ವ್ಯಾಪಾರ ಮಾಡುವಾಗ ಮದ್ಯವರ್ತಿ ಬೇಕಾಗಬಹುದು ಆದರೆ ಧಾರ್ಮಿಕ ಕಾರ್ಯದಲ್ಲಿ ಅದರಲ್ಲೂ ಭಕ್ತ ಮತ್ತು ಭಗವಂತನ ಮದ್ಯೆ ಮದ್ಯವರ್ತಿ ಏಕೆ ಬೇಕು
ತಾಯಿ ಮತ್ತು ಮಗುವಿನ ಬಾಂಧವ್ಯದ ಮಧ್ಯ ಇನ್ನೊಬ್ಬ ದಲ್ಲಾಳಿ ಬೇಕೇ ಹಾಗೇನಾದರೂ ದಲ್ಲಾಳಿ ಬಂದರೆ ತಾಯಿ ಮತ್ತು ಮಗುವಿನ ನಡುವಿನ ಬಾಂಧವ್ಯ ಇರುವುದೇ ಇಲ್ಲ
ಹಾಗೆಯೇ ಭಕ್ತ ಮತ್ತು ಭಗವಂತನ ಮದ್ಯೆ ದಲ್ಲಾಳಿ ಬಂದರೆ ಭಕ್ತ ಮತ್ತು ಭಗವಂತನ ಮದ್ಯೆ ಸಂಭಂದ ಹದಗೆಟ್ಟು ಹೋಗುತ್ತದೆ
ಧಾರ್ಮಿಕ ಮಧ್ಯವರ್ತಿ ಬಗ್ಗೆ ಒಂದು ಸ್ವಾರಸ್ಯಕರ ಕಥೆ ಹೀಗಿದೆ
ರಮೇಶ ಎಂಬ ವಿಚಾರವಾದಿ ಮತ್ತು ಕಾಯಕ ಶೀಲ ಹಾಗೂ ಕ್ರಿಯಾಶೀಲ ವ್ಯಕ್ತಿ ಆರ್ಥಿಕವಾಗಿ ತುಂಬಾ ಸದೃಢವಾಗಿ ಇದ್ದ
ಆತ ಒಂದು ಬಹಳ ಸುಂದರವಾದ ಮನೆಯನ್ನು ಕಟ್ಟಿಸಿ ಪುರೋಹಿತರ ಬಳಿ ನೂತನ ಗೃಹ ಪ್ರವೇಶಕ್ಕೆ ದಿನ ನಿಗದಿ ಪಡಿಸಲು ಪಂಚಾಂಗ ಕೇಳಲು ಹೋದ
ಪುರೋಹಿತರು: ಬನ್ನಿ ರಮೇಶಪ್ಪನವರೆ ಅಪರೂಪಕ್ಕೆ ಬಂದಿದ್ದೀರಿ ಬನ್ನಿ
ರಮೇಶ: ಶರಣು ಸ್ವಾಮಿ ಶರಣು ತಮ್ಮ ಹತ್ತಿರ ಬರಲೇ ಬೇಕಲ್ಲವೇ ಬಂದಿದ್ದೇವೆ
ನಮ್ಮ ಹೊಸಮನೆ ಕೆಲಸ ಮುಗಿಯಿತು ಈಗ ಪ್ರವೇಶ ಮಾಡಬೇಕು ಅದಕ್ಕಾಗಿ ತಮ್ಮ ಹತ್ತಿರ ಬಂದಿದ್ದೇವೆ ಸ್ವಾಮಿಗಳೆ
ಪುರೋಹಿತರು; ಬನ್ನಿ ಒಳಗೆ ಹೋಗೋಣ
(ಪುರೋಹಿತರು ಮತ್ತು ರಮೇಶ್ ಅವರು ಪುರೋಹಿತರ ಮನೆಯಲ್ಲಿ ಪಂಚಾಂಗ ಶಾಸ್ತ್ರ ನೋಡುವ ಕೋಣೆಗೆ ಹೋದರು)
ರಮೇಶ್ ತಾಂಬೂಲ ಸಹಿತ ದಕ್ಷಿಣೆ ಕೊಟ್ಟು ಕೈ ಮುಗಿದು ಕುಳಿತ
