ಭಾಲ್ಕಿಯಲ್ಲಿ ಡಾ.ಚನ್ನಬಸವ ಪಟ್ಟದ್ದೇವರ 135ನೆಯ ಜಯಂತ್ಯುತ್ಸವ

ಬಸವ ಮೀಡಿಯಾ
ಬಸವ ಮೀಡಿಯಾ

ಭಾಲ್ಕಿ

ಈ ಭಾಗದ ನಡೆದಾಡುವ ದೇವರು, ಕಾಯಕಯೋಗಿ, ನೂತನ ಅನುಭವಮಂಟಪದ ಶಿಲ್ಪಿ, ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರು ಪೂಜ್ಯ ಶ್ರೀ ಡಾ.ಚನ್ನಬಸವ ಪಟ್ಟದ್ದೇವರ ೧೩೫ನೆಯ ಜಯಂತ್ಯುತ್ಸವ ಉದ್ಘಾಟನಾ ಸಮಾರಂಭ ಪೂಜ್ಯ ಶ್ರಿ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು, ಅಧ್ಯಕ್ಷರು, ಅನುಭವಮಂಟಪ ಬಸವಕಲ್ಯಾಣ ಅವರ ದಿವ್ಯಸಾನಿಧ್ಯದಲ್ಲಿ ಅರ್ಥಪೂರ್ಣವಾಗಿ ಜರುಗಿತು. ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ದಿವ್ಯನೇತೃತ್ವ ವಹಿಸಿದ್ದರು.

ದೀಪ ಬೆಳಗಿಸಿ ಉದ್ಘಾಟನೆ ಮಾಡಿದ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಉಪಲೋಕಾಯುಕ್ತರು, ಕರ್ನಾಟಕ ಸರಕಾರ ಅವರು ಮಹಾನುಭಾವರ ಜಯಂತಿ ಆಚರಿಸುವುದೆಂದರೆ, ಅವರ ದಿವ್ಯ ಬದುಕಿನ ಪರಿಚಯ ಹಾಗೂ ಅವರ ಸಾಧನೆಗಳ ಪ್ರೇರಣೆ ಸಾರ್ವಜನಿಕರ ಮೇಲೆ ಮೂಡಿಸುವುದೇ ಆಗಿದೆ ಎಂದರು. ಬೀದರ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನ್ಯಾಯಾಧೀಶ ಪ್ರಕಾಶ ಬನಸೋಡೆ, ಡಾ.ಗಿರೀಶ ಬದೋಲೆ ಇದ್ದರು.

ಗದಗ ಸಾಹಿತಿ ಡಾ.ಸಿದ್ಧು ಯಾಪಲಪರವಿ ಅವರು ತಮ್ಮ ಅನುಭಾವ ನುಡಿಯಲ್ಲಿ ಜೀವನದಲ್ಲಿ ಬದಲಾವಣೆಗಳು ನಿರಂತರ ಆಗುತ್ತವೆ. ಆ ನಿಟ್ಟಿನಲ್ಲಿ ಭಾಲ್ಕಿ ಶ್ರೀಮಠದ ಪೂಜ್ಯ ಗುರುತ್ರಯರು ತಮ್ಮ ತಮ್ಮ ಜೀವಿತಾವಧಿಯಲ್ಲಿ ಮಾಡಿದ ಬಸವತತ್ವ ಪ್ರಸಾರ ಕಾರ್ಯ ಮತ್ತು ಶೈಕ್ಷಣಿಕ ಸೇವೆ ಅನನ್ಯವಾಗಿದೆ ಎಂದರು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗುರುತರವಾದ ಸೇವೆಗೈದ ಡಾ.ರಾಮನಗೌಡ, ಡಾ.ಪ್ರಶಾಂತ ಅಳ್ಳೆ, ಡಾ.ವಿವೇಕ ನಿಂಬೂರ, ಡಾ.ವಿ.ವಿ.ನಾಗರಾಜ, ಜಿ.ಬಿ.ವಿನಯಕುಮಾರ ಮತ್ತು ಪ್ರಕಾಶ ಅಂಗಡಿ ಅವರಿಗೆ ವಿಶೇಷ ಜರುಗಿತು.

