ಕೊಪ್ಪಳ
ನಗರದಲ್ಲಿ 16 ದಿನಗಳ ಹಿಂದೆ ಜೈನ ಧರ್ಮೀಯರ ಕಠೋರವಾದ ಸಲ್ಲೇಖನ ವ್ರತ ಕೈಗೊಂಡಿದ್ದ ಭಾಗ್ಯವಂತಿದೇವಿ (78) ಶುಕ್ರವಾರ ದೇಹತ್ಯಾಗ ಮಾಡಿದರು.
ಮಾಂಗೀಲಾಲ ಚೋಪ್ರಾ ಅವರ ಪತ್ನಿ ಭಾಗ್ಯವಂತಿದೇವಿ ತಮ್ಮ ಜೀವನದ ಸಾಂಸಾರಿಕ ಸುಖ–ದುಃಖಗಳನ್ನು ಎದುರಿಸಿ ಜೈನ ಧರ್ಮದ ನಿಯಮಾವಳಿ ಪ್ರಕಾರ ಸಲ್ಲೇಖನ ವ್ರತ ಕೈಗೊಂಡರು ಎಂದು ಅವರ ಸಂಬಂದಿಕರು ಹೇಳಿದರು.
ಶ್ವೇತಾಂಬರ ಜೈನ ಪರಂಪರೆಯ ಭಾಗ್ಯವಂತಿದೇವಿ ಸೆ.11ರಂದು ಮಧ್ಯಾಹ್ನ 3.41ಕ್ಕೆ ಸಲ್ಲೇಖನ ವೃತ ಆರಂಭಿಸಿದ್ದರು. ಶುಕ್ರವಾರವೇ ಅಂತ್ಯಕ್ರಿಯೆ ನೆರವೇರಿತು.
ಇದು ಬದುಕಿನ ಕೊನೆಯ ಘಟ್ಟದ ಕಠೋರ ವ್ರತವಾಗಿದ್ದು, ವ್ರತ ಕೈಗೊಂಡವರು ಒಂದು ಹನಿ ನೀರನ್ನೂ ಕುಡಿಯುವುದಿಲ್ಲ. ಧರ್ಮದ ಆರಾಧನೆಯಲ್ಲಿ ಮಾತ್ರ ತೊಡಗಿರುತ್ತಾರೆ’ ಎಂದು ಜೈನ್ ಸಮಾಜದ ಶ್ರೇಣಿಕ ಕುಮಾರ ಸುರಾಣಾ ಹೇಳಿದರು.