ರಮೇಶ; ನೋಡಿ ಸ್ವಾಮಿಗಳೆ ಯಾವ ದಿನ ಸೂಕ್ತವಾಗಿದೆ ಅಂತ
ಪುರೋಹಿತರು ಹಾಳೆ ತಿರುವಿ ಹಾಗಿ ಬೆರಳು ಎಣಿಕೆ ಮಾಡಿ ಹಾಳೆಯಲ್ಲಿ ಬರೆದು ಲೆಕ್ಕ ಹಾಕಿದರು
ಪುರೋಹಿತರು: ರಮೇಶಪ್ಪ ಈ ಶ್ರಾವಣದ ಮೂರನೇ ಶುಕ್ರವಾರ ಬಹಳ ಪ್ರಶಸ್ತ್ಯವಾಗಿದೆ ಅಂದು ನೀವು ಗೃಹಪ್ರವೇಶ ಮಾಡಿ ಬಿಡಿ
ರಮೇಶ: ಅಯ್ಯೋ ಸ್ವಾಮಿಗಳೆ ಆಷಾಢದಲ್ಲಿ ನೋಡಿ ಹೇಳಿ ಶ್ರಾವಣದಲ್ಲಿ ನಮಗೆ ಆಗುವುದಿಲ್ಲ ಬಹಳ ಕೆಲಸ ಇದ್ದಾವೆ
ಪುರೋಹಿತರು: ಆಷಾಢದಲ್ಲಾ ಅದು ಹೇಗೆ ಸಾಧ್ಯ ಆಷಾಢ ಅಂದರೆನೇ ಅಪ ಶಕುನ ನೀವು ಹೋಗಿ ಹೋಗಿ ಆಷಾಡದಲ್ಲಿ ಕೇಳುತ್ತಿರಲ್ಲ ತಮಾಷೆ ಅಲ್ಲ ತಾನೆ
ರಮೇಶ; ತಮಾಷೆ ಹೇಗೆ ಸ್ವಾಮಿ ಆಷಾಡದಲ್ಲಿನೇ ನೋಡಿ ಸ್ವಲ್ಪ
ಪುರೋಹಿತರು: (ಪಂಚಾಂಗ ತಿರುಗಿಸಿ ಮತ್ತೆ ಏನೋ ಗುಣಾಕಾರ ಮಾಡಿ ಚಿತ್ರ ಬಿಡಿಸಿ ರಾಹು ಕೇತು ಶನಿ ಶುಕ್ಲ ಅಂತ ಒಂದೊಂದು ಮನೆಯಲ್ಲಿ ಬರೆದು) ನೋಡಪ್ಪಾ ಆಷಾಡದಲ್ಲಿ ಆಗೋದಿಲ್ಲ ರಾಹು ಎಂಟನೇ ಮನೆಯಲ್ಲಿ ಇದ್ದಾನೆ ಕೇತು ನಾಲ್ಕನೆಯ ಮನೆಯಲ್ಲಿ ಇದ್ದಾನೆ ಬುದು ಮೂರನೆ ಸ್ಥಾನದಲ್ಲಿದ್ದಾನೆ ಶುಕ್ರ ವಕ್ರವಾಗಿ ನೋಡುತಿದ್ದಾನೆ ಸಾಧ್ಯವೇ ಇಲ್ಲ
ರಮೇಶ: ಸ್ವಾಮಿಗಳೇ ಹಾಗೆನ್ನ ಬೇಡಿ ನೋಡಿ ನೀವು ಮನಸ್ಸು ಮಾಡಿದರೆ ಎಲ್ಲಾ ಆಗುತ್ತದೆ
ಪುರೋಹಿತರು: ಏನು ರಮೇಶಪ್ಪ ಇಷ್ಟೊಂದು ಅಶುಭ ಇರೋದನ್ನು ಸರಿ ಮಾಡೋಕೆ ಆಗೋದಿಲ್ಲ ಏನೋ ಒಂದೋ ಎರಡೋ ದೋಷ ಇದ್ದರೆ ಸರಿ ಮಾಡಬಹುದಿತ್ತು ಸಾಧ್ಯ ಇಲ್ಲ ಬಿಡು