ಬೆಳಗಿನ ಜಾವ ಹಿರೇಮಠ ಸಂಸ್ಥಾನದಿಂದ ಚನ್ನಬಸವಾಶ್ರಮವರೆಗೆ ಬಸವ ಪ್ರಭಾತ ಫೇರಿ ಪೂಜ್ಯರ ನೇತೃತ್ವದಲ್ಲಿ ಶ್ರೀಮಠದ ಸದ್ಭಕ್ತರೊಂದಿಗೆ ಸರಳ ರೀತಿಯಲ್ಲಿ ನಡೆಯಿತು. ಚನ್ನಬಸವಾಶ್ರಮದಲ್ಲಿ ಭಾಲ್ಕಿ ಪುರಸಭೆ ಅಧ್ಯಕ್ಷ ಶಶಿಕಲಾ ಅಶೋಕ ಸಿಂಧನಕೆರೆ ಷಟ್‌ಸ್ಥಲ ಧ್ವಜಾರೋಹಣ ನಡೆಯಿತು. ಅಕ್ಕನಬಳಗದ ಶರಣೆಯರಿಂದ ತೊಟ್ಟಿಲು ಕಾರ್ಯಕ್ರಮ ಜರುಗಿತು.

ಹಿರಿಯ ನ್ಯಾಯವಾದಿ ರಾಜಶೇಖರ ಅಷ್ಟೂರೆ, ರೋಟರಿ ಕ್ಲಬ್ ಅಧ್ಯಕ್ಷ ಸಂಜುಕುಮಾರ ಪಂಡರಗೇರೆ, ವಿಜಯಕುಮಾರ ರಾಜಭವನ, ಸಂಗಮೇಶ ಕಾರಬಾರಿ ಉಪಸ್ಥಿತರಿದ್ದರು. ನೀಲಮ್ಮ ವಿ.ಕೆ.ಪಾಟೀಲ ಅವರಿಂದ ಬಸವಗುರುಪೂಜೆ ನೆರವೇರಿತು. ಶಶಿಧರ ಕೋಸಂಬೆ ಸ್ವಾಗತಿಸಿದರು. ಲೋಕನಾಥ ಚಾಂಗ್ಲೇರ ಮತ್ತು ಸಂಗಡಿಗರಿAದ ವಚನ ಸಂಗೀತ ನಡೆಯಿತು. ಅನುಭವಮಂಟಪ ಸಂಸ್ಕೃತಿ ವಿದ್ಯಾಲಯ ಮಕ್ಕಳಿಂದ ವಚನ ನೃತ್ಯ ಜರುಗಿತು. ಮದನ್ ಗಾಂವಕರ ನಿರೂಪಿಸಿದರು. ಸಿದ್ದರಾಮೇಶ್ವರ ಪಾಟೀಲ ವಂದಿಸಿದರು.

ಪ್ರಶಸ್ತಿ ಪ್ರದಾನ, ಗ್ರಂಥ ಲೋಕಾರ್ಪಣೆ

ಪೂಜ್ಯ ಶ್ರೀ ಡಾ.ಚನ್ನಬಸವ ಪಟ್ಟದ್ದೇವರ ೧೩೫ನೆಯ ಜಯಂತ್ಯುತ್ಸವ ಭಾಗವಾಗಿ ಪ್ರಶಸ್ತಿ ಪ್ರದಾನ ಮತ್ತು ಗ್ರಂಥ ಲೋಕಾರ್ಪಣೆ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದ ದಿವ್ಯಸನ್ನಿಧಾನವನ್ನು ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಮತ್ತು ಪೂಜ್ಯ ಶ್ರೀ ಪ್ರಭು ಮಹಾಸ್ವಾಮಿಗಳು ಸಂಡೂರ ವಹಿಸಿದ್ದರು. ಉರಿಲಿಂಗಪೆದ್ದಿ ಮಠ ಕೊಡ್ಲಾ ಮಠದ ಜ್ಞಾನಪ್ರಕಾಶ ಮಹಾಸ್ವಾಮಿಗಳು ದಿವ್ಯಸಮ್ಮುಖ ವಹಿಸಿದ್ದರು.

