಥಿಗಳಿಗೆ, ಆಸನ, ಊಟದ ವ್ಯವಸ್ಥೆ ನಿರ್ವಹಿಸುವಲ್ಲಿ ಮಾಡಬೇಕಾಗಿರುವ ಕೆಲಸಗಳ ಬಗ್ಗೆ ಚರ್ಚಿಸಿ ಅದಕ್ಕಾಗಿ ಶರಣ/ಶ್ರಣೆಯರ ಸ್ವಯಂಸೇವಕರ ಪಡೆಯನ್ನು ರಚಿಸುವ ಬಗ್ಗೆ ಯೋಜನೆ ಮಾಡಲಾಯಿತು.

ಅಥಣಿ ಮೋಟಗಿ ಮಠ ಚನ್ನಬಸವಶ್ರೀಗಳು, ಸಿದ್ಧಲಿಂಗ ಶ್ರೀಗಳು, ಪವಾಡ ಬಸವಣ್ಣದೇವರ ಮಠ ನೆಲಮಂಗಲ, ನಂಜುಂಡಸ್ವಾಮಿಗಳು ಶ್ರೀಗಳು ಗುರುವಣ್ಣದೇವರ ಮಾಡಿ, ಸಿದ್ಧಲಿಂಗ ಸ್ವಾಮಿಗಳು ವಿರಕ್ತಮಠ ಬಸವನಬಾಗೆವಾಡಿ ಸದ್ಗುರು ಬಸವಯೋಗಿ ಸ್ವಾಮೀಜಿ ಕುಂಬಳಗೋಡು ಬೆಂಗಳೂರು,
ಅರವಿಂದ ಜತ್ತಿ, ಬಸವ ಸಮಿತಿ, ಮಲ್ಲಿಕಾರ್ಜುನ, ಗಂಗಾಂಬಿಕೆ, ಡಿ ಎಸ್ ಪುಟ್ಟರಾಜು, ಪ್ರೋಫೆಸರ್ ವೀರಭದ್ರಯ್ಯ, ಜಾಗತಿಕ ಲಿಂಗಾಯತ ಮಹಾಸಭಾ, ಚಂದ್ರಮೌಳಿ ಎನ್, ರಾಷ್ಟ್ರೀಯ ಬಸವ ದಳ, ನವೀನ್ ಕುಮಾರ್, ವೀರಶೈವ ಮಹಾಸಭಾ ಯುವ ಘಟಕ, ಶಿವಣ್ಣ ಮಾಸ್ಟರ್, ಶರಣ ಸಾಹಿತ್ಯ ಪರಿಷತ್ತು, ಪಿನಕಪಾಣಿ, ವಚನ ಜ್ಯೋತಿ ಬೆಳಗ, ಎಸ್ ಎಂ ಸುರೇಶ್, ರಾಷ್ಟ್ರೀಯ ಬಸವ ಪ್ರತಿಷ್ಠಾನ, ಇನ್ನಿತರ ಬಸವಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LeqMgqmTFRYEVSrkuQhpeJ

Share This Article
Leave a comment

Leave a Reply

Your email address will not be published. Required fields are marked *