ರಮೇಶ: ನೋಡಿ ಸ್ವಾಮಿಗಳೆ ಏನಾದರೂ ದಾನ ಕೊಟ್ಟರೆ ಸರಿ ಹೋಗಬಹುದು ಏನಾದರೂ ಆಗಲಿ ಆಷಾಡದಲ್ಲಿಯೇ ಮಾಡುವ ಹಾಗೆ ಇಟ್ಟುಕೊಡಿ
ಪುರೋಹಿತರು: ( ಮನಸ್ಸಿನಲ್ಲೇ ಈತ ಬೇರೆ ಬಾರಿ ದೊಡ್ಡ ಕುಳ ಸ್ವಲ್ಪ ಭಯ ಪಡಿಸಿದರೆ ಬಹಳ ದಾನ ಪಡಿಬಹುದು ಶಾಸ್ತ್ರ ಕೇಳೋಕೆ ನನ್ನ ಹತ್ತಿರ ಬಂದಿದ್ದಾನೆ ಅಂದರೆ ಫೂಜೆಗೂ ನನಗೇ ಕರಿತಾನೆ ಈಗ ಬೇರೆ ಆಷಾಢ ಒಳ್ಳೆಯ ಸಂಪಾದನೆ ಮಾಡಬಹುದು ಅಂದುಕೋಂಡು ) ನೋಡೋಣ ತಡಿ ರಮೇಶಪ್ಪ ( ಅಂತ ಹೇಳಿ ಮತ್ತೊಮ್ಮೆ ಗುಣಾಕಾರ ಮಾಡಿ ಚಿತ್ರ ಬಿಡಿಸಿ ಬಹಳ ಯೋಚನೆ ಮಾಡಿ ) ಎಲ್ಲಾ ಗ್ರಹಗತಿ ನೋಡಿದೆ ಆಶಾಡದ ಎರಡನೆ ಸೋಮವಾರ ಸ್ವಲ್ಪ ಉತ್ತಮ ಐತಿ ಆದರೆ ದಾನ ಮಾಡಬೇಕಾಗುತ್ತದೆ
ರಮೇಶ: ಅದೇನೇನು ಹೇಳಿ ಸ್ವಾಮಿ ಮಾಡೋಣ ಅಂದಂಗೆ ನೀವೇ ಪೂಜೆ ನಡಿಸಿಕೊಡಬೇಕು ನೋಡ್ರಿ ಇಲ್ಲ ಅನ್ನಬಾರದು
ಪುರೋಹಿತರು:( ಮನಸ್ಸಿನಲ್ಲಿ ಖುಷಿ ಪಡುತ್ತಾ) ಅದನ್ನು ಆಮೇಲೆ ನೋಡೋಣ ಈಗ ಧಾನದ ವಿಚಾರ ನೋಡೋಣ
ರಮೇಶಪ್ಪ: ಹೇಳಿ ಸ್ವಾಮಿ ಅದೇನು ಕೊಡಬೇಕು ಹೇಳಿ
ಪುರೋಹಿತರು; ಒಂದು ಕರು ಹಾಕಿದ ಆರೋಗ್ಯವಂತ ಹಾಲು ಕರೆಯುವ ಹಸು
ಎಲ್ಲವೂ ಹತ್ತು ಹತ್ತು ಕೇಜಿ ಇರುವ ನವ ದಾನ್ಯಗಳು
ಶನಿಯನ್ನು ಒಲಿಸಿಕೊಳ್ಳುಲು ಶನಿ ಸುತ್ತಾ ಇರುವ ರಿಂಗಿನಂತೆ ಬೆಳ್ಳಿಯ ದೊಡ್ಡ ರಿಂಗ್
ರೇಷ್ಮೆ ಸೀರೆ ಮತ್ತು ಪೀತಾಂಬರ ಇಷ್ಟು ಅಂತು ಮಾಡಲೇ ಬೇಕು ನೋಡಪ್ಪಾ ರಮೇಶಿ
ರಮೇಶ; ಕೊಡೋಣ ಬಿಡಿ ಸ್ವಾಮಿಗಳೆ ಈಗ ಪೂಜೆಗೆ ನೀವೇ ಬರಬೇಕು