ಈ ಭಾಗದ ಜಿಲ್ಲಾ ಮುಖ್ಯ ಆಯುಕ್ತರು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಬೀದರ ನಗರದ ಡಾ.ಗುರುಮ್ಮ ಸಿದ್ಧಾರೆಡ್ಡಿ ಅವರಿಗೆ ಪ್ರಸಕ್ತ ಸಾಲಿನ ಡಾ.ಚನ್ನಬಸವ ಪಟ್ಟದ್ದೇವರು ಕಾಯಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯ ದಾಸೋಹಗಳು ಡಿ.ಕೆ.ಸಿದ್ರಾಮ ಅವರು ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿಶಾಸಕ ಪ್ರಕಾಶ ಖಂಡ್ರೆ, ಯುವಮುಖಂಡರ ಬಾಬು ವಾಲಿ, ಶಕುಂತಲಾ ಬೆಲ್ದಾಳೆ ಭಾಗವಹಿಸಿದ್ದರು.

ಕಲ್ಯಾಣ ಉಳಿವು, ಚಿನ್ನದ ನಾಡಿನ ಶರಣರು, ಮಹಾತ್ಮ ಬಸವರಕೆ ವಚನ, ಗುರುಚನ್ನಬಸವ, ಕಾಯಕಯೋಗಿಗಳು ಎಂಬ ಐದು ಗ್ರಂಥಗಳು ಲೋಕಾರ್ಪಣೆಗೊಂಡರು. ಈ ಕೃತಿಗಳ ಲೇಖಕರಾದ ಕೊರಗಲ್ ವಿರೂಪಾಕ್ಷಪ್ಪ, ಡಾ.ನಾಗರಾಜ ಹೀರಾ, ಶೋಭಾ ಶ್ರೀಮಂತ ಬಶೆಟ್ಟೆ, ಸಂಗಮೇಶ ಜವಾದಿ ಮತ್ತು ಜಯಶೆಟ್ಟಿ ಪರಿವಾರದ ಸದಸ್ಯರು ಅವರಿಗೆ ಸನ್ಮಾನಿಸಲಾಯಿತು.

ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸೇವೆಗೈದ ನಂದಕುಮಾರ ದಾಶಟವಾರ, ಮಲ್ಲಿಕಾರ್ಜುನ ರಗಟೆ, ಅಶೋಕ ಜುಬರೆ ಅವರಿಗೆ ಸನ್ಮಾನಿಸಲಾಯಿತು. ವಿಶೇಷ ಆಹ್ವಾನಿತರಾಗಿ ಡಾ.ಶಶಿಧರ ತೊರಕರ್, ಡಾ.ಕೆ.ರವೀಂದ್ರನಾಥ, ಪುಷ್ಪಾ ಭಾಲಚಂದ್ರ ಜಯಶೆಟ್ಟಿ, ರವಿಶಂಕರ ಕೊರಗಲ್ ಇದ್ದರು.

ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಮಹಾವಿದ್ಯಾಲಯ ಮಕ್ಕಳಿಂದ ವಚನ ನೃತ್ಯ ಗಮನ ಸೆಳೆಯಿತು. ಸಂಗಯ್ಯ ಸ್ವಾಮಿ, ಹಾವಗಿ ಶರಣರು ಮುಂತಾದವರಿAದ ವಚನ ಸಂಗೀತ ನಡೆಯಿತು. ನವಲಿಂಗ ಪಾಟೀಲ ನಿರೂಪಿಸಿದರು. ಜಗನ್ನಾಥ ಚಿಟಮೆ ವಂದಿಸಿದರು.

Share This Article
Leave a comment

Leave a Reply

Your email address will not be published. Required fields are marked *