ಪುರೋಹಿತರು : ನಾವು ಬರಬಹುದು ನಮ್ಮ ಪೀಸು 40000 ಆಗುತ್ತದೆ ( ಅಷ್ಟೊಂದು ದಾನನೇ ಒಪ್ಪಿಕೊಂಡ ಮೇಲೆ ಇದನ್ನು ಒಪ್ಪಲ್ಲವೇ ಎಂದು ಮನಸ್ಸಿನಲ್ಲಿ ಅಂದುಕೊಂಡರು)
ರಮೇಶ: ಅಷ್ಟೊಂದಾ ಸ್ವಾಮಿಗಳೆ ಅಷ್ಟೊಂದು ಏಕೆ
ಪುರೋಹಿತರು: ನೋಡು ರಮೇಶಿ ನಾವು ಮಂತ್ರ ಹೇಳಿದರೆ ದೇವರು ಒಪ್ಪವಂತೆ ಹೇಳುತ್ತೇನೆ ನಿಮ್ಮ ಕಷ್ಟ ಎಲ್ಲಾ ಪರಿಹಾರ ಆಗುವಂತ ಮಂತ್ರಗಳನ್ನೇ ಹೇಳುತ್ತೇನೆ ಅದಕ್ಕೇ
ರಮೇಶ: ಓ ಹಾಗಾ ಸ್ವಾಮಿ ಹಾಗಾದರೆ ಆಗ ಬಹುದು
ನೋಡಿ ನಂದು ಒಂದು ಕಂಡೀಷನ್ ಇದೆ
ಪುರೋಹಿತರು: ಏನು ಹೇಳಿ ನಿಮ್ಮ ಕಂಡೀಷನ್
ರಮೇಶ: ನಾನು ಹೇಳಿ ಕೇಳಿ ವ್ಯವಾರಸ್ಥ ನಮಗೆ ಎಲ್ಲಾ ದಾಖಲೆಯಲ್ಲಿ ಇರಬೇಕು ನಮ್ಮ ಒಪ್ಪಂದವೂ ದಾಖಲೆಯಲ್ಲಿ ಇರಬೇಕು ಅದಕ್ಕೆ ಅಗ್ರಿಮೆಂಟ್ ಆಗಬೇಕು
ಪುರೋಹಿತರು ; ಓ ಅದಕ್ಕೇನಂತೆ ಆಗ ಬಹುದು
ರಮೇಶ ಮಾರನೆಯ ದಿನ ಒಂದು ಛಾಪ ಕಾಗದದಲ್ಲಿ ನಿನ್ಪೆ ದಿನ ಪುರೋಹಿತರು ಹೇಳಿದ ಎಲ್ಲಾ ವಿಷಯಗಳನ್ನು ಟೈಪ್ ಮಾಡಿಸಿಕೊಂಡು ಬಂದು ಪುರೋಹಿತರ ಬಳಿ ಓದಿ ಸಹಿ ಮಾಡಿಸಿಕೊಂಡ
ಗೃಹ ಪ್ರವೇಶದ ದಿನ ಬಂತು ಪುರೋಹಿತರು ರಮೇಶನ ಮನೆಯ ಹತ್ತಿರ ಬಂದರು
ಅಲ್ಲಿ ದಾನ ಕೊಡಲು ಒಂದು ಸುಂದರವಾದ ಹಾಗೂ ಆರೋಗ್ಯದಿಂದ ಕೂಡಿದ ಹಸು ಮತ್ತು ಕರು ಇತ್ತು ಮುಂದೆ ಬಂದರೆ ಮೊರದಲ್ಲಿ ಬೆಳ್ಳಿಯ ಎರಡು ದೊಡ್ಡ ಕಡಗಗಳು ಇದ್ದವು
ಇನ್ನೂ ಮುಂದೆ ಮೊರದಲ್ಲಿ ರೇಷ್ಮೆಯ ಸೀರೆ ಜರತಾರಿ ಪಂಚೆ ಅಂಗಿ ಇದ್ದವು ಇವುಗಳನ್ನು ನೋಡಿದ ಪುರೋಹಿತರು ಪುಲ್ ಖುಷಿ ಇವೆಲ್ಲವೂ ಏನಿಲ್ಲ ಅಂದರೂ ಲಕ್ಷದ ಮೇಲೆ ಆಗುತ್ತದೆ ಮನೆಗೆ ಹೋದ ಮೇಲೆ ಮಗನಿಗೆ ಪೋನ್ ಮಾಡಿ ಹೇಳಬೇಕು ನಿನ್ನ ತಿಂಗಳ ಸಂಪಾದನೆ ಒಂದು ಲಕ್ಷ ಆದರೆ ನನ್ನ ಇವತ್ತು ಒಂದು ದಿನದ ಸಂಪಾದನೆ ಲಕ್ಷಕ್ಕಿಂತಲೂ ಹೆಚ್ಚು ಅಂತ ಆಸೆಯಿಂದ ಒಳಗೆ ಹೋದರು
ಒಳಗೆ ಹೋಗುವಾಗ ಈ ಕಡೆಯಲ್ಲಿ ಈ ಊರಿನ ಅತ್ಯಂತ ಬಡವ ಚನ್ನಪ್ಪ ಇವರ ಹೊಲದಲ್ಲಿ ಕೆಲಸ ಮಾಡುವ ರಾಜಪ್ಪ ಹಾಗೂ ಸಿದ್ದಪ್ಪ ಮನೆಯಲ್ಲಿ ಕೆಲಸ ಮಾಡುವ ನಿಂಗಪ್ಪ ಆತನ ಹೆಂಡತಿ ಕೂತಿರುವುದನ್ನು ನೋಡಿ ಶ್ರೀಮಂತರ ಮನೆಯ ಊಟ ಮಾಡೋಕೆ ಬಂದಿರಬೇಕು ಅಂದಕೊಂಡರು
ರಮೇಶ: ಸ್ವಾಮಿ ಗಳೇ ಮೊದಲು ದಾನ ಆಗಲಿ ಆಮೇಲೆ ಪೂಜೆ
ಪುರೋಹಿತರು: ಇಲ್ಲ ಇಲ್ಲ ನಾವು ಮೊದಲು ಪೊಜೆ ಹೋಗುವಾಗ ದಾನದ ಪದ್ಧತಿ
ರಮೇಶ: ದೋಷ ಇದೆ ಅಲ್ಲವೇ ಮೊದಲು ದಾನ ಆಗಿಬಿಡಲಿ
ಪುರೋಹಿತರು: ( ಮನಸ್ಸಿನಲ್ಲಿ ಯಾವಾಗ ಆದರೂ ನಾನೇ ತಾನೆ ದಾನ ಪಡೆಯೋದು ಕೊಡುವವರು ಕೊಡುವಾಗ ಪಡೆದು ಬಿಡೋಣ ಅಂದುಕೊಂಡು) ಆಗಲಿ ಆಗಲಿ ಎಂದು ಹೊರಗೆ ಬಂದರು
ರಮೇಶ: ಸ್ವಾಮಿ ನೀವು ಮಂತ್ರ ಹೇಳಿ (ಸ್ವಾಮೀಜಿ ಮಂತ್ರ ಹೇಳುವಾಗ ನಿಂಗಪ್ಪ ಮತ್ತು ಆತನ ಹೆಂಡತಿಗೆ ರೇಷ್ಮೆ ಸೀರೆ ಜರತಾರಿ ಪಂಚೆ ರಾಜಪ್ಪ ಹಾಗೂ ಸಿದ್ದಪ್ಪ ನಿಗೆ ಬೆಳ್ಳಿಯ ದೊಡ್ಡ ಕಡಗ ಚನ್ನಪ್ಪನಿಗೆ ಹಸುವನ್ನು ರಮೇಶ ದಾನವಾಗಿ ಕೊಟ್ಟೇ ಬಿಟ್ಟ
ಪುರೋಹಿತರು: (ಕೋಪದಿಂದ ) ರಮೇಶಪ್ಪ ಏನು ಮಾಡಿದಿರಿ ನೀವು ದಾನ ಯಾವಾಗಲೂ ಪುರೋಹಿತರು ಪಡೆಯಬೇಕು ಉಳಿದವರೆಲ್ಲರೂ ದಾನ ಕೊಡಬೇಕು
ರಮೇಶ: ಸ್ವಾಮಿ ನೀವು ದಾನ ಕೊಡಬೇಕು ಅಂತ ಹೇಳಿದ್ದೇ ವಿನಃ ಯಾರಿಗೆ ಕೊಡಬೇಕು ಅಂತ ಹೇಳಲಿಲ್ಲ ಅವರು ಯೋಗ್ಯರೇ ಅವರಿಗೆ ಕೊಟ್ಟರೆ ಮಾತ್ರ ಒಳ್ಳೆಯದು ಆಗುತ್ತದೆ ನಡಿರಿ ಪೂಜೆ ಮಾಡೋಣ ( ಎಂದು ಪುರೋಹಿತರ ಪ್ರತಿಕ್ರಿಯೆಗೆ ಕಾಯದೆ ಒಳಗೆ ಬಂದ)
ಪುರೋಹಿತರು: ( ಅಯ್ಯೋ ಹೀಗಾಯಿತು ನೋಡು ಅಂತ ಬೇಸರ ಮಾಡಿಕೊಂಡು ಆಗಿದ್ದು ಆಯಿತು ಪೂಜೆ ಆದರೂ ಮಾಡಿ ನಲವತ್ತು ಸಾವಿರ ಪಡೆಯೋಣ ಅಂತ ಒಳಗೆ ಹೋಗಿ ಮಂತ್ರ ಸೇಳಲು ಪ್ರಾರಂಭ ಮಾಡಿದರು)
ರಮೇಶ: ಸ್ವಾಮೀಜಿ ನೀವು ಯಾವ ಮಂತ್ರ ಹೇಳುತಿದ್ದೀರಿ ನಮಗೆ ಬರೆದು ಕೊಟ್ಟ ಅಗ್ರಿಮೆಂಟ್ ನಲ್ಲಿ ಏನಂತ ಹೇಳಿದ್ದೀರಿ ನೆನಪಿದೆಯಾ
ಪುರೋಹಿತರು ; ಪೂಜೆಯ ಮಂತ್ರ ವನ್ನೇ ಹೇಳುತಿದ್ದೇವೆ
ರಮೇಶ: ನಮ್ಮ ಕಷ್ಟ ಹೋಗುವ ಮಂತ್ರ ಹೇಳಬೇಕು ನೀವು
ನಮ್ಮ ಬೋರ್ ವೆಲ್ ನೀರು ಬತ್ತಿದೆ ಅದು ನೀರು ಚುಮ್ಮಿ ಬರುವ ಹಾಗೆ ಮಂತ್ರ ಹೇಳಬೇಕು
ನಮ್ಮ ಅಜ್ಜಿ ಓಡಾಡುತ್ತಿಲ್ಲ ನಮ್ಮ ಅಜ್ಜಿ ಓಡಾಡಲು ಆಗುವಂತೆ ಮಂತ್ರ ಹೇಳಬೇಕು
ನಮ್ಮ ಮಗನಿಗೆ ಹೆಣ್ಣು ಸಿಗುತ್ತಿಲ್ಲ ನಮ್ಮ ಮಗನಿಗೆ ಹೆಣ್ಣು ಕೊಡುವವರು ಓಡೋಡಿ ಬರುವಂತೆ ಮಂತ್ರ ಹೇಳಬೇಕು
ಇಲ್ಲ ಅಂದರೆ ನೀವು ಕೊಟ್ಟ ಅಗ್ರಿಮೆಂಟ್ ಇಟ್ಟುಕೊಂಡು ಕೋರ್ಟಿಗೆ ಹೋಗುತ್ತೇನೆ
ಪುರೋಹಿತರು: ಅಯ್ಯೋ ರಾಮ ರಾಮ ನನ್ನ ಬಿಟ್ಟು ಬಿಡಪ್ಪ ನಾವು ಮನೆಗೆ ಹೋಗುತ್ತೇನೆ ಯಾವ ಪೂಜೆನೂ ಬೇಡ ಮಂತ್ರನೂ ಬೇಡ ದಕ್ಷಿಣೆನೂ ಬೇಡ (ಭಯದಿಂದ ನಡುಗುತ್ತಾ)
ರಮೇಶ: ನಿಲ್ಲಿ ಸ್ವಾಮಿಗಳೆ ನಿಮ್ಮ ಬಗ್ಗೆ ನಮಗೆ ಗೌರವ ಇದೆ ಆದರೆ ನೀವು ಜನರನ್ನು ದೇವರು ಧರ್ಮದ ಹೆಸರಿನಲ್ಲಿ ಮಾಡುವ ಶೋಷಣೆಗೆ ನಮ್ಮ ಧಿಕ್ಕಾರ ಇದೆ ನೀವು ಗೃಹ ಪ್ರವೇಶ ಮಾಡಿಕೊಂಡು ಪ್ರಸಾದ ಮಾಡಿಕೊಂಡು ದಕ್ಷಿಣೆ ಪಡೆದು ಹೋಗುವಿರಂತೆ ಎಂದು ಸಮಾಧಾನ ಮಾಡಿ
ಈಗಾಗಲೇ ಸಿದ್ಧತೆ ಮಾಡಿಕೊಂಡಂತೆ ಬುದ್ಧ ಬಸವ ಅಂಬೇಡ್ಕರ್ ಕುವೆಂಪು ಅವರ ಭಾವಚಿತ್ರದೊಂದಿಗೆ ಮನೆಯೊಳಗೆ ಪ್ರವೇಶ ಮಾಡಿ ಅವರ ಭಾವ ಚಿತ್ರಗಳಿಗೆ ಪುಷ್ಪ ಹಾಕಿ ಪುರೋಹಿತರಿಗೆ ಗೌರವ ಧನ ಕೊಟ್ಟು ತಮ್ಮದೇ ವಾಹನದಲ್ಲಿ ಅವರ ಮನೆಗೆ ಕಳುಹಿಸಿ ದರು
ಶರಣ ಬಂಧುಗಳೇ ಬಸವಣ್ಣನವರು ಹೇಳಿದಂತೆ ತನ್ನಾಶ್ರಯದ ರತಿ ಸುಖವನ್ನು ಅಂದರೆ ಸತಿ ಪತಿಗಳ ಸುಖವನ್ನು ನಾವು ಮಾಡಬೇಕಾದ ಊಟವನ್ನು ನಾವೇ ಮಾಡ ಬೇಕಲ್ಲದೆ ಬೇರೆಯ ಮದ್ಯವರ್ತಿ ಸಹಾಯದಿಂದ ಮಾಡಲು ಹೇಗೆ ಬರುವುದಿಲ್ಲವೋ ಹಾಗೆ ದೇವರು ಮತ್ತು ಭಕ್ತರ ಮಧ್ಯೆ ದಲ್ಲಾಳಿಗಳು ಬೇಡ ಎಂದು ಸಾರಿದ್ದಾರೆ: ತನ್ನಾಶ್ರಯದ ರತಿಸುಖವನು, ತಾನುಂಬ ಊಟವನು ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ ತನ್ನ ಲಿಂಗಕ್ಕೆ ಮಾಡುವ ನಿತ್ಯನೇಮವ ತಾ ಮಾಡಬೇಕಲ್ಲದೆ ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ ಕೆಮ್ಮನೆ ಉಪಚಾರಕ್ಕೆ ಮಾಡುವರಲ್ಲದೆ ನಿಮ್ಮನೆತ್ತಬಲ್ಲರು, ಕೂಡಲಸಂಗಮದೇವಾ.
ತುಂಬಾ ಮಾಮಿ೯ಕವಾದ ಕತೆ ಜೈ ಬಸವೇಶ
excellent.